ಒನ್‌ಪ್ಲಸ್ 5 ಗೆ ಸ್ಪರ್ಧೆ ನೀಡಲು ಬಂತು ಟಾಪ್ ಎಂಡ್ ನೋಕಿಯಾ 8: ಬಿಡುಗಡೆ ದಿನಾಂಕ ಫಿಕ್ಸ್

ನೋಕಿಯಾ ಬಿಡುಗಡೆ ಮಾಡಿರುವುದು ಬಜೆಟ್ ಮತ್ತು ಮಧ್ಯಮ ಸರಣಿಯ ಫೋನ್ ಗಳಾಗಿದ್ದು, ಈಗ ಟಾಪ್ ಎಂಡ್ ಫೋನ್ ಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

|

HDM ಗ್ಲೂಬಲ್ ಸಂಸ್ಥೆಯೂ ಈಗಾಗಲೇ ಭಾರತದಲ್ಲಿ ಮೂರು ನೋಕಿಯಾ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಮೂರು ಫೋನ್ ಗಳು ಒಂದು ಮಾದರಿಯಲ್ಲಿ ಬಜೆಟ್ ಮತ್ತು ಮಧ್ಯಮ ಸರಣಿಯ ಫೋನ್ ಗಳಾಗಿದ್ದು, ಈಗ ಟಾಪ್ ಎಂಡ್ ಫೋನ್ ಗಳನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಒನ್‌ಪ್ಲಸ್ 5 ಗೆ ಸ್ಪರ್ಧೆ ನೀಡಲು ಬಂತು ನೋಕಿಯಾ 8: ಬಿಡುಗಡೆ ದಿನಾಂಕ ಫಿಕ್ಸ್

ಓದಿರಿ: ಜಿಯೋಗೆ ಸೆಡ್ಡು: ಜುಲೈ 19ಕ್ಕೆ ರೂ.999ಕ್ಕೆ ನೋಕಿಯಾ ಫೀಚರ್ ಫೋನ್ ಬಿಡುಗಡೆ..!!!

ನೋಕಿಯಾ 8 ಮತ್ತು ನೋಕಿಯಾ 9 ಸ್ಮಾರ್ಟ್‌ಫೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು, ಈ ಫೋನ್ ಗಳು ಹೇಗಿರಲಿದೆ ಎನ್ನುವ ಮಾಹಿತಿಯೂ ಲೀಕ್ ಆಗಿದೆ. ಬನ್ನಿ ನೋಕಿಯಾದ ಟಾಪ್ ಎಂಡ್ ಫೋನ್ ಗಳ ವಿಶೇಷತೆ ಏನೆಂಬುದನ್ನು ನೋಡುವ.

ಜುಲೈ 31ಕ್ಕೆ ನೋಕಿಯಾ 8 ಲಾಂಚ್:

ಜುಲೈ 31ಕ್ಕೆ ನೋಕಿಯಾ 8 ಲಾಂಚ್:

ನೋಕಿಯಾ 8 ಸ್ಮಾರ್ಟ್‌ಫೋನ್ ಕುರಿತು ಮಾಹಿತಿಯನ್ನು ಲೀಕ್ ಮಾಡಿರುವ ಜರ್ಮನ್ ವೆಬ್ ಸೈಟ್ ವೊಂದು ಜುಲೈ 31ಕ್ಕೆ ನೋಕಿಯಾ 8 ಬಿಡುಗಡೆಯಾಗಲಿದೆ ಎಂದು ಮಾಹಿತಿಯನ್ನು ನೀಡಿದೆ.

ನೋಕಿಯಾ 8 ವಿನ್ಯಾಸ ಹೇಗಿದೆ..?

ನೋಕಿಯಾ 8 ವಿನ್ಯಾಸ ಹೇಗಿದೆ..?

ನೋಡಲು ಒಂದು ಭಾಗದಿಂದ ನೋಕಿಯಾ 6 ಮಾದರಿಯಲ್ಲಿ ಕಾಣಿಸುವ ನೋಕಿಯಾ 8, ಸ್ವಲ್ಪ ದೊಡ್ಡದಾಗಿದೆ ಎನ್ನಲಾಗಿದೆ. ಅದಕ್ಕಿಂತಲೂ ದೊಡ್ಡ ಡಿಸ್‌ಪ್ಲೇ ಹೊಂದಿರುವುದು ಇದಕ್ಕೆ ಕಾರಣವಾಗಿದೆ. ಉತ್ತಮವಾದ ವಿನ್ಯಾಸವನ್ನು ನೋಕಿಯಾ 8 ಹೊಂದಿದೆ ಎನ್ನಬಹುದಾಗಿದೆ.

5.8 ಇಂಚಿನ 2K ಡಿಸ್‌ಪ್ಲೇ:

5.8 ಇಂಚಿನ 2K ಡಿಸ್‌ಪ್ಲೇ:

ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ 5.8 ಇಂಚಿನ 2K ರೆಸಲ್ಯೂಷನ್ ಹೊಂದಿರುವ ಡಿಸ್‌ಪ್ಲೇ ಕಾಣಬಹುದಾಗಿದೆ. ಅಲ್ಲದೇ ಇದು ಆಂಡ್ರಾಯ್ಡ್ 7.1.1 ನಲ್ಲಿ ಕಾರ್ಯನಿರ್ವಹಿಸಲಿದೆ.

ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್:

ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್:

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಹಿಂಭಾಗದ ಕ್ಯಾಮೆರಾವನ್ನು ನೋಕಿಯಾ 8 ನಲ್ಲಿಯೂ ಕಾಣಬಹುದಾಗಿದೆ. ನೋಕಿಯಾ ಕ್ಯಾಮೆರಾಗಳು ಎಂದಿಗೂ ಬೆಸ್ಟ್ ಎನ್ನುವ ಮಾತಿದೆ. ಅದಕ್ಕಾಗಿಯೇ ನೋಕಿಯಾ 13 MP ಯ Carl Zeiss ಲೆನ್ಸ್ ಗಳನ್ನು ತನ್ನ ನೊಕಿಯಾ 8 ಸ್ಮಾರ್ಟ್‌ಫೋನಿನಲ್ಲಿ ಅಳವಡಿಸಿದೆ.

ಫ್ಲಾಷ್ ಲೈಟ್ ಸಹ ಇದೆ:

ಫ್ಲಾಷ್ ಲೈಟ್ ಸಹ ಇದೆ:

ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ ಹಾರಿಜಂಟಲ್ ಡ್ಯುಯಲ್ ಕ್ಯಾಮೆರಾ ಇದ್ದು, ಕ್ಯಾಮೆರಾ ಕೆಳಭಾಗದಲ್ಲಿ ಸಿಂಗಲ್ LED ಫ್ಲಾಷ್ ಲೈಟ್ ಅನ್ನು ನಾವು ಕಾಣಬಹುದಾಗಿದೆ.

4GB RAM-64GB ROM:

4GB RAM-64GB ROM:

ನೋಕಿಯಾ 8 ಸ್ಮಾರ್ಟ್‌ಫೋನಿನಲ್ಲಿ ವೇಗದ ಕಾರ್ಯಚರಣೆಗಾಗಿ 4GB RAM ಅಳವಡಿಸಲಾಗಿದ್ದು, ಇದರೊಂದಿಗೆ 64GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ. ಇದು ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಮಾದರಿಯಲ್ಲಿ ದೊರೆಯಲಿದೆ.

ನೋಕಿಯಾ 8 ಸ್ಮಾರ್ಟ್‌ಫೋನಿನ ಬೆಲೆ:

ನೋಕಿಯಾ 8 ಸ್ಮಾರ್ಟ್‌ಫೋನಿನ ಬೆಲೆ:

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ನೋಕಿಯಾ 8 ಸ್ಮಾರ್ಟ್‌ಫೋನಿನ ಬೆಲೆ ರೂ.44,000 ಆಗಲಿದೆ. ಆದರೆ ಇದು ಅಂತಿಮ ಬೆಲೆಯಲ್ಲ, ಫೋನ್ ಲಾಂಚ್ ಆಗುವ ಸಂದರ್ಭದಲ್ಲಿ ಬೆಲೆ ಏರಿಕೆ - ಇಳಿಕೆ ಆಗಬಹುದು.

Best Mobiles in India

Read more about:
English summary
HDM Global, a company that is responsible for manufacturing Nokia Android phone is reportedly working on two new high-end phones - Nokia 8 and Nokia 9. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X