Home
ಮೊಬೈಲ್

ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ 10ಜಿಬಿ ಮೆಮೊರಿ ಫೋನ್

ಭಾರತದಲ್ಲಿ 10ಜಿಬಿ ಮೆಮೊರಿಯ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸುತ್ತಿರುವ ಮೊದಲ ಕಂಪೆನಿ ಅಂದರೆ ಅದು ಒನ್ ಪ್ಲಸ್. ಅದನ್ನು ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಎಂದು ಕರೆಯಲಾಗುತ್ತಿದೆ ಯಾಕೆಂದರೆ ಒನ್ ಪ್ಲಸ್ ಸಂಸ್ಥೆ ಇದಕ್ಕಾಗಿ ಮೆಕ್ಲಾರೆನ್ ರೇಸಿಂಗ್ ಲಿಮಿಟೆಡ್ ಜೊತೆಗೆ ಕೈಜೋಡಿಸಿದೆ.

ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ 10ಜಿಬಿ ಮೆಮೊರಿ ಫೋನ್

ಇದು ಅಮೇಜಾನ್.ಇನ್ ಮತ್ತು ಒನ್ ಪ್ಲಸ್ ನ ಆನ್ ಲೈನ್ ಸ್ಟೋರ್ ಗಳಲ್ಲಿ ಡಿಸೆಂಬರ್ 15 ರಿಂದ ಖರೀದಿಗೆ ಲಭ್ಯವಾಗುತ್ತದೆ. ಹಾಗಾದ್ರೆ ನೀವು ಈ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ನ 10ಜಿಬಿ ಮೆಮೊರಿ ಫೋನ್ ಬಗ್ಗೆ ತಿಳಿದಿರಬೇಕಾಗಿರುವ 10 ಪ್ರಮುಖ ಅಂಶಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಭಾರತದಲ್ಲಿ ಬಿಡುಗಡೆಗೊಂಡಿರುವ ಒನ್ ಪ್ಲಸ್ ನ ಹೆಚ್ಚು ದುಬಾರಿ ಫೋನ್ ಎಂದರೆ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್

ಭಾರತದಲ್ಲಿ ಬಿಡುಗಡೆಗೊಂಡಿರುವ ಒನ್ ಪ್ಲಸ್ ನ ಹೆಚ್ಚು ದುಬಾರಿ ಫೋನ್ ಎಂದರೆ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್

ಹೌದು ಇದರ ಬೆಲೆ 50,999 ರುಪಾಯಿಗಳು.ಸದ್ಯ ಇದಕ್ಕಿಂತ ದುಬಾರಿಯಾಗಿರುವ ಒನ್ ಪ್ಲಸ್ ಸಂಸ್ಥೆಯ ಫೋನ್ ಭಾರತದಲ್ಲಿ ಇಲ್ಲ. ಇದುವೇ ಅತ್ಯಂತ ಹೆಚ್ಚು ಬೆಲೆಯ ಒನ್ ಪ್ಲಸ್ ಸಂಸ್ಥೆಯ 0ಫೋನ್ ಆಗಿದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ನಲ್ಲಿ ಹೊಸ ವಿನ್ಯಾಸ ಇದ್ದು ಇದು ಎಫ್1 ಮೆಕ್ಲಾರೆನ್ ರೇಸಿಂಗ್ ಟೀಮ್ ನಿಂದ ಸ್ಪೂರ್ತಿ ಪಡೆದಿದೆ

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ನಲ್ಲಿ ಹೊಸ ವಿನ್ಯಾಸ ಇದ್ದು ಇದು ಎಫ್1 ಮೆಕ್ಲಾರೆನ್ ರೇಸಿಂಗ್ ಟೀಮ್ ನಿಂದ ಸ್ಪೂರ್ತಿ ಪಡೆದಿದೆ

ಡಿವೈಸ್ ನ ಕೆಳಭಾಗದ ತುದಿಗಳಲ್ಲಿ ಪಪ್ಪಾಯ ಆರೆಂಜ್ ರೇಸ್ಗಳು ಇದೆ. ಫೋನಿನ ಗಾಜಿನ ಕೆಳಗಿನರುವ ಮಾದರಿಯು ಮೆಕ್ಲಾರೆನ್ ಕಾರ್ಬನ್ ಫೈಬರ್ ತಂತ್ರಜ್ಞಾನವನ್ನು ಆಧರಿಸಿದೆ. ನೋಡುವುದಕ್ಕೆ ಒನ್ ಪ್ಲಸ್ 6ಟಿಯ ಕಪ್ಪು ಬಣ್ಣದ ಆವೃತ್ತಿಯ ಫೋನ್ ನಂತೆಯೇ ಕಂಡರೂ ಹಿಂಭಾಗದಲ್ಲಿ ಮೆಕ್ಲಾರೆನ್ ಬ್ರ್ಯಾಂಡಿಂಗ್ ಇದೆ.

ಒನ್ ಪ್ಲಸ್ ವಿಶೇಷ ವ್ಯವಸ್ಥೆಯನ್ನು ಕ್ವಾಲ್ಕಂ ಬೆಂಬಲಿಂತ 10ಜಿಬಿ ಮೆಮೊರಿ ಮತ್ತು ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಗಾಗಿ ಮಾಡಲಾಗಿದೆ.

ಒನ್ ಪ್ಲಸ್ ವಿಶೇಷ ವ್ಯವಸ್ಥೆಯನ್ನು ಕ್ವಾಲ್ಕಂ ಬೆಂಬಲಿಂತ 10ಜಿಬಿ ಮೆಮೊರಿ ಮತ್ತು ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಗಾಗಿ ಮಾಡಲಾಗಿದೆ.

ಕುತೂಹಲಕಾರಿಯಾಗಿರುವ ವಿಚಾರವೇನೆಂದರೆ, ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಸ್ನ್ಯಾಪ್ ಡ್ರ್ಯಾಗನ್ ಪ್ರೊಸೆಸರ್ ಮೂಲಕವೇ ರನ್ ಆಗುತ್ತದೆ ಮತ್ತು ಇದು 8 ಜಿಬಿ ಮೆಮೊರಿಯನ್ನು ಬೆಂಬಲಿಸುತ್ತದೆ. 10ಜಿಬಿ ಮೆಮೊರಿಯನ್ನು ಬೆಂಬಲಿಸುವುದಕ್ಕಾಗಿ ಒನ್ ಪ್ಲಸ್ ಕೆಲವು ಪಿಸಿಬಿಎ ಲೆವೆಲ್ ನ ಸಾಫ್ಟವೇರ್ ಬದಲಾವಣೆಯನ್ನು ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನಲ್ಲಿ ಜೊತೆಗೆ ಕ್ವಾಲ್ಕಂನಲ್ಲಿ ಮಾಡಬೇಕಾಗುತ್ತದೆ.

10ಜಿಬಿ ಮೆಮೊರಿಯಿಂದಾಗಿ

10ಜಿಬಿ ಮೆಮೊರಿಯಿಂದಾಗಿ

10ಜಿಬಿ ಮೆಮೊರಿಗೆ ನೀವು ರೆಗ್ಯುಲರ್ 8ಜಿ/256ಜಿಬಿ ಸ್ಟೋರೇಜ್ ವ್ಯವಸ್ಥೆಯ ವೇರಿಯಂಟ್ ನ್ನು ಒನ್ ಪ್ಲಸ್ 6ಟಿಯಲ್ಲಿ ಬದಲಾಯಿಸಿಕೊಂಡರೆ ಅಂತಹ ದೊಡ್ಡ ವ್ಯತ್ಯಾಸವೇನೂ ನಡೆಯುವುದಿಲ್ಲ. ಒನ್ ಪ್ಲಸ್ ಹೇಳುವ ಪ್ರಕಾರ ರಿಯಲ್ ಲೈಫ್ ನ ಕೆಲವು ಕೆಲಸಗಳು ವೇಗಗೊಳ್ಳುತ್ತದೆ. ಆಪ್ ಲೋಡಿಂಗ್ ಮತ್ತು ಸ್ವಿಚ್ಚಿಂಗ್ ಸಮಯ ಹೆಚ್ಚಾಗಿರುತ್ತದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ 256ಜಿಬಿ ಸ್ಟೋರೇಜ್ ವ್ಯವಸ್ಥೆಯಲ್ಲಿ ಮಾತ್ರವೇ ಲಭ್ಯವಿದೆ

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ 256ಜಿಬಿ ಸ್ಟೋರೇಜ್ ವ್ಯವಸ್ಥೆಯಲ್ಲಿ ಮಾತ್ರವೇ ಲಭ್ಯವಿದೆ

ಇತರೆ ಯಾವುದೇ ವೇರಿಯಂಟ್ ನ ಸ್ಟೋರೇಜ್ ಗಳೂ ಕೂಡ ಈ ಫೋನ್ ನಲ್ಲಿ ಲಭ್ಯವಿರುವುದಿಲ್ಲ. ಸ್ಟೋರೇಜ್ ನಲ್ಲಿ ನಿಮಗೆ ಆಯ್ಕೆಗಳಿಲ್ಲ. 256ಜಿಬಿ ವೇರಿಯಂಟ್ ಮಾತ್ರವೇ ಏಕಮಾತ್ರ ಆಯ್ಕೆಯಾಗಿರುತ್ತದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಹೊಸ ವಾರ್ಪ್ ಚಾರ್ಜ್ 30 ಚಾರ್ಚಿಂಗ್ ತಂತ್ರಜ್ಞಾನವನ್ನು ಹೊಂದಿದೆ

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಹೊಸ ವಾರ್ಪ್ ಚಾರ್ಜ್ 30 ಚಾರ್ಚಿಂಗ್ ತಂತ್ರಜ್ಞಾನವನ್ನು ಹೊಂದಿದೆ

ಒನ್ ಪ್ಲಸ್ ಹೊಸ ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಿದ್ದು ಅದನ್ನು ವಾರ್ಪ್ ಚಾರ್ಜ್ 30 ಚಾರ್ಜಿಂಗ್ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಇದು ಕೇವಲ ಮೆಕ್ಲಾರೆನ್ ಎಡಿಷನ್ ನಲ್ಲಿ ಮಾತ್ರವೇ ಬೆಂಬಲಿತವಾಗಿರುತ್ತದೆಯೇ ವಿನಃ ಇತರೆ ಯಾವುದೇ ವೇರಿಯಂಟ್ ನ ಒನ್ ಪ್ಲಸ್ 6ಟಿಯಲ್ಲಿ ಲಭ್ಯವಿರುವುದಿಲ್ಲ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ನಲ್ಲಿ ಕಸ್ಟಮೈಸ್ಡ್ ಯುಐ ಜೊತೆಗೆ ಡಾರ್ಕ್ ಮೋಡ್ ಡೀಫಾಲ್ಟ್ ಆಗಿ ಅನೇಬಲ್ ಆಗಿರುತ್ತದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ನಲ್ಲಿ ಕಸ್ಟಮೈಸ್ಡ್ ಯುಐ ಜೊತೆಗೆ ಡಾರ್ಕ್ ಮೋಡ್ ಡೀಫಾಲ್ಟ್ ಆಗಿ ಅನೇಬಲ್ ಆಗಿರುತ್ತದೆ.

ಮೆಕ್ಲಾರೆನ್ ಎಡಿಷನ್ ಡಾರ್ಕ್ ಥೀಮ್ಡ್ ಯುಐ ಜೊತೆಗೆ ಕಸ್ಟಮೈಸ್ಡ್ ಐಕಾನ್ ಗಳನ್ನು ಹೊಂದಿದೆ.

ಮೆಕ್ಲಾರೆನ್ ಎಡಿಷನ್ ಡಾರ್ಕ್ ಥೀಮ್ಡ್ ಯುಐ ಜೊತೆಗೆ ಕಸ್ಟಮೈಸ್ಡ್ ಐಕಾನ್ ಗಳನ್ನು ಹೊಂದಿದೆ.

ಮೆಕ್ಲಾರೆನ್ ಎಡಿಷನ್ ಡಾರ್ಕ್ ಥೀಮ್ಡ್ ಯುಐ ಜೊತೆಗೆ ಕಸ್ಟಮೈಸ್ಡ್ ಐಕಾನ್ ಗಳನ್ನು ಹೊಂದಿದೆ.

ಖರೀದಿದಾರರಿಗೆ ಮೆಕ್ಲಾರೆನ್ ಬ್ರಾಂಡೆಡ್ ನ ಹಾರ್ಡ್ ಕೇಸ್ ಈ ಫೋನಿನ ಜೊತೆಗೆ ಉಚಿತವಾಗಿ ಸಿಗುತ್ತದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಗೇಮ್ ಬೂಸ್ಟ್ ನ್ನ ಹೊಂದಿದೆ ಇದು ಗೇಮಿಂಗ್ ಪ್ರದರ್ಶನವನ್ನು ಹೆಚ್ಚಿಸುತ್ತದೆ.

ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಗೇಮ್ ಬೂಸ್ಟ್ ನ್ನ ಹೊಂದಿದೆ ಇದು ಗೇಮಿಂಗ್ ಪ್ರದರ್ಶನವನ್ನು ಹೆಚ್ಚಿಸುತ್ತದೆ.

ಗೇಮ್ ಬೂಸ್ಟ್ ಇರುವುದರಿಂದಾಗಿ ಹೊಸ ಒನ್ ಪ್ಲಸ್ 6ಟಿಯಲ್ಲಿ ಗೇಮ್ ಲೋಡ್ ವೇಗವಾಗಿರುತ್ತದೆ.

ಡಿಸೆಂಬರ್ 15 ರಿಂದ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಖರೀದಿಗೆ ಲಭ್ಯವಿರುತ್ತದೆ.

ಡಿಸೆಂಬರ್ 15 ರಿಂದ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಖರೀದಿಗೆ ಲಭ್ಯವಿರುತ್ತದೆ.

ಡಿಸೆಂಬರ್ 13 ರಿಂದ ದೆಹಲಿಯ ಸ್ಟೋರ್ ಗಳಲ್ಲಿ ಒನ್ ಪ್ಲಸ್ 6ಟಿ ಮೆಕ್ಲಾರೆನ್ ಎಡಿಷನ್ ಲಭ್ಯವಿರುತ್ತದೆ ಮತ್ತು ಡಿಸೆಂಬರ್ 15 ರಿಂದ ಅಮೇಜಾನ್.ಇನ್ ಮತ್ತು ಒನ್ ಪ್ಲಸ್ ಇ-ಸ್ಟೋರ್ ಗಳಲ್ಲಿ ಇದನ್ನು ಖರೀದಿಸಲು ಗ್ರಾಹಕರಿಗೆ ಅವಕಾಶವಿರುತ್ತದೆ.

Best Mobiles in India

English summary
OnePlus 6T McLaren Edition with 10GB RAM launched: 10 things to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+