ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಭರ್ಜರಿ ಡಿಸ್ಕೌಂಟ್ ಪ್ರಕಟಣೆ!!

|

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಸಬೇಕು ಎಂದುಕೊಂಡಿರುವ ಹೆಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೊಂದು ಖುಷಿ ಸುದ್ದಿ ಸಿಕ್ಕಿದೆ. ಅಮೆಜಾನ್ ಇಂಡಿಯಾದಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ಫೋನ್ ಖರೀದಿ ಮಾಡುವ ಗ್ರಾಹಕರಿಗೆ ಭರ್ಜರಿ ಆಫರ್ ಅನ್ನು ಅಮೆಜಾನ್ ಪ್ರಕಟಿಸಿದೆ. ಈ ಆಫರ್ ಕೇವಲ ಸೀಮಿತ ಅವಧಿಗೆ ಮಾತ್ರ ಲಭ್ಯವಾಗುತ್ತಿದೆ.

ಹೌದು, ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಅಮೆಜಾನ್ ಇಂಡಿಯಾ 2000 ರೂ. ಭರ್ಜರಿ ಡಿಸ್ಕೌಂಟ್ ಮತ್ತು ಈ ಆಫರ್ ಜೊತೆ 12 ತಿಂಗಳ ಕಾಲ ಹಾನಿ ವಿಮೆಯನ್ನು ನೀಡುತ್ತಿದೆ. ಜುಲೈ 4 ರಿಂದ ಜುಲೈ 15 ರವರೆಗೆ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿ ಮಾಡುವ ಎಲ್ಲಾ ಹೆಚ್‌ಡಿಎಫ್‌ಸಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬ್ಯಾಂಕ್ ಗ್ರಾಹಕರಿಗೆ ಈ ಆಫರ್ ಲಭ್ಯವಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಖರೀದಿಗೆ ಭರ್ಜರಿ ಡಿಸ್ಕೌಂಟ್ ಪ್ರಕಟಣೆ!!

ಇದೀಗ ಮಾರುಕಟ್ಟೆಗೆ ಎಂಟ್ರಿ ನೀಡಿರುವ ಕೆಂಪು ಬಣ್ಣದ ವಿಶೇಷ ಆವೃತ್ತಿ ಮತ್ತು 8 ಜಿಬಿ RAM ಹಾಗೂ 256ಜಿಬಿ ವೆರಿಯಂಟ್ ಸ್ಮಾರ್ಟ್‌ಫೋನ್‌ಗಳನ್ನು ಬಿಟ್ಟು ಇನ್ನುಳಿದ ಸ್ಮಾರ್ಟ್‌ಫೋನ್‌ಗಳಿಗೆ ಈ ಆಫರ್ ಲಭ್ಯವಿದೆ. ಹಾಗಾದರೆ, ಕ್ಯಾಶ್‌ಬ್ಯಾಕ್ ಹೊಂದಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್ ಹೊಂದಿರುವ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

ಡಿಸ್‌ಪ್ಲೇ ಹೇಗಿದೆ!

ಡಿಸ್‌ಪ್ಲೇ ಹೇಗಿದೆ!

ಒನ್‌ಪ್ಲಸ್ 6 ಸ್ಮಾರ್ಟ್‌ಫೋನಿನಲ್ಲಿ ಆಪಲ್ ಎಕ್ಸ್ ರೀತಿಯಲ್ಲಿ ಡಿಸ್‌ಪ್ಲೇ ನೋಚ್ ಇರುವ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದ ಒನ್‌ಪ್ಲಸ್ ಕಂಪೆನಿಯು ಡಿಸ್‌ಪ್ಲೇ ಗುಣಮಟ್ಟದಲ್ಲಿಯೂ ಯಾವುದೇ ರಾಜಿಯಾಗಿಲ್ಲ. 6.28 ಇಂಚಿನ ಎಫ್‌ಹೆಚ್‌ಡಿ ಪ್ಲಸ್ ಆಪ್ಟಿಕ್ ಡಿಸ್‌ಪ್ಲೇನ್ನು ಹೊಂದಿದೆ.2280 x 1080 ಪಿಕ್ಸೆಲ್ ರೆಸಲ್ಯೂಶನನ್ನು ಹೊಂದಿರುವ ಡಿಸ್‌ಪ್ಲೇಯು ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ನಿಂದ ಪ್ರೊಟೆಕ್ಟ್ ಆಗಿದೆ. ಈ ಸಾಧನವು 3.5 ಮಿ.ಮೀ ಆಡಿಯೋ ಜ್ಯಾಕ್ ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್ ವಿನ್ಯಾಸ!

ಸ್ಮಾರ್ಟ್‌ಫೋನ್ ವಿನ್ಯಾಸ!

19:9 ಆಸ್ಪೆಕ್ಟ್ ಅನುಪಾದಲ್ಲಿ ಡಿಸ್‌ಪ್ಲೇ ನೋಚ್ ಸ್ಕ್ರೀನ್ ಹೊಂದಿರುವ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಫಿಂಗರ್‌ಪ್ರಿಂಟ್ ಫೀಚರ್ ಅನ್ನು ಹೊಂದಿದೆ. ಸಂಪೂರ್ಣ ವಾಟರ್‌ಪ್ರೂಫ್ ಬಾಡಿಯನ್ನು ನೀಡಿದರೂ ಸಹ ಪೂರ್ತಿ ಸ್ಕ್ರೀನ್ ಅನ್ನು ಹೊಂದಿರುವುದು ಸ್ಮಾರ್ಟ್‌ಫೋನ್ ವಿಶೇಷತೆಯಾಗಿದೆ. ಇನ್ನು ಸ್ಮಾರ್ಟ್‌ಫೋನ್ ಬಳಸಿ ನೋಡಿರುವ ತಜ್ಞರು ಹೇಳೀದಂತೆ, " ಒಂದು ಹೈ ಎಂಡ್ ಸ್ಮಾರ್ಟ್‌ಫೋನ್ ಎನ್ನಲು ಒನ್‌ಪ್ಲಸ್ 6 ವಿನ್ಯಾಸ ಅರ್ಹವಾಗಿದೆ' ಎಂದು ಆಶ್ಚರ್ಯವ್ಯಕ್ತಪಡಿಸಿದ್ದಾರೆ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

ಒನ್‌ಪ್ಲಸ್ ಕಂಪೆನಿ ಸಿಇಒ ಪೀಟರ್ ಲೌ ಅವರು ಮೊದಲೇ ತಿಳಿಸಿದಂತೆ 'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 845 ಎಸ್‌ಒಸಿ ಪ್ರೊಸೆಸರ್ ಅನ್ನು ಹೊಂದಿದೆ. ಕಾರ್ಯನಿರ್ವಹಣೆಯಲ್ಲಿ 30% ಹೆಚ್ಚು ದಕ್ಷತೆ ಹಾಗೂ ವಿದ್ಯುತ್ ಉಳಿಕೆಯಲ್ಲಿ 10% ದಕ್ಷತೆಯನ್ನು ಈ ಪ್ರೊಸೆಸರ್ ನೀಡಲಿದೆ. ಈ ಪ್ರೊಸೆಸರ್ ಅನ್ನು ಅಡ್ರಿನೋ 630 ಜಿಪಿಯು ಜೊತೆ ಜೋಡಿಸಲಾಗಿದೆ. ಇನ್ನು UFS 2.1 ಶೇಖರಣಾ ಸಾಮರ್ಥ್ಯದ 6GB / 8GB RAM ಮತ್ತು 64GB / 128GB / 256GB ಮೆಮೊರಿ ವೆರಿಯಂಟ್‌ಗಳಲ್ಲಿ ಫೋನ್ ಬಿಡುಗಡೆಯಾಗಿದೆ.

'ಒನ್‌ಪ್ಲಸ್ 6' ಕ್ಯಾಮೆರಾ!

'ಒನ್‌ಪ್ಲಸ್ 6' ಕ್ಯಾಮೆರಾ!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಈಗ ಹೆಚ್ಚು ತಂತ್ರಜ್ಞಾನದ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನದಿಂದ ಅಲಂಕೃತವಾಗಿದೆ. 1.22 ಮೈಕ್ರಾನ್ ಪಿಕ್ಸೆಲ್ ಗಾತ್ರದ ಎಫ್ / 1.7 ಅಪಾರ್ಚರ್ ಹೊಂದಿರುವ 20-ಮೆಗಾಪಿಕ್ಸೆಲ್ ಸೋನಿ IM376K ಕ್ಯಾಮೆರಾ ಹಾಗೂ 16-ಮೆಗಾಪಿಕ್ಸೆಲ್ ಸೋನಿ IMX519 ಕ್ಯಾಮೆರಾಗಳು ಹಿಂಬಾದಲ್ಲಿವೆ. ಜೊತೆಗೆ 1 ಮೆಕ್ರಾನ್ ಪಿಕ್ಸೆಲ್ ಗಾತ್ರದ f / 1.7 ಅಪಾರ್ಚರ್ ಹೊಂದಿರುವ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ.

ಸಾಫ್ಟ್‌ವೇರ್ ಮತ್ತು ಫೀಚರ್ಸ್!

ಸಾಫ್ಟ್‌ವೇರ್ ಮತ್ತು ಫೀಚರ್ಸ್!

'ಒನ್‌ಪ್ಲಸ್ 6' ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.1 ಓರಿಯೊ ಜೊತೆಗೆ ಆಕ್ಸಿಜನ್ 5.1 ಫೀಚರ್ ಹೊಂದಿದೆ. ಆಂಡ್ರಾಯ್ಡ್ 'ಪಿ' ಆರಂಭಿಕ ಅಳವಡಿಕೆ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಕ್ಸಿಜನ್ 5.1 ಒಎಸ್ ಐಒಎಸ್ ಹತ್ತಿರದ ಆಂಡ್ರಾಯ್ಡ್ ತರಹದ ಅನುಭವವನ್ನು ನೀಡುತ್ತದೆ. ಇನ್ನು ಎನ್ಎಫ್‌ಸಿ, ಬ್ಲೂಟೂತ್ 5.0, 4 ಜಿ ವೋಲ್ಸ್ ಮತ್ತು ಹೆಚ್ಚಿನವುಗಳಂತಹ ಇತರ ಅಂಶಗಳಿವೆ. ಗೇಮಿಂಗ್ ಮೋಡ್ ಗಮನಾರ್ಹವಾಗಿದೆ, ಗೇಮಿಂಗ್ ಮೋಡ್ ಹಿಂದಿನ ಮಾದರಿಗಳಿಗಿಂತ ಸುಧಾರಿತ ಕಾರ್ಯಕ್ಷಮತೆಯನ್ನು ನೀಡುತ್ತದೆ.

Best Mobiles in India

English summary
Those who purchase the OnePlus 6 on EMI transactions using HDFC credit or debit cards will get to avail an instant cashback of Rs 2,000.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X