ಅಗ್ಗದ ಬೆಲೆಯ 'ರಿಯಲ್‌ ಮಿ C1' ಸ್ಮಾರ್ಟ್‌ಫೋನ್ ಸೇಲ್ ಆರಂಭ.!

|

ಕಡಿಮೆ ದರದ ಸ್ಮಾರ್ಟ್‌ಫೋನ್‌ ತಯಾರಿಕೆಗೆ ಹೆಸರುವಾಸಿಯಾಗಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್‌ ಕಂಪನಿ 'ರಿಯಲ್ ಮಿ'ಯು ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನನ್ನು ಗುರುತಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಗ್ರಾಹಕರ ಮನಗೆಲ್ಲಲು ರಿಯಲ್ ಮಿ ಕಂಪನಿಯು 'ರಿಯಲ್ ಮಿ C1' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿತ್ತು. ಇದೀಗ ಮತ್ತೆ 'ರಿಯಲ್ ಮಿ C1 (2019)' ಸ್ಮಾರ್ಟ್‌ಫೋನಿನ್ ಅಪ್‌ಗ್ರೇಟ್‌ ಎಡಿಷನಿನ ಸೇಲ್ ಆರಂಭವಾಗಿದೆ.

ಅಗ್ಗದ ಬೆಲೆಯ 'ರಿಯಲ್‌ ಮಿ C1' ಸ್ಮಾರ್ಟ್‌ಫೋನ್ ಸೇಲ್ ಆರಂಭ.!

ಹೌದು, ರಿಯಲ್‌ ಮಿ ಕಂಪನಿಯು 'ರಿಯಲ್ ಮಿ C1 (2019)' ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ರಿಲೀಸ್ ಮಾಡಿದ್ದು, ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ದೊರೆಯಲಿದೆ. ಎರಡು ಮಾದರಿಗಳಲ್ಲಿ ಲಭ್ಯವಿದ್ದು, 2GB RAM ಮತ್ತು 32GB ಆಂಗರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಮಾದರಿ ಬೆಲೆಯು 7,499ರೂ.ಗಳು ಮತ್ತು 3GB RAM/ 32GB ಆಂತರಿಕ ಶೇಖರಣ ಸಾಮರ್ಥ್ಯ ಹೊಂದಿರುವ ಸ್ಮಾರ್ಟ್‌ಫೋನ್‌ ಬೆಲೆಯು 8,499ರೂ.ಗಳು.

ಅಗ್ಗದ ಬೆಲೆಯ 'ರಿಯಲ್‌ ಮಿ C1' ಸ್ಮಾರ್ಟ್‌ಫೋನ್ ಸೇಲ್ ಆರಂಭ.!

ಈ ಹೊಸ ಸ್ಮಾರ್ಟ್‌ಫೋನ್‌ ಅಗ್ಗದ ಬೆಲೆಯನ್ನು ಹೊಂದಿರುವುದರಿಂದ ಭಾರತೀಯ ಗ್ರಾಹಕರನ್ನು ಬಹುಬೇಗ ತನ್ನತ್ತ ಆಕರ್ಷಿಸಲಾಗುವುದು ಎಂದು ಹೇಳಲಾಗುತ್ತಿದೆ. RAM ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಬಿಡುಗಡೆ ಆಗಿರುವ 'ರಿಯಲ್‌ ಮಿ C1' ಸ್ಮಾರ್ಟ್‌ಫೋನ್‌ ಡಿಪ್ ಬ್ಲ್ಯಾಕ್ ಮತ್ತು ಓಸಿಯನ್ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯ ಇರುತ್ತವೆ. ಹಾಗಾದರೇ ರಿಯಲ್‌ ಮಿ ಕಂಪನಿಯ 'ರಿಯಲ್ ಮಿ C1' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ನೋಡೋಣ ಬನ್ನಿ.

ವಿನ್ಯಾಸ

ವಿನ್ಯಾಸ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ ಓಷಿಯನ್ ಬ್ಲೂ ಮತ್ತು ಡೀಪ್ ಬ್ಲಾಕ್ ಬಣ್ಣಗಳಲ್ಲಿ ಲಭ್ಯವಾಗಲಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, ಮುಂಭಾಗದದಲ್ಲಿ ಐಫೋನ್ X ಮಾದರಿಯ ನೋಚ್‌ನಲ್ಲಿ ಸೆಲ್ಫಿ ಕ್ಯಾಮೆರಾ ಹೊಂದಿದ್ದು, AI ಫೇಸ್‌ ಅನ್‌ಲಾಕ್ ಫೀಚರ್‌ ಇದೆ. ಯುನಿಬಾಡಿ ಗ್ಲಾಸ್ ವಿನ್ಯಾಸ ಹೊಂದಿದ್ದು, ಬೆಜಲ್‌ ಲೆಸ್‌ ಡಿಸ್‌ಪ್ಲೇ ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 6.2 ಇಂಚಿನ HD+ ಗುಣಮಟ್ಟದ 19:9 ಅನುಪಾತನದ ಡಿಸ್‌ಪ್ಲೇ ಹೊಂದಿದೆ. ಐಫೋನ್ X ಮಾದರಿಯ ನೋಚ್ ಡಿಸ್‌ಪ್ಲೇ ಹಾಗೂ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.1 ಓರಿಯೋ ಬೆಂಬಲಿತ ColorOS 5.1 ನಿಂದ ಕಾರ್ಯನಿರ್ವಹಿಸುತ್ತಿದ್ದು, ಆಂಡ್ರಾಯ್ಡ್ 9.0 ಪೈ ಅಪ್‌ಡೇಟ್ ದೊರೆಯಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ C1 ನಲ್ಲಿ ಒಕ್ಟಾಕೋರ್‌ನ ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅಳವಡಿಸಲಾಗಿದೆ. ಆಡ್ರಿನೋ 506 GPU ಕೂಡ ಕಾಣಬಹುದಾಗಿದ್ದು, ಗೇಮಿಂಗ್‌ ಮತ್ತೀತರ ಮಲ್ಟಿಮೀಡಿಯಾ ಅನುಭವಗಳನ್ನು ಉತ್ತಮಗೊಳಿಸಿತ್ತದೆ. ರಿಯಲ್‌ಮಿ C1 ನ ವೇಗ 1.8GHz ಇದ್ದು, ಇಷ್ಟು ಕಡಿಮೆ ಬೆಲೆಯಲ್ಲಿ ದೊರೆಯುವ ಬೆಸ್ಟ್‌ ಸ್ಮಾರ್ಟ್‌ಫೋನ್‌ ಆಗಿದೆ.

ಮೆಮೊರಿ

ಮೆಮೊರಿ

ಈ ಮೊದಲು ರಿಯಲ್ ಮಿ C1 ಒಂದೇ ಆವೃತ್ತಿಯಲ್ಲಿ ದೊರೆಯುತ್ತಿತ್ತು, 2 GB RAM ಮತ್ತು 16 GB ಇಂಟರ್ನಲ್ ಮೆಮೊರಿಯೊಂದಿಗೆ ಲಭ್ಯವಿದ್ದ ಈ ಸ್ಮಾರ್ಟ್‌ಪೋನ್ ಇದೀಗ 3GB RAM ಮತ್ತು 32 GB ಮೆಮೊರಿಯ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಎರಡೂ ಮಾದರಿಯ ಫೋನ್‌ಗಳ ಮೆಮೊರಿಯನ್ನು ಎಸ್‌ಡಿ ಕಾರ್ಡ್‌ ಮೂಲಕ 256 GBವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ರಿಯಲ್ ಮಿ C1ನಲ್ಲಿ ಅತಿ ಕಡಿಮೆ ಬೆಲೆಗೆ ಡ್ಯುಯಲ್‌ ಕ್ಯಾಮೆರಾ ನೀಡಿದ್ದು, ಹಿಂಭಾಗದಲ್ಲಿ 13 MP+2 MP ಲೆನ್ಸ್ ಅಳವಡಿಸಲಾಗಿದೆ. ಮುಂಭಾಗದಲ್ಲಿ 5 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಕ್ಯಾಮೆರಾ AI ಬೆಂಬಲಿತವಾಗಿದ್ದು, ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ಕೃತಕ ಬುದ್ದಿಮತ್ತೆ ಆಧಾರಿತ ಕ್ಯಾಮೆರಾ ತಂತ್ರಜ್ಞಾನ ಅತ್ಯತ್ತಮವಾಗಿದೆ ಎಂದು ಹೇಳಬಹುದು.

ಬ್ಯಾಟರಿ

ಬ್ಯಾಟರಿ

ಹೊಸ ರಿಯಲ್ ಮಿ C1 ಸ್ಮಾರ್ಟ್‌ಫೋನ್‌ 4230mAh ಬ್ಯಾಟರಿ ಹೊಂದಿದ್ದು. ಎರಡು ದಿನಗಳವರೆಗೆ ಸ್ಮಾರ್ಟ್‌ಫೋನಿಗೆ ಈ ಬ್ಯಾಟರಿಯು ಲೈಫ್ ನೀಡುತ್ತದೆ. ಅಲ್ಲದೇ ಪವರ್ ಸೇವಿಂಗ್ ಮೋಡ್ ಇದ್ದು, ಬ್ಯಾಟರಿಯನ್ನು ಹೆಚ್ಚು ಕಾಲ ಬಾಳಲು ಸಹಕರಿಸುತ್ತದೆ.

Best Mobiles in India

English summary
Realme C1 (2019) is available for purchase via open sale through Flipkart.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X