ನೋಕಿಯಾ ಆಶಾ 305 ಕೇವಲ 4,668 ರೂಪಾಯಿ

By Varun
|
ನೋಕಿಯಾ ಆಶಾ 305 ಕೇವಲ 4,668 ರೂಪಾಯಿ

ಸ್ಯಾಮ್ಸಂಗ್ ಗೆ ನಂ. 1 ಪಟ್ಟ ಬಿಟ್ಟುಕೊಟ್ಟು ಹೋಗಿರುವ ಮಾನ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನೋಕಿಯಾ ಕಂಪನಿ ಆಶಾ ಸರಣಿಯ ಮೂಲಕ ಮತ್ತೆ ಚೇತರಿಸಿಕೊಳ್ಳಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಿದೆ.

ಈಗಾಗಲೇ ಆಶಾ ಸರಣಿಯ ಹಲವಾರು ಮೊಬೈಲುಗಳನ್ನು ಪರಿಚಯಿಸಿರುವ ಬಗ್ಗೆ ನೀವು ಕನ್ನಡ ಗಿಜ್ಬಾಟ್ ನಲ್ಲಿ ಓದಿದ್ದೀರಿ. ಈಗ ಆ ಸರಣಿಯಲ್ಲಿ ಟಚ್ ಸ್ಕ್ರೀನ್ ಇರುವ ಮೊದಲ ಫೋನ್ ಆದ ಆಶಾ 305 ದ್ವಿಸಿಮ್ ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಮನರಂಜನೆಯನ್ನು ಬಯಸುವ ಮನಸ್ಸುಗಳಿಗೆ ಇಷ್ಟವಾಗುವ ಈ ಮೊಬೈಲ್ ಫೋನ್ ನಲ್ಲಿ ಯಾಹೂ ಮೆಸೆಂಜರ್, ವಿಂಡೋಸ್ ಲೈವ್, ಗೂಗಲ್ ಟಾಕ್ ಚಾಟ್ ಇದ್ದು, 14 ಗಂಟೆ ಟಾಕ್ ಟೈಮ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ನೋಕಿಯಾ ಆಶಾ 305 ನ ಫೀಚರುಗಳು ಈ ರೀತಿ ಇವೆ:

  • 3 ಇಂಚ್ ರೆಸಿಸ್ಟಿವ್ ಟಚ್ ಸ್ಕ್ರೀನ್

  • 240 X 400 ಪಿಕ್ಸೆಲ್ ರೆಸಲ್ಯೂಶನ್

  • ಎರಡು ಸಿಮ್ ಬೆಂಬಲ

  • 2 ಮೆಗಾ ಪಿಕ್ಸೆಲ್ ಕ್ಯಾಮೆರಾ

  • 10 MB ಆಂತರಿಕ ಮೆಮೊರಿ

  • ಮೈಕ್ರೋ SD ಕಾರ್ಡ್ ಸ್ಲಾಟ್ ಮೂಲಕ 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ.

  • 40 ಪ್ರೀ ಲೋಡೆಡ್ ಗೇಮ್ಸ್

  • ಪ್ರೀ ಲೋಡೆಡ್ ನೋಕಿಯಾ ಮ್ಯಾಪ್ಸ್

  • 1100 mAh ಬ್ಯಾಟರಿ

ನೋಕಿಯಾ ಆನ್ಲೈನ್ ಮಳಿಗೆಯಲ್ಲಿ 4,668 ರೂಪಾಯಿಗೆ ನೀವು ಖರೀದಿ ಮಾಡಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X