Subscribe to Gizbot

ಹೊಸ ಆವೃತ್ತಿಯೊಂದಿಗೆ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್: ಫೆ.20 ರಿಂದ ಸೇಲ್..!

Posted By: -

ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ನೋಕಿಯಾ 6 ಸ್ಮಾರ್ಟ್ ಫೋನಿನ ನೂತನ ಆವೃತ್ತಿ ಬಿಡುಗಡೆಯಾಗಿದ್ದು, ರೂ.16,999ಕ್ಕೆ ದೊರೆಯುತ್ತಿದೆ. ಈ ಸ್ಮಾರ್ಟ್ ಫೋನ್ ಹೊಸದಾಗಿ 4GB RAM ಮತ್ತು 64GB ಇಂಟರ್ ನಲ್ ಮೆಮೊರಿಯೊಂದಿಗೆ ಕಾಣಿಸಿಕೊಂಡಿದ್ದು, ಫೆಬ್ರವರಿ 20ನೇ ತಾರೀಖಿನಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. ಅದಲ್ಲದೇ ಎಕ್ಸ್ ಕ್ಲೂಸಿವ್ ಆಗಿ ಫ್ಲಿಪ್ ಕಾರ್ಟ್ ನಲ್ಲಿ ಮಾತ್ರವೇ ಮಾರಾಟವಾಗುತ್ತಿದೆ.

ಹೊಸ ಆವೃತ್ತಿಯೊಂದಿಗೆ ನೋಕಿಯಾ 6 ಸ್ಮಾರ್ಟ್ ಫೋನ್ ಲಾಂಚ್

ಈ ಹಿಂದೆ ನೋಕಿಯಾ 6 ಸ್ಮಾರ್ಟ್ ಫೋನ್ 3GB RAM ಮತ್ತು 32GB ಇಂಟರ್ನಲ್ ಮೆಮೊರಿಯೊಂದಿಗೆ ಕಾಣಿಸಿಕೊಂಡಿತ್ತು ಮತ್ತು ರೂ.14,999ಕ್ಕೆ ಮಾರಾಟವಾಗುತ್ತಿತ್ತು. ಆದರೆ ಈಗ ಹೊಸದಾಗಿ ನೋಕಿಯಾ 6 ಆವೃತ್ತಿಯನ್ನು ನೋಕಿಯಾ ಬಿಡುಗಡೆ ಮಾಡಿದೆ, ಈ ಹಿಂದೆ ನೋಕಿಯಾ 6 ಅಮೆಜಾನ್ ನಲ್ಲಿ ಕಾಣಿಸಿಕೊಂಡಿತ್ತು, ನೂತನ ಆವೃತ್ತಿ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ.

ಓದಿರಿ: ಯಾರಿಗೂ ನಿಮ್ಮ ನಂಬರ್ ತಿಳಿಯದಂತೆ ಕಾಲ್ ಮಾಡುವುದು ಹೇಗೆ..?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್ ಪ್ಲೇ ಮತ್ತು ವಿನ್ಯಾಸ:

ಡಿಸ್ ಪ್ಲೇ ಮತ್ತು ವಿನ್ಯಾಸ:

ನೋಕಿಯಾ 6 ಸ್ಮಾರ್ಟ್ ಫೋನ್ ಯೂನಿ ಮೆಟಲ್ ಬಾಡಿ ವಿನ್ಯಾಸವನ್ನು ಹೊಂದಿದ್ದು, ಅಲ್ಯೂಮಿನಿಯಮ್ ನಿಂದ ಮಾಡಲಾದ ದೇಹವನ್ನು ಹೊಂದಿದೆ. ಅಲ್ಲದೇ 5.5 ಇಂಚಿನ FHD ಡಿಸ್ ಪ್ಲೇಯನ್ನು ಹೊಂದಿದೆ. ಅಲ್ಲದೇ 2.5D ಕರ್ವಡ್ ಗ್ಲಾಸ್ ಸುರಕ್ಷತೆಯನ್ನು ಕಾಣಬಹುದಾಗಿದೆ.

ಹಾರ್ಡ್ ವೇರ್:

ಹಾರ್ಡ್ ವೇರ್:

ನೋಕಿಯಾ 6 ಸ್ಮಾರ್ಟ್ ಫೋನ್ ನಲ್ಲಿ ಸ್ನಾಪ್ ಡ್ರಾಗನ್ 430 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, ಇದರೊಂದಿಗೆ 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಇದರದಲ್ಲಿ ಅಳವಡಿಸಲಾಗಿದೆ.

ಸಾಫ್ಟ್ ವೇರ್ ಮತ್ತು ಕ್ಯಾಮೆರಾ:

ಸಾಫ್ಟ್ ವೇರ್ ಮತ್ತು ಕ್ಯಾಮೆರಾ:

ನೋಕಿಯಾ 6 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಸದ್ಯ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಹಿಂಭಾಗದಲ್ಲಿ 16MP ಆಟೋ ಫೋಕಸ್ ಕ್ಯಾಮೆರಾವನ್ನು ಹೊಂದಿದೆ. ಮುಂಭಾಗದಲ್ಲಿ 8MP ಕ್ಯಾಮೆರಾವನ್ನು ನೀಡಲಾಗಿದೆ. ಅಲ್ಲದೇ ಸುಲಭವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia 6 with 4GB RAM to go on sale in India on February 20 exclusively via Flipkart. t0 know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot