ಪ್ರಸ್ತುತ ಖರೀದಿಸಲು ಬೆಸ್ಟ್ ಸ್ಮಾರ್ಟ್‌ಫೋನ್ "ಪ್ಯಾನಸೋನಿಕ್ ಎಲುಗಾ ಐ5!!..ಏಕೆ ಗೊತ್ತಾ?

Written By:

ಒಂದು ಸ್ಮಾರ್ಟ್‌ಫೋನ್ ಖರೀದಿಸಲು ಆ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿರಬೇಕು ಮತ್ತು ಬೆಲೆ ಎಷ್ಟಿರಬೇಕು ಎಂದು ಎಲ್ಲರೂ ಚಿಂತಿಸುತಿರುತ್ತಾರೆ.! ಆದರೆ, ನೀವಿನ್ನು ಚಿಂತಿಸುವ ಅವಶ್ಯಕತೆ ಇಲ್ಲ.!! ಏಕೆಂದರೆ, ನೀವು ಇಷ್ಟಪಡುವ ಬಹುತಕ ಫೀಚರ್ಸ್‌ಗಳನ್ನು ಹೊತ್ತು ಪ್ಯಾನಸೋನಿಕ್ ಕಂಪೆನಿಯ ಸ್ಮಾರ್ಟ್‌ಫೋನ್ ಒಂದು ಕೇವಲ 6,499 ರೂಪಾಯಿಗಳಿಗೆ ಬಿಡುಗಡೆಯಾಗಿದೆ.!!

ಹೌದು, ಪ್ಯಾನಸೋನಿಕ್ ಕಂಪೆನಿಯ ನೂತನ ಫೋನ್ ಪ್ಯಾನಸೋನಿಕ್ ಎಲುಗಾ ಐ5 ಸ್ಮಾರ್ಟ್‌ಫೋನ್ ಕೇವಲ 6,499 ರೂಪಾಯಿಗಳಿಗೆ ಬಿಡುಗಡೆಯಾಗಿದ್ದು, ಶಿಯೋಮಿ ರೆಡ್ಮಿ 4, ಮೊಟೊ ಸಿ ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಸೆಡ್ಡುಹೊಡೆದಿದೆ.!! ಬೆಲೆಯಲ್ಲಿ ಹೋಲಿಸಿದರೆ ಭಾರತದಲ್ಲಿಯೇ ಎಲುಗಾ ಐ5 ಅನ್ನು ಬೆಸ್ಟ್ ಫೋನ್ ಎನ್ನಬಹುದಾಗಿದ್ದು, ಈ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಿಸ್‌ಪ್ಲೇ ಹೇಗಿದೆ?!

ಡಿಸ್‌ಪ್ಲೇ ಹೇಗಿದೆ?!

ಪ್ಯಾನಸೋನಿಕ್ ಎಲುಗಾ ಐ5 ಸ್ಮಾರ್ಟ್‌ಫೋನ್ 5 ಇಂಚುಗಳ 720x1280 ಪಿಕ್ಸೆಲ್ ರೆಸೊಲ್ಯೂಷನ್ HD ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ಅಸಾಹಿ ಡ್ರಾಗನ್ ಟ್ರೈಲ್ ಗ್ಲಾಸ್ ರಕ್ಷಣೆ ಹೊಂದಿದ್ದು, ಫೋನ್ ಸ್ಕ್ರೀನ್ ಗುಣಮಟ್ಟ ಅತ್ಯುತ್ತಮ ಎಂದು ಪ್ಯಾನಸೋನಿಕ್ ಕಂಪೆನಿ ಹೇಳಿದೆ.!!

ಪ್ರೊಸೆಸರ್ ಮತ್ತು ಒಎಸ್?

ಪ್ರೊಸೆಸರ್ ಮತ್ತು ಒಎಸ್?

1.25 GHz ಕ್ವಾಡ್ ಕೋರ್ ಮೀಡಿಯಾಟೆಕ್ MT6737 ಪ್ರೊಸೆಸರ್ ಅನ್ನು ಪ್ಯಾನಸೋನಿಕ್ ಎಲುಗಾ ಐ5 ಫೋನ್‌ನಲ್ಲಿ ಅಳವಡಿಸಲಾಗಿದೆ. ಇನ್ನು ಹೈಬ್ರಿಡ್ ಡ್ಯುಯಲ್ ಸಿಮ್ ಹೊಂದಿರುವ ಈ ಫೋನ್ ಆಂಡ್ರಾಯ್ಡ್ 7.0 ನೌಗಾಟ್ ಮೂಲಕ ಕಾರ್ಯನಿರ್ವಹಿಸಲಿದೆ.!!

RAM ಮತ್ತು ಸ್ಟೋರೆಜ್!!

RAM ಮತ್ತು ಸ್ಟೋರೆಜ್!!

ಇದೀಗಷ್ಟೆ ಬಿಡುಗಡೆಯಾಗಿರುವ ಪ್ಯಾನಸೋನಿಕ್ ಎಲುಗಾ ಐ5 ಒಂದೇ ಒಂದು ಕಡಿಮೆ ಫೀಚರ್ ಹೊಂದಿದೆ ಎಂದರೆ ಅದು RAM.!! ಎಲುಗಾ ಐ5 ಫೋನ್ 2GB RAM ಹೊಂದಿದ್ದು, 16GB ಆಂತರಿಕ ಮೆಮೊರಿ ಒಳಗೊಂಡಿದೆ.!! ಎಸ್‌ಡಿ ಕಾರ್ಡ್ ಮೆಮೊರಿಯನ್ನು 128GB ವರೆಗೂ ವಿಸ್ತರಿಸಬಹುದಾಗಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ ಪ್ಯಾನಸೋನಿಕ್ ಎಲುಗಾ ಐ5 ಪೋನ್ 13MP ರಿಯರ್ ಕ್ಯಾಮೆರಾ ಜತೆ LED ಫ್ಲ್ಯಾಶ್ ಮತ್ತು ಸೆಲ್ಫಿಗಾಗಿ 5MP ಫ್ರಂಟ್ ಕ್ಯಾಮೆರಾ ಹೊಂದಿದೆ. ಹಾಗಾಗಿ, ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಮಾದರಿಯಲ್ಲಿ ಕ್ಯಾಮೆರಾ ಫೀಚರ್ ಬಂದಿದೆ ಎನ್ನಬಹುದು.!!

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಎಲುಗಾ ಐ5 2500mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್ 4G, VoLTE,, Wi-Fi, Bluetooth ಮತ್ತು GPS ನಂತಹ ಎಲ್ಲಾ ಫೀಚರ್ಸ್ ಹೊಂದಿದೆ. ಹಾಗಾಗಿ, ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿರುವ ಈ ಪೋನ್ ಶಿಯೋಮಿ ರೆಡ್ಮಿ 4, ಮೊಟೊ ಸಿ ಪ್ಲಸ್‌ಗೆ ಸ್ಪರ್ಧಿ ಎನ್ನಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5-inch display, fingerprint sensor, 4G VoLTE launched for Rs. 6499.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot