ಭಾರತದಲ್ಲಿ ಬಿಡುಗಡೆ ಆಯ್ತು ಮೊದಲ ನೋಕಿಯಾ ಪೋನ್: ಅಮೆಜಾನ್‌ನಲ್ಲಿ ಲಭ್ಯ..!!

ನೋಕಿಯಾ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುವ ಸಂದರ್ಭದಲ್ಲಿ ಸ್ಮಾರ್ಟ್‌ಪೋನುಗಳೊಂದಿಗೆ ಸಾಮಾನ್ಯ ಪೋನುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿತ್ತು

|

ನೋಕಿಯಾ ಮತ್ತೆ ಮಾರುಕಟ್ಟೆಯನ್ನು ಪ್ರವೇಶಿಸಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ಆದರೆ ನೋಕಿಯಾ ಸ್ಮಾರ್ಟ್‌ಪೋನುಗಳು ಇನ್ನು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಲ್ಲ. ಏಪ್ರಿಲ್ ಅಂತ್ಯದಲ್ಲಿ ಇಲ್ಲವೇ ಮಾರ್ಚ್ ಆರಂಭದಲ್ಲಿ ಭಾರತದಲ್ಲಿ ಈ ಪೋನುಗಳು ಲಭ್ಯವಿರಬಹುದು. ಆದರೆ ಅಮೆಜಾನ್‌ನಲ್ಲಿ ಮೊದಲ ನೋಕಿಯಾ ಪೋನ್ ಲಭ್ಯವಿದೆ.

ಭಾರತದಲ್ಲಿ ಬಿಡುಗಡೆ ಆಯ್ತು ಮೊದಲ ನೋಕಿಯಾ ಪೋನ್: ಅಮೆಜಾನ್‌ನಲ್ಲಿ ಲಭ್ಯ..!!

ಓದಿರಿ: ನೀವಿನ್ನು ಜಿಯೋ ಪ್ರೈಮ್ ಸದಸ್ಯರಾಗಿಲ್ಲವೇ..? ಹಾಗಿದ್ದರೆ ನೀವು ಈ ಸ್ಟೋರಿ ಓದಲೇ ಬೇಕು

ನೋಕಿಯಾ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುವ ಸಂದರ್ಭದಲ್ಲಿ ಸ್ಮಾರ್ಟ್‌ಪೋನುಗಳೊಂದಿಗೆ ಸಾಮಾನ್ಯ ಪೋನುಗಳನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸುವುದಾಗಿ ತಿಳಿಸಿತ್ತು ಈ ಹಿನ್ನಲೆಯಲ್ಲಿ ಭಾರತದಲ್ಲಿ ಕಡಿಮೆ ಬೆಲೆಯ ಫೋನುಗಳಿಂದಲೇ ಗುರುತಿಸಿಕೊಂಡಿದ್ದ ನೋಕಿಯಾ ಮತ್ತೆ ಅದೇ ಹಾದಿಯಲ್ಲಿದೆ.

ಮೊದಲ ನೋಕಿಯಾ ಪೋನ್ 'ನೋಕಿಯಾ 150':

ಮೊದಲ ನೋಕಿಯಾ ಪೋನ್ 'ನೋಕಿಯಾ 150':

ಸೆಂಬರ್‌ನಲ್ಲಿ HMD ಗ್ಲೋಬಲ್ ಕಂಪನಿಯೂ ಘೋಷನೆ ಮಾಡಿದಂತೆ ಭಾರತದಲ್ಲಿ ನೋಕಿಯಾದ ಮೊದಲ ಫೋನನ್ನು ಬಿಡುಗಡೆ ಮಾಡಿದ್ದು, 'ನೋಕಿಯಾ 150' ಹೆಸರಿನ ಡುಯಲ್ ಸಿಮ್ ಪೋನನ್ನು ಪರಿಚಯಿಸಿದೆ. ನೋಕಿಯಾದೊಂದಿಗೆ 10 ವರ್ಷಗಳ ಕಾಲ ಪೋನ್ ಮಾರಾಟದ ಒಪ್ಪಂದ ಮಾಡಿಕೊಂಡಿರುವ HMD ಗ್ಲೋಬಲ್ ಕಂಪನಿ ವಿಶ್ವದಲ್ಲಿ ನೋಕಿಯಾ ಪೋನುಗಳನ್ನು ಬಿಡುಗಡೆ ಮಾಡುತ್ತಿದೆ.

ನೋಕಿಯಾ 150' ಡುಯಲ್ ಸಿಮ್ ಪೋನಿನ ಕುರಿತು:

ನೋಕಿಯಾ 150' ಡುಯಲ್ ಸಿಮ್ ಪೋನಿನ ಕುರಿತು:

ನೋಕಿಯಾ 150' ಡುಯಲ್ ಸಿಮ್ ಪೋನು ಪ್ಲಾಸ್ಟಿಕ್ ದೇಹವನ್ನು ಹೊಂದಿದೆ. 2.4 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಹಿಂಭಾಗದಲ್ಲಿ VGA ಕ್ಯಾಮರೆ ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ. ಅಲ್ಲದೇ 1020 mAh ಬ್ಯಾಟರಿ ಸಹ ಅಳವಡಿಸಲಾಗಿದೆ. ಒಂದು ತಿಂಗಳ ಬ್ಯಾಟರಿ ಪ್ಯಾಕಪ್ ನೀಡುವ ಬ್ಯಾಟರಿ ಇದಾಗಿದೆ. ಮೈಕ್ರೋ USB ಚಾರ್ಜಿಂಗ್ ಸೌಲಭ್ಯವನ್ನು ಇದು ಹೊಂದಿದೆ.

ನೋಕಿಯಾ 150' ಡುಯಲ್ ಸಿಮ್ ಪೋನಿನ ವಿಶೇಷತೆ:

ನೋಕಿಯಾ 150' ಡುಯಲ್ ಸಿಮ್ ಪೋನಿನ ವಿಶೇಷತೆ:

ನೋಕಿಯಾ 150' ಡುಯಲ್ ಸಿಮ್ ಪೋನಿನಲ್ಲಿ ಮೈಕ್ರೋ SD ಕಾರ್ಡ್ ಹಾಕಿಕೊಳ್ಳುವ ಮೂಲಕ 32GB ವರೆಗೆ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ಈ ಫೋನಿನಲ್ಲಿ Bluetooth 3.0 ಸೇರಿದಂತೆ FM radio ಮತ್ತು MP3 player ಸಹ ನೀಡಲಾಗಿದೆ. ಇದಲ್ಲದೇ ಟೈಮ್ ಪಾಸಿಗೆ ಗೇಮ್‌ಗಳನ್ನು ನೀಡಲಾಗಿದೆ. ಒಟ್ಟಿನಲ್ಲಿ ಇದೊಂದು ಒಳ್ಳೆಯ ಪೋನಾಗಿದೆ.

 ಅಮೇಜಾನ್ ನಲ್ಲಿ ಈ ಪೋನ್ ಲಭ್ಯ;

ಅಮೇಜಾನ್ ನಲ್ಲಿ ಈ ಪೋನ್ ಲಭ್ಯ;

ಭಾರತದಲ್ಲಿ ಬಿಡುಗಡೆಯಾಗಿರುವ ಈ ನೋಕಿಯಾ ಪೋನ್ ಸದ್ಯಕ್ಕೆ ಆನ್‌ಲೈನಿನಲ್ಲಿ ಮಾತ್ರವೇ ಲಭ್ಯವಿದೆ. ರೂ.1,950 ಬೆಲೆ ಈ ಪೋನಿಗೆ ನಿಗಧಿಯಾಗಿದೆ. ಈ ಪೋನಿನೊಂದಿಗೆ ಇಯರ್ ಪೋನ್‌ ಮತ್ತು ಚಾರ್ಜರ್ ಸಹ ದೊರೆಯಲಿದೆ.

Best Mobiles in India

Read more about:
English summary
Nokia 150 Dual SIM feature phone, which was announced in December last year by HMD Global, in now available for purchase in India through Amazon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X