ಒನ್‌ಪ್ಲಸ್‌ ನಾರ್ಡ್‌ 2T V/S ಒನ್‌ಪ್ಲಸ್‌ ನಾರ್ಡ್‌ 2: ಖರೀದಿಗೆ ಯಾವುದು ಬೆಸ್ಟ್‌?

|

ಜನಪ್ರಿಯ ಒನ್‌ಪ್ಲಸ್‌ ಮೊಬೈಲ್ ಕಂಪನಿಯು ಹೊಸದಾಗಿ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದು, ಆಕರ್ಷಕ ಫೀಚರ್ಸ್‌ಗಳೊಂದಿಗೆ ಗ್ರಾಹಕರ ಗಮನ ಸೆಳೆದಿದೆ. ಮುಖ್ಯವಾಗಿ ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿರುವುದು ಹೈಲೈಟ್‌ ಆಗಿ ಕಾಣಿಸಿಕೊಂಡಿದೆ. ಹೆಚ್ಚು ಕಡಿಮೆ ಅದೇ ಪ್ರೈಸ್‌ಟ್ಯಾಗ್‌ನ ರೇಂಜ್‌ನಲ್ಲಿ ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್‌ ಸಹ ಆಕರ್ಷಕ ಎನಿಸಿದೆ. ಆದರೆ ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯಾವುದು ಬೆಸ್ಟ್‌?

ಮೀಡ್‌ರೇಂಜ್‌

ಹೌದು, ಒನ್‌ಪ್ಲಸ್‌ ಸಂಸ್ಥೆಯ ನೂತನ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್ ಹಾಗೂ ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಬೆಲೆಯಲ್ಲಿ ಬೆಸ್ಟ್‌ ಎನಿಸುವಂತಹ ಫೀಚರ್ಸ್‌ಗಳನ್ನು ಪಡೆದಿವೆ. ಈ ಎರಡು ಫೋನ್‌ಗಳ ಪ್ರೈಸ್‌ಟ್ಯಾಗ್‌ನಲ್ಲಿ ಹೆಚ್ಚಿನ ಭಿನ್ನತೆ ಕಾಣಿಸದಿದ್ದರೂ, ಫೀಚರ್ಸ್‌ಗಳ ದೃಷ್ಠಿಯಿಂದ ಕೆಲವು ಭಿನ್ನತೆಗಳನ್ನು ಕಾಣಬಹುದಾಗಿದೆ. ಅದಾಗ್ಯೂ, ಈ ಎರಡು ಫೋನ್‌ಗಳಲ್ಲಿ ಕೆಲವು ಫೀಚರ್ಸ್‌ಗಳಲ್ಲಿ ಸಾಮ್ಯತೆ ಇದೆ.

ಉತ್ತಮ

ಸಂಸ್ಥೆಯ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ನೂತನವಾಗಿ ಲಗ್ಗೆ ಇಟ್ಟಿದ್ದು, ಇದೇ ಜುಲೈ 5 ರಂದು ಮಾರಾಟ ಪ್ರಾರಂಭಿಸಲಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್ ಕಳೆದ ವರ್ಷ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಹಾಗಾದರೇ ಇವೆರಡರಲ್ಲಿ ಖರೀದಿಗೆ ಯಾವುದು ಉತ್ತಮ? ಇವೆರಡು ಫೋನ್‌ಗಳ ಕಂಪ್ಲೀಟ್‌ ಫೀಚರ್ಸ್‌ ಮಾಹಿತಿ ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಒಳಗೊಂಡಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಎರಡು ಫೋನ್‌ಗಳ ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹಾಗೂ ಸ್ಕ್ರೀನ್‌ ಗಾತ್ರ ಸಾಮ್ಯತೆ ಇದೆ.

ಡಿಸ್‌ಪ್ಲೇ ರಿಫ್ರೇಶ್‌ ರೇಟ್

ಡಿಸ್‌ಪ್ಲೇ ರಿಫ್ರೇಶ್‌ ರೇಟ್

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಇದು 90Hz ರಿಫ್ರೆಶ್ ರೇಟ್‌ ಹೊಂದಿದ್ದು, HDR10+ ಪ್ರಮಾಣೀಕರಣವನ್ನು ಹೊಂದಿದೆ. ಜೊತೆಗೆ ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಸಹ ಡಿಸ್‌ಪ್ಲೇಯ 90Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಡಿಸ್‌ಪ್ಲೇ ರಿಫ್ರೇಶ್‌ ರೇಟ್ ನಲ್ಲಿಯೂ ಈ ಎರಡು ಫೋನ್‌ಗಳು ಹೆಚ್ಚಿನ ಭಿನ್ನತೆ ಹೊಂದಿಲ್ಲ.

ಪ್ರೊಸೆಸರ್‌ ಪವರ್ ಹೇಗಿದೆ

ಪ್ರೊಸೆಸರ್‌ ಪವರ್ ಹೇಗಿದೆ

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1300 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಅನ್ನು ಆಕ್ಷಿಜನ್‌ OS 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್‌ ಆಕ್ಸಿಜೆನ್ 11.3 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಪ್ರೊಸೆಸರ್‌ ವಿಭಾಗದಲ್ಲಿ ಹೊಸ ಒನ್‌ಪ್ಲಸ್‌ ನಾರ್ಡ್‌ 2T 5G ಸ್ಮಾರ್ಟ್‌ಫೋನ್‌ ಆಕರ್ಷಕ ಎನಿಸುತ್ತದೆ.

ಮೆಮೊರಿ ಆಯ್ಕೆಗಳೆನು

ಮೆಮೊರಿ ಆಯ್ಕೆಗಳೆನು

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ 8GB RAM + 128GB ಮತ್ತು 12GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸುವುದಕ್ಕೆ ಅವಕಾಶ ನೀಡಿಲ್ಲ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ.

ಕ್ಯಾಮೆರಾ ಸೆನ್ಸಾರ್ ಹೇಗಿವೆ

ಕ್ಯಾಮೆರಾ ಸೆನ್ಸಾರ್ ಹೇಗಿವೆ

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX766 ಸೆನ್ಸಾರ್‌ ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಬೆಂಬಲವನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದ್ದು, 120 ಡಿಗ್ರಿಗಳ ಫೀಲ್ಡ್-ಆಫ್-ವ್ಯೂ ನೀಡಲಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊಕ್ರೋಮ್ ಸೆನ್ಸಾರ್ ಅನ್ನು ಹೊಂದಿದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 8 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹಾಗೂ 2 ಮೆಗಾ ಪಿಕ್ಸಲ್ ಸೆನ್ಸಾರ್‌ ಹೊಂದಿದೆ. ಕ್ಯಾಮೆರಾ ಆಯ್ಕೆಗಳಲ್ಲಿಯೂ ಹೆಚ್ಚಿನ ಭಿನ್ನತೆಗಳಿಲ್ಲ.

ಸೆಲ್ಫಿ ಕ್ಯಾಮೆರಾ ಸೆನ್ಸಾರ್

ಸೆಲ್ಫಿ ಕ್ಯಾಮೆರಾ ಸೆನ್ಸಾರ್

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ 32 ಮೆಗಾ ಪಿಕ್ಸೆಲ್ ಸೋನಿ IMX615 ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 32 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸ್ಪೋರ್ಟಿ ಸೆಲ್ಫಿ ಕ್ಯಾಮೆರಾ ಸಹ ಒಳಗೊಂಡಿದೆ. ಈ ಫೋನ್ ನೈಟ್‌ಸ್ಕೇಪ್ ಅಲ್ಟ್ರಾ, ನೈಟ್ ಪೋರ್ಟ್ರೇಟ್, ಒಐಎಸ್, ಎಐ ವಿಡಿಯೋ ವರ್ಧನೆ, ಎಐ ಫೋಟೋ ವರ್ಧನೆ ಮತ್ತು ಡ್ಯುಯಲ್ ವ್ಯೂ ಆಯ್ಕೆಗಳನ್ನು ಇದು ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾದಲ್ಲಿಯೂ ಈ ಎರಡು ಫೋನ್‌ಗಳು ಸಾಮ್ಯತೆ ಪಡೆದಿವೆ.

ಬ್ಯಾಟರಿ ಬ್ಯಾಕ್‌ಅಪ್‌ ಕಥೆ ಏನು?

ಬ್ಯಾಟರಿ ಬ್ಯಾಕ್‌ಅಪ್‌ ಕಥೆ ಏನು?

ಬ್ಯಾಟರಿ ಮತ್ತು ಇತರೆ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 80W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 65W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಬ್ಯಾಟರಿ ಸ್ಟೋರೇಜ್‌ನಲ್ಲಿ ಸಾಮ್ಯತೆ ಕಂಡುಬಂದರೂ, ಚಾರ್ಜಿಂಗ್ ವಿಭಾಗದಲ್ಲಿ ಒನ್‌ಪ್ಲಸ್‌ ನಾರ್ಡ್‌ 2T 5G ಅಪ್‌ಗ್ರೇಡ್‌ ಆಗಿ ಕಾಣಿಸಿಕೊಂಡಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB RAM + 128GB ಸ್ಟೋರೇಜ್ ಆಯ್ಕೆಗೆ 28,999ರೂ.ಬೆಲೆ ಹೊಂದಿದೆ. ಹಾಗೆಯೇ 12GB + 256GB ಮಾದರಿಯ ಆಯ್ಕೆಗೆ 33,999ರೂ.ಬೆಲೆಯನ್ನು ಹೊಂದಿದೆ. ಹಾಗೆಯೇ ಒನ್‌ಪ್ಲಸ್ ನಾರ್ಡ್ 2 5G ಮೂರು ಮಾದರಿಗಳಲ್ಲಿ ಎಂಟ್ರಿ ಪಡೆದಿದೆ. ಅವುಗಳಲ್ಲಿ 6GB RAM ಮತ್ತು 128GB ಬೇಸ್ ವೇರಿಯಂಟ್ ಬೆಲೆಯು 27,999ರೂ. ಆಗಿದೆ. ಅದೇ ರೀತಿ 8GB RAM ಮತ್ತು 128GB ವೇರಿಯಂಟ್ ಬೆಲೆಯು 29,999ರೂ. ಆಗಿದೆ. ಇನ್ನು 12GB RAM + 256GB ಸ್ಟೋರೇಜ್‌ನ ಟಾಪ್‌ ಮಾಡೆಲ್ ದರವು 34,999ರೂ. ಆಗಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್‌ ಇದೇ ಜುಲೈ 5 ರಿಂದ ಅಮೆಜಾನ್‌, ಒನ್‌ಪ್ಲಸ್‌.ಇನ್‌, ಒನ್‌ಪ್ಲಸ್‌ ಸ್ಟೋರ್‌ ಅಪ್ಲಿಕೇಶನ್‌, ಒನ್‌ಪ್ಲಸ್‌ ಎಕ್ಸ್‌ಪೀರಿಯೆನ್ಸ್‌ ಸ್ಟೋರ್‌ಗಳಲ್ಲಿ ಮಾರಾಟವಾಗಲಿದೆ. ಇದು ಗ್ರೇ ಶ್ಯಾಡೋ ಮತ್ತು ಜೇಡ್ ಫಾಗ್ ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

ಕೊನೆಯ ಮಾತು

ಕೊನೆಯ ಮಾತು

ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್ ಹಾಗೂ ಒನ್‌ಪ್ಲಸ್‌ ನಾರ್ಡ್‌ 2 ಸ್ಮಾರ್ಟ್‌ಫೋನ್ ಈ ಎರಡು ಫೋನ್‌ಗಳು ಮೀಡ್‌ರೇಂಜ್‌ ಬೆಲೆಯಲ್ಲಿ ಜಬರ್ದಸ್ತ್‌ ಆಗಿ ಕಾಣಿಸಿಕೊಂಡಿವೆ. ಹಾಗೆಯೇ ಫೀಚರ್ಸ್‌ಗಳ ವಿಷಯದಲ್ಲಿಯೂ ಈ ಎರಡು ಫೋನ್‌ಗಳು ಬಹುತೇಕ ಸಾಮ್ಯತೆ ಹೊಂದಿವೆ. ಆದ್ರೆ ಪ್ರೊಸೆಸರ್‌ ವಿಭಾಗದಲ್ಲಿ ಒನ್‌ಪ್ಲಸ್‌ ನಾರ್ಡ್‌ 2T ಅಪ್‌ಡೇಟೆಡ್‌ ಎನಿಸಿದೆ. ಹೊಸ ಒನ್‌ಪ್ಲಸ್‌ ನಾರ್ಡ್‌ 2T ಸ್ಮಾರ್ಟ್‌ಫೋನ್, ಒನ್‌ಪ್ಲಸ್‌ ನಾರ್ಡ್‌ 2 ಫೋನಿನ ಅಪ್‌ಗ್ರೇಡ್‌ ಆವೃತ್ತಿ ತರಹ ಕಾಣಿಸುತ್ತದೆ. ಕಾರ್ಯವೈಖರಿಯಿಂದ ಹಾಗೂ ಅಪ್‌ಗ್ರೇಡ್‌ ದೃಷ್ಠಿಯಿಂದ ನೋಡುವುದಾದರೇ, ನೂತನ ಒನ್‌ಪ್ಲಸ್‌ ನಾರ್ಡ್‌ 2T ಖರೀದಿಗೆ ಉತ್ತಮ ಎಂದು ಹೇಳಬಹುದು.

Best Mobiles in India

English summary
OnePlus Nord 2 VS OnePlus Nord 2: Which Should You Buy.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X