Subscribe to Gizbot

ಹಳೇ ಫೋನ್ ನೀಡಿ: ಬದಲಿಗೆ ಹೊಚ್ಚ ಹೊಸ ಒನ್‌ಪ್ಲಸ್ 5T ಪಡೆದುಕೊಳ್ಳಿ.! ಹೇಗೆ?

Written By:
Star Wars ಸಿನಿಮಾ ಪ್ರಿಯರಿಗೆ Oneplus 5T Star Wars Edition ಸ್ಮಾರ್ಟ್‌ಫೋನ್ ಖರೀದಿಸುವ ಸುವರ್ಣಾವಕಾಶ!!

ಜಾಗತಿಕ ಮಾರುಕಟ್ಟೆಯಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಗಳನ್ನು ಬಿಡುಗಡೆ ಮಾಡುತ್ತಿರುವ ಒನ್‌ಪ್ಲಸ್, ತನ್ನ ಇ-ಸ್ಟೋರ್‌ ಒನ್‌ಪ್ಲಸ್ ಸ್ಟೋರ್.ಇನ್ ಮತ್ತು ಒನ್‌ಪ್ಲಸ್ ಮಳಿಗೆಗಳಲ್ಲಿ ಕ್ಯಾಶಿಫೈ ಸಹಯೋಗದಲ್ಲಿ ಬೈಬ್ಯಾಕ್ ಆಫರ್' ಅನ್ನು ಘೋಷಣೆ ಮಾಡಿದೆ. ಕ್ಯಾಶಿಫೈ ಭಾರತದಲ್ಲಿ ಸ್ಮಾರ್ಟ್‌ಫೋನ್‌ಗಳ ಮಾರಾಟದ ಅತಿ ದೊಡ್ಡ ಮತ್ತು ವಿಶ್ವಾಸಾರ್ಹವಾದ ವೇದಿಕೆಯಾಗಿದೆ. ಈ ಆಫರ್ ನಲ್ಲಿ ಗ್ರಾಹಕರು ಎಕ್ಸ್‌ಚೇಂಜ್ ಆಫರ್ ನಲ್ಲಿ ತಮ್ಮ ಹಳೇಯ ಫೋನ್‌ಗಳನ್ನು ನೀಡಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ಮೂಲಕ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಗ್ರೇಡ್ ಮಾಡಿಕೊಳ್ಳಲು ಸದವಕಾಶವನ್ನು ಒನ್‌ಪ್ಲಸ್ ಮತ್ತು ಕ್ಯಾಶಿಫೈ ಒದಗಿಸಿಕೊಟ್ಟಿವೆ.

ಹಳೇ ಫೋನ್ ನೀಡಿ: ಬದಲಿಗೆ ಹೊಚ್ಚ ಹೊಸ ಒನ್‌ಪ್ಲಸ್ 5T ಪಡೆದುಕೊಳ್ಳಿ.! ಹೇಗೆ?

ದೇಶದ 30 ನಗರಗಳಲ್ಲಿರುವ ಒನ್‌ಪ್ಲಸ್ ಸ್ಟೋರ್‌ಗಳಲ್ಲಿ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್‌ಗಳಿಗೆ ಶೇ.100 ರಷ್ಟು ಮಾರುಕಟ್ಟೆ ಬೆಲೆಯನ್ನು ಪಡೆಯಲಿದ್ದಾರೆ ಮತ್ತು ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾದ ಹಣವನ್ನು 72 ಗಂಟೆಗಳೊಳಗಾಗಿ ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ನೀಡುವ ಬೈಬ್ಯಾಕ್ ಮೌಲ್ಯಕ್ಕಿಂತ ಹೆಚ್ಚು ಮೌಲ್ಯವನ್ನು ಒನ್‌ಪ್ಲಸ್‌ಸ್ಟೋರ್.ಇನ್ ನಲ್ಲಿ ಗ್ರಾಹಕರು ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಿ ಲಭ್ಯ:

ಎಲ್ಲಿ ಲಭ್ಯ:

ಅಹ್ಮದಾಬಾದ್, ಆಗ್ರಾ, ಬೆಂಗಳೂರು, ಭೋಪಾಲ್, ಬರೋಡ, ವಡೋದರ, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ, ಫರೀದಾಬಾದ್, ಘಾಜಿಯಾಬಾದ್, ಗಾಂಧಿನಗರ, ಗುರುಗಾಂವ್, ಹೌರಾ, ಹೈದ್ರಾಬಾದ್, ಸಿಕಂದರಾಬಾದ್, ಇಂದೋರ್, ಲಕ್ನೋ, ಜಾಲಂಧರ್, ಕಾನ್ಪುರ, ಕೋಲ್ಕತ್ತಾ, ಲೂಧಿಯಾನ, ಮೊಹಾಲಿ, ಮುಂಬೈ, ನೋಯ್ಡಾ, ನಾಗ್ಪುರ, ನವಿ ಮುಂಬೈ, ಪುಣೆ, ಪಾಂಡಿಚೆರಿ, ಪಂಚಕುಲ, ಸೂರತ್ ಮತ್ತು ಥಾಣೆಯ ಒನ್‌ಪ್ಲಸ್ ಸ್ಟೋರ್‌ಗಳು ಸೇರಿದಂತೆ ವಿವಿಧ ನಗರಗಳಲ್ಲಿ ಈ ಯೋಜನೆ ಲಭ್ಯವಿದೆ.

ಒನ್‌ಪ್ಲಸ್ ಬೈಬ್ಯಾಕ್ ಆಫರ್ ಪಡೆಯುವುದ ಹೇಗೆ..?

ಒನ್‌ಪ್ಲಸ್ ಬೈಬ್ಯಾಕ್ ಆಫರ್ ಪಡೆಯುವುದ ಹೇಗೆ..?

ಹಂತ 01:

ಗ್ರಾಹಕರು ತಮ್ಮಲ್ಲಿರುವ ಹಳೆಯ ಸ್ಮಾರ್ಟ್‌ಫೋನ್ ಕುರಿತ ಅಗತ್ಯ ಮಾಹಿತಿಗಳನ್ನು ನೀಡಿ ಅದರ ಮೌಲ್ಯವನ್ನು ಪಡೆಯಬೇಕು (ಈ ವಿನಿಮಯ ಸೌಲಭ್ಯ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಸೀಮಿತವಾಗಿದೆ).

ಹಂತ 02:

ಹಂತ 02:

ಬೈಬ್ಯಾಕ್ ವಿವರಗಳನ್ನು ಪಡೆದ ನಂತರ ನೀವು ಹೊಸ ಒನ್‌ಪ್ಲಸ್ ಡಿವೈಸ್ ಅನ್ನು ಖರೀದಿ ಮಾಡಬಹುದು.

ಹಂತ ೦3:

ಹಂತ ೦3:

ಹೊಸ ಒನ್‌ಪ್ಲಸ್ ಡಿವೈಸ್‌ಗೆ ಹಣ ಪಾವತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ನಿಮಗೆ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ವಿತರಿಸಲಾಗುತ್ತದೆ.

ಹಂತ ೦4:

ಹಂತ ೦4:

ನಿಮ್ಮ ಆರ್ಡರ್ ಪ್ರಕ್ರಿಯೆ ನಂತರದ 72 ಗಂಟೆಗಳೊಳಗೆ ಕ್ಯಾಶಿಫೈ ಹಳೆಯ ಸ್ಮಾರ್ಟ್‌ಫೋನ್ ಪಡೆಯಲು ಮತ್ತು ಹಣ ಪಾವತಿ ಪ್ರಕ್ರಿಯೆಗೆ ನಿಮ್ಮ ಬಳಿ ಸಮಯ ನಿಗದಿಗೊಳಿಸಲಿದೆ. ಹಳೆಯ ಸ್ಮಾರ್ಟ್‌ಫೋನ್‌ನ ಸಂಪೂರ್ಣ ಪರಿಶೀಲನೆ ನಂತರ ಅದರ ಹಣವನ್ನು ನಗದು ರೂಪದಲ್ಲಿ ನೀಡಲಿದೆ.

ಹಂತ 05:

ಹಂತ 05:

ಒನ್‌ಪ್ಲಸ್‌ಸ್ಟೋರ್.ಇನ್ ನಲ್ಲಿ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ನ ಖರೀದಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರವಷ್ಟೇ ಈ ಒನ್‌ಪ್ಲಸ್ ಬೈಬ್ಯಾಕ್ ಯೋಜನೆ ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
OnePlus Buyback offer on old Apple, Samsung, Xiaomi. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot