'ಗ್ಯಾಲಕ್ಸಿ ಎಂ 30ಎಸ್' ರಿಲೀಸ್ ಡೇಟ್ ಫಿಕ್ಸ್!..6,000mAh ಬ್ಯಾಟರಿ ಖಚಿತ!

|

6,000 ಎಮ್‌ಎಹೆಚ್ ಬ್ಯಾಟರಿ ಮತ್ತು 48 ಎಂಪಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ ಬಹುನಿರೀಕ್ಷಿತ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಂ 30ಎಸ್' ಸ್ಮಾರ್ಟ್‌ಪೋನ್ ಬಿಡುಗಡೆ ದಿನಾಂಕ ಖಚಿತವಾಗಿದೆ. ಗ್ಯಾಲಕ್ಸಿ ಎಂ30 ಎಸ್ ಚಿತ್ರದೊಂದಿಗೆ ಅಮೆಜಾನ್ ಇಂಡಿಯಾದಲ್ಲಿ ಉಡಾವಣಾ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದೇ ಸೆಪ್ಟೆಂಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಗ್ಯಾಲಕ್ಸಿ ಎಂ 30ಎಸ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಲಿವೆ.

'ಗ್ಯಾಲಕ್ಸಿ ಎಂ 30ಎಸ್' ರಿಲೀಸ್ ಡೇಟ್ ಫಿಕ್ಸ್!..6,000mAh ಬ್ಯಾಟರಿ ಖಚಿತ!

ಇಲ್ಲಿಯವರೆಗೆ ಪ್ರಾರಂಭಿಸಲಾದ ಇತರ ಗ್ಯಾಲಕ್ಸಿ ಎಂ-ಸೀರೀಸ್ ಫೋನ್‌ಗಳಂತೆ, 'ಗ್ಯಾಲಕ್ಸಿ ಎಂ30ಎಸ್' ಸ್ಮಾರ್ಟ್‌ಫೋನ್ ಸಹ ಆನ್‌ಲೈನ್-ವಿಶೇಷ ಉತ್ಪನ್ನವಾಗಿ ಬಿಡುಗಡೆಯಾಗಲಿದೆ. 6,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ ಮೊದಲ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಇದಾಗಿದ್ದು, 6,000 ಎಮ್ಎಹೆಚ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತವೆ ಎಂಬ ಹಿಂದಿನ ವದಂತಿಗಳನ್ನು ಸ್ಯಾಮ್‌ಸಂಗ್ ಕಂಪೆನಿಯು ಇದೀಗ ಖಚಿತಪಡಿಸಿದೆ.

ಹೊಸ 'ಗ್ಯಾಲಕ್ಸಿ ಎಂ 30ಎಸ್ ಫೋನ್‌ನಲ್ಲಿ ಹಿಂಬದಿಯಲ್ಲಿ ತ್ರಿವಳಿ ಕ್ಯಾಮರಾ ಇದ್ದು, 48MP ಕ್ಯಾಮರಾ ಇರಲಿದೆ. ಹೆಚ್ಚು ಶಕ್ತಿಶಾಲಿ ಪ್ರೊಸೆಸರ್, 6000 ಎಂಎಹೆಚ್ ಬ್ಯಾಟರಿ ಮತ್ತು 15 ಡಬ್ಲ್ಯೂ ಫಾಸ್ಟ್ ವೈರ್ಡ್ ಚಾರ್ಜಿಂಗ್ ಸೇರಿದಂತೆ ಹಲವು ವಿಶೇಷ ಫೀಚರ್ಸ್ ಅನ್ನು ನಾವು ನೋಡಬಹುದು. ಇದು ಪ್ರಮುಖವಾಗಿ ಶಿಯೋಮಿ K20 Pro, ಶಿಯೋಮಿ Mi A3 ಮತ್ತು ರಿಯಲ್‌ಮಿ 5 Pro ಸ್ಮಾರ್ಟ್‌ಫೋನ್‌ಗಳಿಗೆ ಸ್ಪರ್ಧೆ ನೀಡಲಿದೆ. ಫಾಸ್ಟ್‌ ಚಾರ್ಜಿಂಗ್ ಕೂಡ ಇರಲಿದ್ದು, ಅಮೆಜಾನ್ ಮತ್ತು ಸ್ಯಾಮ್‌ಸಂಗ್ ಸ್ಟೋರ್ ಮೂಲಕ ಲಭ್ಯವಾಗಲಿದೆ.

ಭರ್ಜರಿ ಸುದ್ದಿ!..ಸೆಪ್ಟೆಂಬರ್ 5 ರಿಂದ 'ಜಿಯೋ ಫೈಬರ್' ಸಂಪೂರ್ಣ ಉಚಿತ!ಭರ್ಜರಿ ಸುದ್ದಿ!..ಸೆಪ್ಟೆಂಬರ್ 5 ರಿಂದ 'ಜಿಯೋ ಫೈಬರ್' ಸಂಪೂರ್ಣ ಉಚಿತ!

ಮಧ್ಯಮ ಸರಣಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಫೋನ್‌ಗಳು ಹೆಚ್ಚು ಜನಪ್ರಿಯವಾಗಿವೆ. ಗ್ಯಾಲಕ್ಸಿ ಎಂ 10, ಗ್ಯಾಲಕ್ಸಿ ಎಂ 20, ಗ್ಯಾಲಕ್ಸಿ ಎಂ 30 ಮತ್ತು ಗ್ಯಾಲಕ್ಸಿ ಎಂ 40 ಮಾದರಿಗಳು ಮಾರುಕಟ್ಟೆ ಪ್ರವೇಶಿಸಿದ ನಂತರ ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮಾರುಕಟ್ಟೆ ಪಾಲು ಹೆಚ್ಚಿದೆ. ಹಾಗಾಗಿಯೇ, ಬಜೆಟ್ ಬೆಲೆಯಲ್ಲಿ ಕ್ಯಾಮೆರಾ (48 ಎಂಪಿ ಟ್ರಿಪಲ್ ರಿಯರ್) ಆಧಾರಿತ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲು ಕಂಪೆನಿ ಮುಂದಾಗಿದೆ ಎಂದು ವರದಿಯೊಂದು ಹೇಳಿದೆ.

ಗೂಗಲ್ ಕ್ಯಾಲೆಂಡರ್‌ನಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಬಳಕೆದಾರರೇ ಎಚ್ಚರ!ಗೂಗಲ್ ಕ್ಯಾಲೆಂಡರ್‌ನಲ್ಲಿ ಆಗುತ್ತಿರುವ ವಂಚನೆ ಬಗ್ಗೆ ಬಳಕೆದಾರರೇ ಎಚ್ಚರ!

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ, ಸ್ಯಾಮ್‌ಸಂಗ್ ತನ್ನ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರತಿಸ್ಪರ್ಧಿ ಶಿಯೋಮಿಯೊಂದಿಗಿನ ಅಂತರವನ್ನು ಕಡಿಮೆಗೊಳಿಸಲು ಗ್ಯಾಲಕ್ಸಿ ಎ ಮತ್ತು ಎಂ ಸರಣಿ ಸ್ಮಾರ್ಟ್‌ಪೋನ್‌ಗಳು ಕಾರಣವಾಗಿವೆ. ಇನ್ನು ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯು ಕೈಗೆಟುಕುವ ಸ್ಮಾರ್ಟ್‌ಫೋನ್‌ಗಳ (ರೂ. 7,000-ರೂ. 25,000) ಮಾರಾಟದ ಪ್ರಮಾಣ ಹೆಚ್ಚುತ್ತಿದೆ. ಹಾಗಾಗಿ, ಸ್ಯಾಮ್‌ಸಂಗ್ ಕಂಪೆನಿ ತನ್ನ ಬಜೆಟ್ ಸ್ಮಾರ್ಟ್‌ಪೋನ್‌ಗಳನ್ನು ಹೆಚ್ಚು ನವೀಕರಣಗೊಳಿಸಲು ಗಮನ ಕೇಂದ್ರೀಕರಿಸಿದೆ.

Best Mobiles in India

English summary
Samsung Galaxy M30s will launch in India soon with a massive 6,000mAh battery and 48MP triple camera setup, as revealed by Amazon India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X