ಡಿ. 16 ರ ವರೆಗೆ ಪೇಟಿಎಂ ಕ್ಯಾಷ್ ಬ್ಯಾಕ್ ಡೇ- ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ಆಫರ್.!

|

ಇ-ಕಾಮರ್ಸ್ ಫ್ಲ್ಯಾಟ್ ಫಾರ್ಮ್ ಪೇಟಿಎಂ ಡಿಸೆಂಬರ್ 12 ರಿಂದ 16 ರ ವರೆಗೆ ಪೇಟಿಎಂ ಕ್ಯಾಷ್ ಬ್ಯಾಕ್ ಡೇಸ್ ನ್ನು ಪ್ರಕಟಿಸಿದೆ. ಐದು ದಿನದ ಈ ಸೇಲ್ ನಲ್ಲಿ ಗ್ರಾಹಕರು ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಮನೆಯ ಉಪಕರಣಗಳು ಮತ್ತು ಫ್ಯಾಷನ್ ಸೇರಿದಂತೆ ಬೇರೆಬೇರೆ ವಿಭಾಗದ ವಸ್ತುಗಳಿಗೆ ಭರ್ಜರಿ ಕ್ಯಾಷ್ ಬ್ಯಾಕ್ ಆಫರ್ ನ್ನು ಪಡೆಯಬಹುದು. ಗ್ರಾಹಕರು ಕೆಲವು ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ 5,000 ರುಪಾಯಿ ಮತ್ತು ಲ್ಯಾಪ್ ಟಾಪ್ ಗಳ ಖರೀದಿಯಲ್ಲಿ 20,000 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಮತ್ತು ಮನೆಯ ಸಲಕರಣೆಗಳು ಮೇಲೂ ಕೂಡ 20,000 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಪಡೆಯುವ ಅವಕಾಶವಿದೆ.

ಹೆಚ್ ಡಿಎಫ್ ಸಿ ಬ್ಯಾಂಕ್ ಆಫರ್

ಹೆಚ್ ಡಿಎಫ್ ಸಿ ಬ್ಯಾಂಕ್ ಆಫರ್

ಗ್ರಾಹಕರು ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿ ಮಾಡಿದರೆ ಹೆಚ್ಚುವರಿ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದು. ಈ ಆಫರ್ ರೆಗ್ಯುಲರ್ ಮತ್ತು ಇಎಂಐಯಲ್ಲಿ ಖರೀದಿಸುವಿಕೆ ಎರಡಕ್ಕೂ ಕೂಡ ಅನ್ವಯಿಸುತ್ತದೆ.

ಸ್ಮಾರ್ಟ್ ಫೋನ್ ಗಳಿಗಿರುವ ಆಫರ್ ಗಳು

ಸ್ಮಾರ್ಟ್ ಫೋನ್ ಗಳಿಗಿರುವ ಆಫರ್ ಗಳು

64ಜಿಬಿ ವೇರಿಯಂಟ್ ನ ಐಫೋನ್ ಎಕ್ಸ್ ಗೆ 4,082 ರುಪಾಯಿ ಕ್ಯಾಷ್ ಬ್ಯಾಕ್ ಸೌಲಭ್ಯವಿದ್ದು 81,640 ರುಪಾಯಿಯ ಫೋನ್ ನ್ನು 77,554 ರುಪಾಯಿ ಬೆಲೆಗೆ ಖರೀದಿಸಿದಂತಾಗುತ್ತದೆ. ಗುಗಲ್ ಪಿಕ್ಸಲ್ 2ಎಕ್ಸಎಲ್ ಫೋನ್ ಗೆ 2,000 ರುಪಾಯಿ ಕ್ಯಾಷ್ ಬ್ಯಾಕ್ ಇದ್ದು 37,999 ರುಪಾಯಿ ಬೆಲೆಗೆ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸ ನೋಟ್ 9 ನ್ನು ಪೇಟಿಎಂ ಮಾಲ್ ನಲ್ಲಿ 75,900 ರುಪಾಯಿಗೆ ಮಾರಾಟ ಮಾಡಲಾಗುತ್ತಿದೆ ಅಂದರೆ 9,000 ರುಪಾಯಿಯ ಕ್ಯಾಷ್ ಬ್ಯಾಕ್ ಸೌಲಭ್ಯ ಇದಕ್ಕಿದೆ. ಅದೇ ರೀತಿ ಒಪ್ಪೋ ಎಫ್9 ಪ್ರೋವನ್ನು 22,790 ರುಪಾಯಿ ಬೆಲೆಗೆ ಖರೀದಿಸಬಹುದಾಗಿದ್ದು ಇದಕ್ಕೆ 1,200 ರುಪಾಯಿ ಕ್ಯಾಷ್ ಬ್ಯಾಕ್ ಇದೆ.

ಸಿಓಓ ಹೇಳಿಕೆ:

ಸಿಓಓ ಹೇಳಿಕೆ:

ಪೇಟಿಎಂನ ಸಿಓಓ ಕಿರಣ್ ವಸಿರೆಡ್ಡಿ ಹೇಳುವಂತೆ" ಪೇಟಿಎಂ ಇದೀಗ ಭಾರತೀಯರ ನೆಚ್ಚಿನ ಇಸ್ಟೋರ್ ಪೇಮೆಂಟ್ ವಿಧಾನವಾಗಿದೆ. ಇಲ್ಲಿ ಭಾರತದಾದ್ಯಂತದ ದೊಡ್ಡ ಮಟ್ಟದ ಬ್ರ್ಯಾಂಡ್ ನಿಂದ ಹಿಡಿದು ಸಣ್ಣ ಮಾರಾಟಗಾರರು ಕೂಡ ಇದ್ದಾರೆ ಮತ್ತು ವಿಭಿನ್ನ ಸ್ಟೋರ್ ಗಳು ಕೂಡ ಲಭ್ಯವಿದೆ.

ಪೇಟಿಎಂ ಕ್ಯಾಷ್ ಬ್ಯಾಕ್ ಡೇಸ್ ನಲ್ಲಿ ನಾವು ನಮ್ಮ ಗ್ರಾಹಕರಿಗೆ ಅವರು ಆಫ್ ಲೈನ್ ಅಥವಾ ಆನ್ ಲೈನ್ ಮಾರಾಟಗಾರರೊಂದಿಗೆ ಪೇಟಿಎಂ ಮೂಲಕ ವ್ಯವಹರಿಸಿದಾಗ ರೀವಾರ್ಡ್ ಗಳನ್ನು ಕೊಡುವ ವಿಶೇಷ ಆಫರ್ ಆಗಿದೆ. ಇದು ಮುಂದಿನ ದಿನಗಳಲ್ಲಿ ಮೊಬೈಲ್ ಪೇಮೆಂಟ್ ಗೆ ಹೆಚ್ಚಿನ ಆದ್ಯತೆಯನ್ನು ಭಾರತೀಯರು ನೀಡಬೇಕು ಎಂಬುದನ್ನು ಅಭಿವೃದ್ಧಿಗೊಳಿಸಲು ಮತ್ತು ನಮ್ಮ ಮಾರಾಟಗಾರರಿಗೂ ಅನುಕೂಲ ಮಾಡಿಕೊಡಬೇಕು ಎಂಬ ದೃಷ್ಟಿಕೋನದಲ್ಲಿ ಆರಂಭಿಸಲಾಗಿರುವ ಒಂದು ಪ್ರಯತ್ನ" ಎಂದು ತಿಳಿಸಿದ್ದಾರೆ.

ಹಾಗಾಗಿ ನೀವೂ ಕೂಡ ಪೇಟಿಎಂ ಮೂಲಕ ವ್ಯವಹರಿಸಿ ಕ್ಯಾಷ್ ಬ್ಯಾಕ್ ಪಡೆಯಿರಿ.

Best Mobiles in India

English summary
Paytm Cashback Days announced from December 12 - 16; offers on Samsung Galaxy Note 9, iPhone X and more

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X