ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಚಾರ್ಜ್ ನೀಡಲಿದೆಯಂತೆ 'ನೋಕಿಯಾ 8110' 4G ಪೋನ್!!

  ಬಾರ್ಸಿಲೋನಾದಲ್ಲಿ ನಡೆದ 2018ನೇ ವಿಶ್ವ ಮೊಬೈಲ್‌ ಸಮ್ಮೇಳನದಲ್ಲಿ ನೋಕಿಯಾ ಕಂಪೆನಿ ಮತ್ತೆ ಗರಿಗೆದರಿದೆ. ಇಡೀ ಜಗತ್ತನ್ನು ಅಂಗೈನಲ್ಲಿಯೇ ತೋರಿಸುವ ಮೊಬೈಲ್ ಮಾರುಕಟ್ಟೆಯಲ್ಲಿ ಕೆಲ ವರ್ಷಗಳಿಂದ ಹಿಂದೆ ಉಳಿದಿದ್ದ 'ನೋಕಿಯಾ' ಕಂಪೆನಿ ಹೊಸ ಮಾದರಿಯ ಮೊಬೈಲ್‌ಗಳನ್ನು 2018ರಲ್ಲಿ ಅನಾವರಣ ಮಾಡಿದೆ.!!

  ಹೌದು, ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಕೆಲ ವರ್ಷಗಳಿಂದ ಹಿಂದೆ ಉಳಿದಿದ್ದ 'ನೋಕಿಯಾ' ಕಂಪೆನಿ 1996ರಲ್ಲೇ ನೋಕಿಯಾ ಬಿಡುಗಡೆಯಾಗಿದ್ದ 'ನೋಕಿಯಾ 8110' ಮಾದರಿಯ ಫೋನ್‌ ಅನ್ನು ಮತ್ತೆ ನೂತನ ಫೀಚರ್ಸ್ ಮತ್ತು ವಿನ್ಯಾಸವನ್ನು ನೀಡಿ ಬಿಡುಗಡೆ ಮಾಡಿದೆ. ಹೊಸ ಮಾದರಿ ಫೋನ್‌ ಮೂಲಕ ಮತ್ತೆ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ.!!

  ಒಮ್ಮೆ ಚಾರ್ಜ್‌ ಮಾಡಿದರೆ 25 ದಿನ ಚಾರ್ಜ್ ನೀಡಲಿದೆಯಂತೆ 'ನೋಕಿಯಾ 8110' 4G ಪೋನ್!

  ಕೀಪ್ಯಾಡ್‌ಗೆ ಸ್ಲೈಡಿಂಗ್ ಕವಚ ಹೊಂದಿರುವ 'ನೋಕಿಯಾ 8110' ಅನ್ನು 4ಜಿ ವ್ಯವಸ್ಥೆ ಯೊಂದಿಗೆ ಇದೀಗ ಬಿಡುಗಡೆ ಮಾಡಲಾಗಿದ್ದು, ಹಾಗಾದರೆ, ನೂತನ 'ನೋಕಿಯಾ 8110' 4ಜಿ ಫೋನ್ ಫೀಚರ್ಸ್ ಯಾವುವು? ಫೋನಿನ ಇತರೆ ವಿಶೇಷತೆಗಳೇನು? ಫೋನಿನ ಬೆಲೆ ಎಷ್ಟು ಎಂಬೆಲ್ಲಾ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬಾಳೆ ಹಣ್ಣಿನ ವಿನ್ಯಾಸದಲ್ಲಿ ಫೋನ್!!

  ಮಾರುಕಟ್ಟೆಗೆ ಹಳದಿ ಬಣ್ಣದಲ್ಲಿ ಬಿಡುಗಡೆಯಾಗಿರುವ ‘ನೋಕಿಯಾ 8110' ಮೊಬೈಲ್‌ ವಿನ್ಯಾಸ ಬಾಳೆ ಹಣ್ಣಿನಂತೆ ಸ್ವಲ್ಪ ಬಾಗಿದೆ. ಇನ್ನು ಕೀಪ್ಯಾಡ್‌ಗೆ ಸ್ಲೈಡಿಂಗ್ ಕವಚವನ್ನು ನೀಡಲಾಗಿದ್ದು, ಕೀಪ್ಯಾಡ್‌ಗೆ ಕವಚದಂತಿರುವ ಸ್ಲೈಡರ್‌ ಮೂಲಕವೇ ಕರೆ ಸ್ವೀಕರಿಸುವುದು ಅಥವಾ ರದ್ದುಪಡಿಸುವುದು ಈ ಮೊಬೈಲ್‌ನಲ್ಲಿ ಸಾಧ್ಯವಿದೆ.!!

  ನೋಕಿಯಾ 8110 ಡಿಸ್‌ಪ್ಲೇ!!

  ಬಾಗಿರುವ 2.4 ಇಂಚು ಡಿಸ್‌ಪ್ಲೇ, ಪಾಲಿಕಾರ್ಬೊನೇಟ್ ಮೇಲ್ಪದರ ಹಾಗೂ 2.4 ಕರ್ವಡ್ ಡಿಸ್‌ಪ್ಲೇಯನ್ನು ‘ನೋಕಿಯಾ 8110' ಮೊಬೈಲ್ನಲ್ಲಿ ನೀಡಲಾಗಿದೆ. ಬೇಸಿಕ್ 4G ಮೊಬೈಲ್‌ಗಳಲ್ಲಿ ಅತ್ಯುತ್ತಮ ಡಿಸ್‌ಪ್ಲೇ ಹೊಂದಿರುವ ಮೊಬೈಲ್ ಇದಾಗಿದೆ ಎಂದು ಹೇಳಬಹುದು.!!

  ‘ನೋಕಿಯಾ 8110’ ಫೀಚರ್ಸ್?

  1.1 ಗಿಗಾಹರ್ಟ್ಸ್ ಕ್ವಾಲ್‌ಕಾಮ್‌ ಡ್ಯುಯಲ್‌ ಕೋರ್‌ ಪ್ರೊಸೆಸರ್ 512 ಎಂಬಿ RAM ಹಾಗೂ 4ಜಿಬಿ ಮೆಮೊರಿಯನ್ನು ನೋಕಿಯಾ 8110 ಮೊಬೈಲ್‌ನ ಹೊಂದಿದೆ. 2 ಎಂಪಿ ಕ್ಯಾಮೆರಾ ಮತ್ತು ಮೈಕ್ರೋ ಮತ್ತು ನ್ಯಾನೊ ರೀತಿಯ ಎರಡು ಸಿಮ್ ಸ್ಲಾಟ್‌ಗಳನ್ನು ಮೊಬೈಲ್‌ನಲ್ಲಿ ನೀಡಲಾಗಿದೆ.!!

  ಬ್ಯಾಟರಿ ಶಕ್ತಿ ಎಷ್ಟು?

  ಒಮ್ಮೆ ಚಾರ್ಜ್‌ ಮಾಡಿದರೆ 25 ದಿನಗಳ ವರೆಗೂ ಉಳಿಯುವ ಬ್ಯಾಟರಿಯನ್ನು (ಸ್ಟ್ಯಾಂಡ್‌ಬೈ) ನೋಕಿಯಾ 8110 ಮೊಬೈಲ್‌ನಲ್ಲಿ ನೀಡಲಾಗಿದೆ ಎಂದು ನೋಕಿಯಾ ಕಂಪೆನಿ ಹೇಳಿಕೊಂಡಿದೆ. ಮೊಬೈಲ್‌ನಲ್ಲಿ ಅತ್ಯುತ್ತಮ 1500 ಎಂಎಎಚ್ ಶಕ್ತಿಯ ಬ್ಯಾಟರಿಯನ್ನು ಅಳವಡಿಸಲಾಗಿದೆ.!!

  ನೋಕಿಯಾ 8110 ವಿಶೇಷವೇನು?

  4ಜಿ ಬಳಕೆಗೆ ಅನುಕೂಲವಾಗುವಂತೆ ನೋಕಿಯಾ 8110 ಮೊಬೈಲ್‌ ರೂಪಿಸಲಾಗಿದ್ದು, ಗೂಗಲ್‌ ಸರ್ಚ್, ಗೂಗಲ್‌ ಅಸಿಸ್ಟಂಟ್, ಗೂಗಲ್‌ ಮ್ಯಾಪ್‌, ಫೇಸ್‌ಬುಕ್‌ ಹಾಗೂ ಟ್ವಿಟರ್ ಸೇರಿದಂತೆ ಅನೇಕ ಆಪ್‌ಗಳನ್ನು ಬಳಸಲು ಮೊಬೈಲ್‌ನಲ್ಲಿ ಸಾಧ್ಯವಿದೆ.!!

  How To Link Aadhaar With EPF Account Without Login (KANNADA)
  ಭಾರತವೇ ಟಾರ್ಗೆಟ್!!

  ಭಾರತವೇ ಟಾರ್ಗೆಟ್!!

  ಹೆಚ್ಚು ಜನಸಂಖ್ಯೆ ಹಾಗೂ ಮೊಬೈಲ್‌ ಮಾರುಕಟ್ಟೆ ವಿಸ್ತರಣೆ ಸಾಧ್ಯತೆ ಹೊಂದಿರುವ ಭಾರತದಂತಹ ದೇಶಗಳನ್ನೇ ಗಮನದಲ್ಲಿಟ್ಟುಕೊಂಡು ನೂತನ ‘ನೋಕಿಯಾ 8110' 4ಜಿ ಫೋನ್ ಬಿಡುಗಡೆ ಮಾಡಲಾಗಿದೆ. ಅಂದಾಜು 6,300 ರೂ(79 ಯೂರೋ) ಬೆಲೆ ಹೊಂದಿರುವ ಈ ಫೋನ್ ಭಾರತೀಯರ ಗಮನಸೆಳೆಯಲಿದೆಯೇ ಎಂಬುದನ್ನು ನೋಡಬೇಕು.!!

  ಓದಿರಿ:ಜಿಯೋ '4G ಲ್ಯಾಪ್‌ಟಾಪ್‌' ಬಿಡುಗಡೆಗೆ ಸಮಯ ಫಿಕ್ಸ್!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Last year at MWC, HMD Global launched the newly resurrected Nokia on a global scale.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more