'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ.!!

|

ಚೀನಾ ಮೂಲದ ಜನಪ್ರಿಯ ರಿಯಲ್‌ ಮಿ ಸ್ಮಾರ್ಟ್‌ಫೋನ್‌ ಕಂಪನಿಯ ''ರಿಯಲ್‌ ಮಿ 2 ಪ್ರೋ'' ಸ್ಮಾರ್ಟ್‌ಫೋನ್‌ ಈಗಾಗಲೇ ಬಿಡುಗಡೆ ಆಗಿ ಮಾರುಕಟ್ಟೆಯಲ್ಲಿ ಸದ್ದು ಮಾಡಿದ್ದು, ಇದೀಗ ಮತ್ತೆ ಭಾರೀ ಸುದ್ದಿಯಲ್ಲಿದೆ. ಅದೇನೆಂದರೇ ಭಾರತೀಯ ಮಾರುಕಟ್ಟೆಯಲ್ಲಿ ''ರಿಯಲ್‌ ಮಿ 2 ಪ್ರೋ'' ಸ್ಮಾರ್ಟ್‌ಫೋನಿನ ಬೆಲೆಯಲ್ಲಿ ಭಾರೀ ಕಡಿತವಾಗಿದ್ದು, ಹೀಗಾಗಿ ಈ ಸ್ಮಾರ್ಟ್‌ಫೋನ್‌ ಖರೀದಿಗೆ ಇದುವೇ ಸರಿಯಾದ ಸಮಯ.

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ.!!

ರಿಯಲ್‌ ಮಿ ಕಂಪನಿಯ 'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, ಇ ಕಾಮರ್ಸ್ 'ಫ್ಲಿಪ್‌ಕಾರ್ಟ್' ನಲ್ಲಿ ಹೊಸ ರಿಯಾಯಿತಿ ಬೆಲೆಯಲ್ಲಿ ಲಭ್ಯ. 4GB ಸಾಮರ್ಥ್ಯ RAM ಮತ್ತು 64 GB ಸಂಗ್ರಹ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ ಬೆಲೆ 12,990ರೂ.ಗಳು ಆಗಿದೆ ಮತ್ತು 6 GB ಸಾಮರ್ಥ್ಯ RAM ಮತ್ತು 64GB ಸಂಗ್ರಹ ಸಾಮರ್ಥ್ಯದ ವೇರಿಯಂಟ್ ಸ್ಮಾರ್ಟ್‌ಫೋನ್‌ ಬೆಲೆಯು 14,990ರೂ.ಗಳಿಗೆ ದೊರೆಯಲಿದೆ.

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ.!!

ಅಗ್ಗದ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಫೀಚರ್ಸ್‌ಗಳನ್ನು ಪರಿಚಯಿಸಿ ಈಗಾಗಲೇ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ರಿಯಲ್‌ ಮಿ ಸ್ಮಾರ್ಟ್‌ಫೋನ್ ಕಂಪನಿಯ ರಿಯಲ್‌ ಮಿ 2 ಪ್ರೋ ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರಿಗೆ ಪ್ರಿಯವಾಗಿದೆ. ಹಾಗಾದರೇ ರಿಯಲ್‌ ಮಿ 2 ಪ್ರೋ ಸ್ಮಾರ್ಟ್‌ಫೋನ್ ಯಾವೆಲ್ಲಾ ವಿಶೇಷ ಫೀವರ್ಸ್‌ಗಳ ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ ಮತ್ತು ರಚನೆ

ಡಿಸ್‌ಪ್ಲೇ ಮತ್ತು ರಚನೆ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಬಾಹ್ಯ ರಚನೆ ಅತ್ಯಂತ ಆಕರ್ಷಕವಾಗಿದ್ದು, ಇದರ ಡಿಸ್‌ಪ್ಲೇಯು ಕಡಿಮೆ ಅಂಚನ್ನು ಹೊಂದಿದೆ. ಇನ್ನೂ 2340x1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.3 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 19.5:9 ಆಗಿದೆ. ವಿಶಾಲವಾದ ಡಿಸ್‌ ಇದಾಗಿದ್ದು, ಡಿಸ್‌ಪ್ಲೇಯ ಗುಣಮಟ್ಟ ಉತ್ತಮವಾಗಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ ಸಂಸ್ಥೆಯ 'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್ 660 AIE ಅತ್ಯುತ್ತಮ ಪ್ರೊಸೆಸರ್‌ ಅನ್ನು ಹೊಂದಿರುವುದರೊಂದಿಗೆ ಅಡ್ರೆನೊ 512 GPU ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಕಂಪನಿಯ ಕಲರ್OS 5.2 ತಳಹದಿಯೊಂದಿಗೆ, ಆಂಡ್ರಾಯ್ಡ್ 8.1 ಓರಿಯೊನಲ್ಲಿ ಕಾರ್ಯನಿರ್ವಹಿಸುತ್ತದೆ.

ಮೆಮೊರಿ

ಮೆಮೊರಿ

ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ದೊರೆಯಲಿದ್ದು, 4GB ಸಾಮರ್ಥ್ಯ RAM ಮತ್ತು 64 GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದರೇ, ಇನ್ನೊಂದು ವೇರಿಯಂಟ್ 6 GB ಸಾಮರ್ಥ್ಯ RAM ಮತ್ತು 64GB ಸಂಗ್ರಹ ಸಾಮರ್ಥ್ಯಚನ್ನು ಒಳಗೊಂಡಿದೆ. ಇದರೊಂದಿಗೆ ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶ ನೀಡಲಾಗಿದೆ.

ಕ್ಯಾಮೆರಾ

ಕ್ಯಾಮೆರಾ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನಿನ ಎರಡು ವೇರಿಯಂಟ್‌ಗಳ ಕ್ಯಾಮೆರಾ ಸಾಮರ್ಥ್ಯ ಒಂದೇ ಆಗಿದ್ದು, ಹಿಂಭಾಗದಲ್ಲಿ ಪ್ರಮುಖ ಕ್ಯಾಮೆರಾ 16 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದು, ಸೆಕೆಂಡರಿ ಕ್ಯಾಮೆರಾ 2 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನೂ ಸೆಲ್ಫಿಗಾಗಿ ಮುಂಬದಿಯಲ್ಲಿ 16 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಕ್ಯಾಮೆರಾವನ್ನು ನೀಡಲಾಗಿದೆ.

ಬ್ಯಾಟರಿ ಶಕ್ತಿ

ಬ್ಯಾಟರಿ ಶಕ್ತಿ

'ರಿಯಲ್‌ ಮಿ 2 ಪ್ರೋ' ಸ್ಮಾರ್ಟ್‌ಫೋನ್‌ 3500mAh ಶಕ್ತಿ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, ಪೂರ್ಣ ಚಾರ್ಜ್‌ ಬ್ಯಾಟಿರಿಯು ಒಂದು ದಿನದ ಮಟ್ಟಿಗೆ ನಿರಾಂತಕವಾಗಿ ಬಾಳಕೆ ಬರುತ್ತದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್ ನೀಡಲಾಗುವುದು. ಇದರೊಂದಿಗೆ OTG, WI-FI ನಂತಹ ಇತರೆ ಸೌಲಭ್ಯಗಳನ್ನು ಸಹ ಕಾಣಬಹುದು.

Best Mobiles in India

English summary
Chinese smartphone maker Realme has slashed the price of its Realme 2 Pro mobile in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X