ಓನ್‌ಪ್ಲಸ್ 5 ಬಳಕೆದಾರರಿಗೆ ಸಿಹಿ ಸುದ್ದಿ
ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಬಳಕೆದಾರಿಗೆ ಕಹಿ ಸುದ್ದಿಯೊಂದಿದೆ. ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ O ಕಟ್ಟಕಡೆಯ ಆಪ್‌ಡೇಟ್ ಆಗಿರಲಿದೆ.
ಮೊನ್ನೆ ತಾನೇ ಬಿಡುಗಡೆಗೊಂಡಿದ್ದ ಓನ್‌ಪ್ಲಸ್ 5 ಸ್ಮಾರ್ಟ್‌ಫೋನ್ ಶೀಘ್ರವೇ ನೂತನ ಆಂಡ್ರಾಯ್ಡ್ O ಆಪ್‌ಡೇಟ್ ಪಡೆದುಕೊಳ್ಳಲಿದೆ. ಇದು ಓನ್‌ಪ್ಲಸ್ 5 ಬಳಕೆದಾರರಿಗೆ ಸಿಹಿ ಸುದ್ದಿಯಾದರೆ, ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಬಳಕೆದಾರಿಗೆ ಕಹಿ ಸುದ್ದಿಯೊಂದಿದೆ. ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ O ಕಟ್ಟಕಡೆಯ ಆಪ್‌ಡೇಟ್ ಆಗಿರಲಿದೆ.
ಓದಿರಿ: ಫೋಷಕರೇ ಎಚ್ಚರ.! ನಿಮ್ಮ ಮಕ್ಕಳು ಈ ಗೇಮ್ ಬಲಿಯಾಗದಂತೆ ನೋಡಿಕೊಳ್ಳಿ.!!

ಮೂಲಗಳ ಪ್ರಕಾರ ಆಂಡ್ರಾಯ್ಡ್ ಇದೇ ತಿಂಗಳಲ್ಲಿ ಲಾಂಚ್ ಆಗಲಿದ್ದು, ಮುಂದಿನ ಎರಡು ತಿಂಗಳಲ್ಲಿ ಬಳಕೆದಾರರಿಗೆ ಮುಕ್ತವಾಗಲಿದೆ. ಇದು ಓನ್‌ಪ್ಲಸ್ 5, ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ವರ್ಷದ ಕೊನೆಯಲ್ಲಿ ಆಪ್‌ಡೇಟ್ ದೊರೆಯಲಿದೆ.

ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಕೊನೆ ಆಪ್‌ಡೇಟ್:
ಓನ್‌ಪ್ಲಸ್ ಕಂಪನಿ ಬಿಡುಗಡೆ ಮಾಡಿರುವ ಓನ್‌ಪ್ಲಸ್ 3 ಮತ್ತು ಓನ್‌ಪ್ಲಸ್ 3T ಸ್ಮಾರ್ಟ್‌ಫೋನ್‌ಗಳಿಗೆ ಆಂಡ್ರಾಯ್ಡ್ O ಆಪ್‌ಡೇಟ್ ಕೊನೆ ಎನ್ನಲಾಗಿದೆ. ಈಗಾಗಲೇ ಈ ಎರಡು ಸ್ಮಾರ್ಟ್‌ಫೋನ್‌ಗಳು ಆಪ್‌ಡೇಟ್ ಪಡೆದುಕೊಳ್ಳಲಿದ್ದು, ಆಂಡ್ರಾಯ್ಡ್ O ನಂತರ ಯಾವುದೇ ಆಪ್‌ಡೇಟ್ ಪಡೆದುಕೊಳ್ಳುವುದಿಲ್ಲ ಎನ್ನಲಾಗಿದೆ.

ಓನ್‌ಪ್ಲಸ್ 5ಗೆ ಮೊದಲ ಆಪ್‌ಡೇಟ್:
ಈ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಓನ್‌ಪ್ಲಸ್ 5 ಮೊದಲ ಆಪ್‌ಡೇಟ್ ದೊರೆಯಲಿದೆ. ಇದಾದ ನಂತರದಲ್ಲಿ ಬೇರೆ ಸ್ಮಾರ್ಟ್‌ಫೋನ್‌ಗಳಿಗೆ ಆಪ್‌ಡೇಟ್ ಲಭ್ಯವಾಗಲಿದೆ. ಇದನ್ನು ಬಿಟ್ಟ ಓನ್‌ಪ್ಲಸ್ 5 ಮುಂದಿನ ಆಪ್‌ಡೇಟ್‌ಗಳು ದೊರೆಯಲಿದೆ.

ಓನ್‌ಪ್ಲಸ್ 5 ಗೋಲ್ಡನ್ ಆವೃತ್ತಿಯೂ ಲಭ್ಯ:
ಇದಲ್ಲದೇ ಈಗಾಗಲೇ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಇದರೊಂದಿಗೆ ಶೀಘ್ರವೇ ಈ ಹೊಸ ಆಪ್‌ಡೇಟ್ ದೊರೆಯುತ್ತಿದ್ದು, ಒಟ್ಟಿನಲ್ಲಿ ಓನ್‌ಪ್ಲಸ್ 5 ಬಳಕೆದಾರರು ಹೊಸ ಆಪ್‌ಡೇಟ್ ಪಡೆಯುತ್ತಿರುವುದು ಸಿಹಿ ವಿಚಾರವಾಗಿದೆ.


Click it and Unblock the Notifications








