15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

By Suneel
|

ಸೆಲ್ಫಿ ಕ್ಯಾಮೆರಾ ಫೋನ್‌ಗಳಿಗೆ ಪ್ರಖ್ಯಾತವಾದ ಓಪ್ಪೋ ತನ್ನ ಲೇಟೆಸ್ಟ್ ಸ್ಮಾರ್ಟ್‌ಫೋನ್‌ 'ಎ57(A57)' ಅನ್ನು ಚೀನಾದಲ್ಲಿ ನೆನ್ನೆಯಷ್ಟೇ ಲಾಂಚ್‌ ಮಾಡಿದೆ. 'ಓಪ್ಪೋ ಎ57' ಸ್ಮಾರ್ಟ್‌ಫೋನ್‌ 16MP ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಡಿಸೆಂಬರ್ 15 ರಿಂದ ಚೀನಾದಲ್ಲಿ ಅಧಿಕೃತವಾಗಿ ಮಾರಾಟವಾಗಲಿದೆ. ಓಪ್ಪೋ ಎ57 ಸ್ಮಾರ್ಟ್‌ಫೋನ್‌ ವಿನ್ಯಾಸ ಎಫ್‌1 ಸೀರೀಸ್‌ ಸ್ಮಾರ್ಟ್‌ಫೋನ್‌ಗಳ ರೀತಿಯಲ್ಲಿಯೇ ಇದೆ. ಸ್ಮಾರ್ಟ್‌ಫೋನ್‌ ಬೆಲೆ ಸುಮಾರು ರೂ.15,800 (1,599 ಯುವಾನ್).

15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

'ಓಪ್ಪೋ ಎ57' ಗುಲಾಬಿ ಗೋಲ್ಡ್, ಗೋಲ್ಡ್ ಬಣ್ಣದ ವಿಭಿನ್ನತೆಗಳಲ್ಲಿ ಲಭ್ಯವಿದೆ. ಸ್ಮಾರ್ಟ್‌ಫೋನ್‌ 5.2 ಇಂಚಿನ ಎಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ 2.5D ಕರ್ವ್‌ಡ್ ಗ್ಲಾಸ್ ವಿನ್ಯಾಸ ಹೊಂದಿದೆ. ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊ ಜೊತೆಗೆ ಓಪ್ಪೋ ಕಲರ್ಸ್ 3.0 ಓಎಸ್ ಚಾಲಿತವಾಗಿದೆ.

360 ಡಿಗ್ರಿ ವೀಡಿಯೊ ಸಪೋರ್ಟ್ ಮಾಡುತ್ತದೆ 'ವಿಎಲ್‌ಸಿ ಪ್ಲೇಯರ್‌': ಹೇಗಿರುತ್ತೇ?

'ಓಪ್ಪೋ ಎ57' 1.4GHz ಕ್ವಾಲ್ಕಂ ಸ್ನಾಪ್‌ಡ್ರಾಗನ್ 435 ಪ್ರೊಸೆಸರ್ ಜೊತೆಗೆ ಅಡ್ರೆನೊ 505 ಜಿಪಿಯು ಗ್ರಾಫಿಕ್ಸ್ ಕಾರ್ಯಕ್ಷಮತೆ ಹೊಂದಿದೆ. 3GB RAM ಮತ್ತು 32GGB ಆಂತರಿಕ ಸ್ಟೋರೇಜ್ ಹೊಂದಿದ್ದು, 128GB ವರೆಗೆ ಮೈಕ್ರೋಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಣೆ ಮಾಡಬಹುದು. 16MP ಸೆಲ್ಫಿ ಕ್ಯಾಮೆರಾ F/2.0 ಅಪರ್ಚರ್ ಹೊಂದಿದೆ. 13MP ಹಿಂಭಾಗ ಕ್ಯಾಮೆರಾ f/2.2 ಅಪರ್ಚರ್, ಪಿಡಿಎಎಫ್ ಮತ್ತು ಫ್ಲ್ಯಾಶ್ ಫೀಚರ್ ಹೊಂದಿದೆ. ಡ್ಯುಯಲ್‌ ಸಿಮ್, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹೊಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

'ಓಪ್ಪೋ ಎ57'(Oppo A57) 4G LTE, ಬ್ಲೂಟೂತ್ ವಿ4.1, ವೈಫೈ, ಜಿಪಿಎಸ್, ಜಿಪಿಆರ್‌ಎಸ್/ಎಡ್ಜ್‌, ಯುಎಸ್‌ಬಿ, ಮತ್ತು 3.5ಎಂಎಂ ಆಡಿಯೋ ಜಾಕ್‌ ಹೊಂದಿದೆ. ಸ್ಮಾರ್ಟ್‌ಫೋನ್ 2,900 ಬ್ಯಾಟರಿ ಸಾಮರ್ಥ್ಯ ಹೊಂದಿದೆ. 'ಓಪ್ಪೋ ಎ57' 149.1 x 72.9 x 7.65 mm ಆಯಾಮಗಳನ್ನು ಹೊಂದಿದ್ದು, 147 ಗ್ರಾಮ ತೂಕವಿದೆ.

15,800 ರೂಗೆ, 16MP ಸೆಲ್ಫಿ ಕ್ಯಾಮೆರಾ/3GB RAM 'ಓಪ್ಪೋ ಎ57' ಲಾಂಚ್

ಓಪ್ಪೋ ಭಾರತದಲ್ಲಿ ಎಫ್‌1 ಸ್ಮಾರ್ಟ್‌ಫೋನ್‌ನ ಅಪ್‌ಗ್ರೇಡ್ ವಿಭಿನ್ನತೆಯ ಡಿವೈಸ್‌ ಅನ್ನು ಲಾಂಚ್‌ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಬೆಲೆ ರೂ.18,990 ಇದ್ದು, ಪ್ರಸ್ತುತದಲ್ಲಿ ಚೀನಾದಲ್ಲಿ ಲಾಂಚ್‌ ಆಗಿರುವ 'ಓಪ್ಪೋ ಎ57' ಸ್ಮಾರ್ಟ್‌ಫೋನ್ ಭಾರತದಲ್ಲಿಯೂ ಲಾಂಚ್‌ ಆಗಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Oppo A57 with 16MP front camera launched in China: Specifications and features. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X