2019 ಕ್ಕೆ ಬರಲಿದೆಯಾ ಒಪ್ಪೋ ಫೋಲ್ಡೇಬಲ್ ಸ್ಮಾರ್ಟ್ ಫೋನ್?

|

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಓಪ್ಪೋ ಇದೀಗ ಫೋಲ್ಡೇಬಲ್ ಫೋನ್ ಬಗ್ಗೆ ಕೆಲಸ ಮಾಡುತ್ತಿದ್ದು ಅದನ್ನು ಸ್ಪೈನ್ ನ ಬಾರ್ಸೆಲೊನಾದಲ್ಲಿ ನಡೆಯುವ ಮೊಬೈಲ್ ವರ್ಡ್ ಕಾನ್ಫರೆನ್ಸ್ ನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎಂದು ವರದಿಯೊಂದು ಬಹಿರಂಗವಾಗಿದೆ.ಟ್ವೀಕರ್ಸ್.ನಾಟ್ ಎಂಬ ಆನ್ ಲೈನ್ ಬ್ಲಾಗ್ ವೊಂದರಲ್ಲಿ ಈ ವರದಿಯನ್ನು ಮಾಡಲಾಗಿದೆ.

ಡಿಸೈನ್ ಮತ್ತು ಸಾಫ್ಟ್ ವೇರ್ ಮಾಹಿತಿ ಇಲ್ಲ:

ಡಿಸೈನ್ ಮತ್ತು ಸಾಫ್ಟ್ ವೇರ್ ಮಾಹಿತಿ ಇಲ್ಲ:

ಒಪ್ಪೋ ಸಂಸ್ಥೆಯ ಪ್ರೊಡಕ್ಟ್ ಮ್ಯಾನೇಜರ್ ಆಗಿರುವ ಚುಕ್ ವಾಂಗ್ ಅವರು ತನ್ನ ಹೆಡ್ ಆಫೀಸ್ ಚೀನಾದ ಶೆನ್ಜೆನ್ ನಲ್ಲಿ ಫೋಲ್ಡೇಬಲ್ ಫೋನ್ ತಯಾರಿಕೆಯನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ ಎಂದು ವರದಿ ತಿಳಿಸುತ್ತಿದೆ. ಹಾಗಂತ ಮುಂಬರುವ ಈ ಫೋನ್ ಬಗೆಗಿನ ಡಿಸೈನ್ ಮಾಹಿತಿಯನ್ನಾಗಲಿ ಅಥವಾ ಸಾಫ್ಟ್ ವೇರ್ ಮಾಹಿತಿಯನ್ನಾಗಲಿ ಬಹಿರಂಗ ಪಡಿಸಿಲ್ಲ. ಒಪ್ಪೋ ಸ್ಕ್ರೀನಿನ ಹಿಂಭಾಗದಲ್ಲಿ ಕ್ಯಾಮರಾವನ್ನು ಅಳವಡಿಸುವ ಬಗ್ಗೆ ಕೆಲಸ ಮಾಡುತ್ತಿದೆ ಎಂಬ ಬಗ್ಗೆಯೂ ಕೂಡ ಮಾಹಿತಿಯನ್ನು ನೀಡಿದ್ದಾರಂತೆ.

5ಜಿ ಫೋನ್ ಬಿಡುಗಡೆ:

5ಜಿ ಫೋನ್ ಬಿಡುಗಡೆ:

ಮುಂದಿನ ವರ್ಷ 5ಜಿ ಫೋನ್ ನ್ನು ಯುರೋಪ್ ನಲ್ಲಿ ಸಂಸ್ಥೆ ಬಹಿರಂಗ ಪಡಿಸಲಿದೆ ಎಂದು ಚುಕ್ ತಿಳಿಸಿದ್ದಾರೆ ಎಂದು ವರದಿ ಹೇಳುತ್ತಿದೆ. ಒಪ್ಪೋ ಫೈಂಡ್ ಸಿರೀಸ್ ನಲ್ಲಿರುವ ಸ್ಮಾರ್ಟ್ ಫೋನ್ ಗಳು 5ಜಿ ಆಗಿರುವ ಸಾಧ್ಯತೆ ಇದೆ ಮತ್ತು ಆ ಬಗ್ಗೆಯೇ ಚುಕ್ ಹೇಳಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಇತರೆ ಸಂಸ್ಥೆಗಳ ಫೋಲ್ಡೇಬಲ್ ಫೋನ್:

ಇತರೆ ಸಂಸ್ಥೆಗಳ ಫೋಲ್ಡೇಬಲ್ ಫೋನ್:

ಒಪ್ಪೋ ಹೊರತು ಪಡಿಸಿ ಸ್ಯಾಮ್ ಸಂಗ್, ಎಲ್ ಜಿ, ಹುವಾಯಿ ಸಂಸ್ಥೆಗಳು ಕೂಡ ಫೋಲ್ಡೇಬಲ್ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ನಿರತವಾಗಿದೆ. ಒಂದು ತಿಂಗಳ ಮುಂಚೆ ವರದಿಯೊಂದು ತಿಳಿಸಿರುವ ಪ್ರಕಾರ ಸ್ಯಾಮ್ ಸಂಗ್ ಸಂಸ್ಥೆ ತನ್ನ ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇಯನ್ನು ಒಪ್ಪೋ ಮತ್ತು ಶಿಯೋಮಿ ಸಂಸ್ಥೆಗಳು ಬಳಸುವುದಕ್ಕೆ ಅನುಮತಿ ನೀಡಲಿದೆ ಎಂದು ಹೇಳಲಾಗಿತ್ತು.

ಬೆಲೆ ಎಷ್ಟಿರಬಹುದು:

ಈಗಾಗಲೇ ಸ್ಯಾಮ್ ಸಂಗ್ ಸಂಸ್ಥೆ ತನ್ನ ಡೆಲವಪರ್ ಕಾನ್ಫರೆನ್ಸ್ ನಲ್ಲಿ ಫೋಲ್ಡೇಬಲ್ ಫೋನ್ ನ್ನು ಪರಿಚಯಿಸಿದೆ.ಇತ್ತೀಚೆಗೊಂದು ಆನ್ ಲೈನ್ ರಿಪೋರ್ಟ್ ಕೂಡ ಸ್ಯಾಮ್ ಸಂಗ್ ನ ಫೋಲ್ಡೇಬಲ್ ಫೋನ್ ಹೇಗಿರಲಿದೆ ಎಂದು ತಿಳಿಸಿತ್ತು.ಈ ವರದಿಯ ಪ್ರಕಾರ ಈ ಫೋನ್ ನ್ನು ಗ್ಯಾಲಕ್ಸಿ ಫ್ಲೆಕ್ಸ್ ಎಂದು ಕರೆಯುವ ಸಾಧ್ಯತೆ ಇದೆ ಮತ್ತು ಇದರ ಬೆಲೆ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಗಿಂತಲೂ ಅಧಿಕವಾಗಿರುವ ನಿರೀಕ್ಷೆ ಇದೆ. ಇದರ ಬೆಲೆ ಅಂದಾಜು $1925 ಯಿಂದ $2565 ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಂದರೆ ಭಾರತೀಯ ರುಪಾಯಿಗಳಲ್ಲಿ ಅಂದಾಜಿಸುವುದಾದರೆ 1,35,896 ಯಿಂದ Rs 1,81,195 ಆಗಿರಬಹುದು.

ಒಪ್ಪೋ ಈ ತಿಂಗಳ ಆರಂಭದಲ್ಲಿ ಹೆಚ್ಎಂಡಿ ಗ್ಲೋಬಲ್ ಮಾಲೀಕತ್ವದ ನೋಕಿಯಾ ಜೊತೆಗೆ ಪೇಟೆಂಟ್ ಗೆ ಸಂಬಂಧಿಸಿದಂತೆ ಸಹಭಾಗಿತ್ವವನ್ನು ಮಾಡಿಕೊಂಡಿತ್ತು. ಈ ಸಹಭಾಗಿತ್ವದ ಕುರಿತಾದ ಮಾಹಿತಿಗಳನ್ನು ಇದುವರೆಗೂ ಜನರಿಗೆ ತಿಳಿಸಿಲ್ಲಯ. ಆದರೆ ಒಪ್ಪೋ ಒಂದು ವರ್ಷದ ಅಗ್ರಿಮೆಂಟ್ ಮಾಡಿಕೊಂಡಿದ್ದು ಅದಕ್ಕಾಗಿ ನೋಕಿಯಾ ಟೆಕ್ನಾಲಜೀಸ್ ಗೆ ಹಣವನ್ನು ಪಾವತಿ ಕೂಡ ಮಾಡಿದೆ ಎಂದು ತಿಳಿಸಲಾಗಿದೆ.

Best Mobiles in India

Read more about:
English summary
Oppo to announce its foldable smartphone at MWC 2019: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X