ನೌಗಾಟ್ ಮತ್ತು ಆಕ್ಸಿಜನ್ ಒ.ಎಸ್ 4.0 ಪಡೆಯಲಿರುವ ಒನ್ ಪ್ಲಸ್ 3 ಮತ್ತು ಒನ್ ಪ್ಲಸ್ 3ಟಿ.

Written By:

ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಇತ್ತೀಚೆಗೆ ತನ್ನ ಫ್ಲಾಗ್ ಶಿಪ್ ಫೋನುಗಳಾದ ಒನ್ ಪ್ಲಸ್ 3 ಮತ್ತು ಒನ್ ಪ್ಲಸ್ 3ಟಿ ಫೋನುಗಳಿಗೆ ಆಕ್ಸಿಜನ್ ಒ.ಎಸ್ 4 ಅನ್ನು ಬಿಡುಗಡೆಗೊಳಿಸಿದೆ. ಆಕ್ಸಿಜನ್ ಒ.ಎಸ್ ಅಪ್ ಡೇಟ್ ಜೊತೆಗೆ ಆ್ಯಂಡ್ರಾಯ್ಡ್ 7.0 ನೌಗಾಟ್ ಅನ್ನು ಕೂಡ ಒನ್ ಪ್ಲಸ್ ನೀಡಲಾರಂಭಿಸಿದೆ.

ನೌಗಾಟ್ ಮತ್ತು ಆಕ್ಸಿಜನ್ನಲ್ಲಿ ಒನ್ ಪ್ಲಸ್ 3

ಹೊಸ ಅಪ್ ಡೇಟ್ ಗಳನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಒನ್ ಪ್ಲಸ್ ತನ್ನ ಗ್ರಾಹಕರಿಗೆ ಕೃತಜ್ಞತೆಗಳನ್ನು ಅರ್ಪಿಸಿದೆ. ಒನ್ ಪ್ಲಸ್ ಬಳಕೆದಾರರು ನಿರಂತರವಾಗಿ ವಿಮರ್ಶೆ ಮಾಡಿದ ಕಾರಣದಿಂದಾಗಿಯೇ ಕಂಪನಿಯು ಹೊಸ ಸಾಫ್ಟ್ ವೇರ್ ಅನ್ನು ಉತ್ತಮವಾಗಿ ಬಿಡುಗಡೆಗೊಳಿಸಲು ಸಾಧ್ಯವಾಗಿದೆ.

ಹೊಸ ಅಪ್ ಡೇಟ್ ಬಗೆಗಿನ ಅಭಿಪ್ರಾಯಗಳನ್ನು https://forums.oneplus.net/feedback/ ನಲ್ಲಿ ತಿಳಿಸುವಂತೆ ಕಂಪನಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಶೇ.80% ಯುವ ಜನತೆ ತಮ್ಮ ಸ್ಮಾರ್ಟ್‌ಪೋನಿನಲ್ಲಿ ಏನು ಮಾಡುತ್ತಾರೆ ಗೊತ್ತಾ..?!?!

ಒ.ಟಿ.ಎ ಮೂಲಕ ಲಭ್ಯವಾಗಲಿರುವ ಆಕ್ಸಿಜನ್ 4.0 ಅಪ್ ಡೇಟ್ ಅನ್ನು ಹಂತಹಂತವಾಗಿ ಬಿಡುಗಡೆಗೊಳಿಸುವುದಾಗಿ ಕಂಪನಿಯು ತಿಳಿಸಿದೆ. ಮೊದಲಿಗೆ ಕೆಲ ಬಳಕೆದಾರರಿಗಷ್ಟೇ ಈ ಅಪ್ ಡೇಟ್ ಗಳು ಲಭ್ಯವಾಗಲಿವೆ. ನಂತರದ ದಿನಗಳಲ್ಲಿ ಎಲ್ಲರಿಗೂ ತಲುಪುತ್ತದೆ.

ಈ ಹೊಸ ಅಪ್ ಡೇಟ್ ನಲ್ಲಿ ಉತ್ತಮಗೊಂಡಿರುವ ಅಂಶಗಳೆಂದರೆ:

> ಹೊಸ ನೋಟಿಫಿಕೇಷನ್ ವಿನ್ಯಾಸ.

> ಹೊಸ ಸೆಟ್ಟಿಂಗ್ಸ್ ಮೆನು ವಿನ್ಯಾಸ.

> ಮಲ್ಟಿ ವಿಂಡೋ.

> ನೋಟಿಫಿಕೇಷನ್ ನಿಂದಲೇ ರಿಪ್ಲೈ ಮಾಡುವ ಸೌಕರ್ಯ.

> ಕಸ್ಟಮ್ ಡಿ.ಪಿ.ಐ ಬೆಂಬಲ.

> ಹೆಚ್ಚುವರಿ ಸ್ಟೇಟಸ್ ಬಾರ್ ಐಕಾನ್ ಆಯ್ಕೆಗಳು.

> ಉತ್ತಮಗೊಂಡ ಶೆಲ್ಫ್ ಕಸ್ಟಮೈಝೇಷನ್.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
OxygenOS 4.0 with Nougat launched for the OnePlus 3 and 3T.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot