5G ಐಫೋನ್‌ಗಳಿಗಾಗಿ ಹೆಚ್ಚು ಕಾಯಬೇಕಿಲ್ಲ..! ಇದೇ ವರ್ಷ ಬಿಡುಗಡೆ..!

By Gizbot Bureau
|

ಆಪಲ್ ಟಿಪ್‌ಸ್ಟರ್ ಮತ್ತು ಕೆಜಿಐ ಸೆಕ್ಯುರಿಟೀಸ್‌ನ ಮಾಜಿ ವಿಶ್ಲೇಷಕ ಮಿಂಗ್-ಚಿ ಕುವೊ ಹೊಸ ಸಂಶೋಧನಾ ಟಿಪ್ಪಣಿ ಪ್ರಕಟಿಸಿದ್ದಾರೆ ಎಂದು ಮ್ಯಾಕ್‌ರೂಮರ್ಸ್ ವರದಿ ಮಾಡಿದೆ. ಆಪಲ್ 2020ರ ದ್ವಿತೀಯಾರ್ಧದಲ್ಲಿ sub-6GHz ಮತ್ತು sub-6GHz-plus-mmWave ಐಫೋನ್ ಮಾದರಿಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ ಎಂದು ಕುವೊ ಹೇಳಿದ್ದಾರೆ ಎಂದು ಮ್ಯಾಕ್ ರೂಮರ್ಸ್ ವರದಿ ಮಾಡಿದೆ. ಎಲ್ಲಾ ಐಫೋನ್ ಮಾದರಿಗಳು ಮೂರನೇ ತ್ರೈಮಾಸಿಕದ ಕೊನೆ ಅಥವಾ ನಾಲ್ಕನೇ ತ್ರೈಮಾಸಿಕದ ಆರಂಭದಲ್ಲಿ ಪ್ರಾರಂಭವಾಗುತ್ತವೆ ಎಂದು ಕುವೊ ಹೇಳಿದ್ದಾರೆ.

ಜನವರಿ

ವರದಿಯ ಪ್ರಕಾರ, sub-6GHz ಮತ್ತು mmWave ಬೆಂಬಲಿತ ಐಫೋನ್ ಮಾದರಿಗಳನ್ನು ಆಪಲ್‌ ಅಭಿವೃದ್ಧಿಪಡಿಸುತ್ತಿದೆ ಎಂದು ಕುವೊ ಬಹಿರಂಗಪಡಿಸಿದ್ದಾರೆ. ಡಿಸೆಂಬರ್ 2020 ಅಥವಾ ಜನವರಿ 2021 ರವರೆಗೆ mmWave ಮಾದರಿಗಳ ಬಿಡುಗಡೆಯನ್ನು ಆಪಲ್ ತಡೆಹಿಡಿಯಬಹುದು ಎಂದು ಸುಸ್ಕ್ವೆಹನ್ನಾ ವಿಶ್ಲೇಷಕ ಮೆಹದಿ ಹೊಸ್ಸೇನಿ ಹೇಳಿದ ಕೆಲವೇ ಕೆಲವು ದಿನಗಳ ನಂತರ ಈ ಸಂಶೋಧನಾ ಟಿಪ್ಪಣಿ ಬಂದಿದೆ.

5ಜಿ ಐಫೋನ್

ಹೊಸ್ಸೇನಿ ಪ್ರಕಾರ, 5ಜಿ ಐಫೋನ್ ಮಾದರಿಗಳು ಎರಡು ಬ್ಯಾಚ್‌ಗಳಲ್ಲಿ ಮಾರುಕಟ್ಟೆಗೆ ಬರಬಹುದು. ಕಂಪನಿ ಸೆಪ್ಟೆಂಬರ್‌ನಲ್ಲಿ ಮೊದಲು sub-6GHz ಮಾದರಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ನಂತರ, ಡಿಸೆಂಬರ್ ಅಥವಾ ಜನವರಿಯಲ್ಲಿ mmWave ಮಾದರಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. "ನಾವು ಪರಿಶೀಲಿಸಿದಂತೆ, ಬಿಡುಗಡೆಯ ವಿಳಂಬಕ್ಕೆ ಆಂಟೇನಾ ಇನ್‌ ಪ್ಯಾಕೇಜ್‌ (ಐಐಪಿ) ಮಾದರಿಗಳನ್ನು ಥರ್ಡ್‌ ಪಾರ್ಟಿಯಿಂದ ಖರೀದಿಸುವ ಬದಲು ಸ್ವತಃ ಆಪಲ್‌ ಉತ್ಪಾದನೆಗೆ ಮುಂದಾಗಿರುವುದು ಕಾರಣವಾಗಿದೆ.

ಡಿಸೆಂಬರ್

ಡಿಸೆಂಬರ್ 2019ರಲ್ಲಿ, 5ಜಿ ಐಫೋನ್‌ನ ಬೆಲೆ ನಿರೀಕ್ಷೆಯಷ್ಟು ಹೆಚ್ಚಾಗುವುದಿಲ್ಲ ಎಂದು ಕುವೊ ಸೂಚಿಸಿದ್ದರು. ಈ ವರ್ಷದ ಶ್ರೇಣಿಗೆ ಹೋಲಿಸಿದರೆ ಆಪಲ್ 5ಜಿ ಐಫೋನ್‌ಗಳ ಬೆಲೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಿಲ್ಲ ಎಂದು ಕುವೊ ನಂಬಿದ್ದಾರೆ. ತನ್ನ ಸಂಶೋಧನಾ ಟಿಪ್ಪಣಿಯಲ್ಲಿ, ಕುವೊ ಆಪಲ್ ತನ್ನ ಪೂರೈಕೆ ಸರಪಳಿ ವೆಚ್ಚ ಕಡಿಮೆ ಮಾಡುವ ಮೂಲಕ 5ಜಿ ವೆಚ್ಚವನ್ನು ಸರಿದೂಗಿಸಲು ಉದ್ದೇಶಿಸಿದೆ,

ಆಪಲ್ ಐಫೋನ್‌

ಇನ್ನು, ಈ ವರ್ಷದಿಂದ ಆಪಲ್ ಐಫೋನ್‌ಗಳನ್ನು ವರ್ಷದಲ್ಲಿ ಎರಡು ಬಾರಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ವರ್ಷದ ಮೊದಲಾರ್ಧದಲ್ಲಿ ಕಡಿಮೆ-ಮಟ್ಟದ ಐಫೋನ್‌ಗಳ ಬಿಡುಗಡೆ ಹಾಗೂ ದ್ವಿತೀಯಾರ್ಧದಲ್ಲಿ ಉನ್ನತ-ಮಟ್ಟದ ಐಫೋನ್‌ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕುವೊ ತಿಳಿಸಿದ್ದಾರೆ.

Best Mobiles in India

Read more about:
English summary
Planning To Buy A 5G Capable iPhone? You Might Have To Wait A Little Longer

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X