15,000 ರುಪಾಯಿ ಒಳಗೆ ಖರೀದಿಸಬಹುದಾದ ಬೆಸ್ಟ್ ರಿಯಲ್ ಮಿ ಫೋನ್ ಗಳು

By Gizbot Bureau
|

ಕಳೆದ ಒಂದುವರೆ ವರ್ಷದಲ್ಲಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ರಿಯಲ್ ಮಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುತ್ತಿದೆ. ಶಿಯೋಮಿ, ವಿವೋ, ಓಪ್ಪೋ ಮತ್ತು ಹಾನರ್ ಸಂಸ್ಥೆಗಳಿಗೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆಯೊಡ್ಡುತ್ತಿದೆ ರಿಯಲ್ ಮಿ ಸಂಸ್ಥೆ. ಈ ಸಮಯದಲ್ಲಿ ಸಾಕಷ್ಟು ಆಕರ್ಷಕ ಸಂಖ್ಯೆಯ ಫೋನ್ ಗಳನ್ನು ರಿಯಲ್ ಮಿ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ.

ರಿಯಲ್ ಮಿ 5 ಸರಣಿ

5ನೇ ಜನರೇಷನ್ನಿನ ಮಿಡ್ ರೇಂಜ್, ಬಜೆಟ್ ಸ್ಮಾರ್ಟ್ ಫೋನ್, ರಿಯಲ್ ಮಿ 5 ಸರಣಿ ಸೇರಿದಂತೆ ಹಲವು ಫೋನ್ ಗಳು ಬಿಡುಗಡೆಗೊಂಡಿವೆ. ಇದರ ಜೊತೆಗೆ ಸಿ ಮತ್ತು ಯು ಸರಣಿ ಡಿವೈಸ್ ಗಳು ಕೂಡ ಎಂಟ್ರಿ ಲೆವೆಲ್ ಸೆಗ್ಮೆಂಟ್ ಗಳಲ್ಲಿ ಬಿಡುಗಡೆ ಕಂಡಿವೆ. ಇಷ್ಟು ಸಣ್ಣ ಸಮಯದಲ್ಲಿ ಅತೀ ಹೆಚ್ಚು ಸಂಖ್ಯೆಯ ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಂಡಿರುವುದರ ಪರಿಣಾಮವಾಗಿ ಗ್ರಾಹಕ ಸ್ವಲ್ಪ ಗೊಂದಲಕ್ಕೆ ಬಿದ್ದಿದ್ದಾನೆ.

ರಿಯಲ್ ಮಿ

ರಿಯಲ್ ಮಿ ಸಿಇಓ ಆಗಿರುವ ಮಾಧವ್ ಶೇಟ್ ರಿಯಲ್ ಮಿ ಎಕ್ಸ್ ಟಿ ಫೋನ್ ಬಿಡುಗಡೆಯ ಸಂದರ್ಬದಲ್ಲಿ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದಾರೆ.ಶೇಟ್ ಅವರು ವಿವಧ ಡಿವೈಸ್ ಗಳ ಕ್ವಿಕ್ ರಿವ್ಯೂವನ್ನು ನೀಡಿದ್ದಾರೆ ಮತ್ತು ಆ ಡಿವೈಸ್ ಗಳ ಹಿಂದಿನ ಲಾಜಿಕ್ ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ರಿಯಲ್ ಮಿ ಸಂಸ್ಥೆಯ ಹೆಚ್ಚಿನ ಡಿವೈಸ್ ಗಳು ಇದೀಗ 15,000ದ ಒಳಗೆ ಲಭ್ಯವಾಗುತ್ತದೆ. ಒಂದು ವೇಳೆ ನೀವೂ ಕೂಡ ರಿಯಲ್ ಮಿ ಬ್ರ್ಯಾಂಡಿನ ಸ್ಮಾರ್ಟ್ ಫೋನ್ ನ್ನು ಹುಡುಕುತ್ತಿದ್ದರೆ ನಿಮ್ಮ ಸಮಯವನ್ನು ಹೆಚ್ಚು ವ್ಯರ್ಥ ಮಾಡದೇ ಈ ಲೇಖನವನ್ನು ಒಮ್ಮೆ ಓದಿಕೊಳ್ಳಿ.

ರಿಯಲ್ ಮಿ ಸಂಸ್ಥೆಯ 15,000 ರುಪಾಯಿ ಒಳಗಿನ ಬೆಸ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ರಿಯಲ್ ಮಿ 5 ಪ್ರೋ

ರಿಯಲ್ ಮಿ 5 ಪ್ರೋ

ಈ ಲಿಸ್ಟ್ ನಲ್ಲಿರುವ ಮೊದಲ ಫೋನ್ ಎಂದರೆ ರಿಯಲ್ ಮಿ 5 ಪ್ರೋ. ರಿಯಲ್ ಮಿ ಸಂಸ್ಥೆ ಬಿಡುಗಡೆಗೊಳಿಸಿರುವ ನೂತನ ಸ್ಮಾರ್ಟ್ ಫೋನ್. 15,000 ರುಪಾಯಿ ಒಳಗೆ ಖರೀದಿಸಬಹುದಾದ ಬೆಸ್ಟ್ ರಿಯಲ್ ಮಿ ಫೋನ್ ಎಂದರೆ ರಿಯಲ್ ಮಿ5 ಪ್ರೋ. ಈ ಡಿವೈಸ್ ನ ಬೇಸ್ ಮಾಡೆಲ್ ನ ಬೆಲೆ 13,999 ರುಪಾಯಿಗೆ ಪ್ರಾರಂಭವಾಗುತ್ತದೆ. ಈ ಫೋನಿನ ಪ್ರಮುಖ ಹೈಲೆಟ್ ಎಂದರೆ ಕ್ವಾಡ್ ಕ್ಯಾಮರಾ ಸೆಟ್ ಹಿಂಭಾಗದಲ್ಲಿ ಅಳವಡಿಸಲಾಗಿದೆ.

ರಿಯಲ್ ಮಿ 5

ರಿಯಲ್ ಮಿ 5

ಈ ಲಿಸ್ಟ್ ನಲ್ಲಿರುವ ಎರಡನೇ ಸ್ಮಾರ್ಟ್ ಫೋನ್ ಎಂದರೆ ಅದು ರಿಯಲ್ ಮಿ 5. ರಿಯಲ್ ಮಿ 5 ಪ್ರೋ ನ ಸ್ವಲ್ಪ ಕೆಳಗಿನ ವರ್ಷನ್ ಇದಾಗಿದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ಹೊಂದಿರುವ ಬಹಳ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಇದಾಗಿದೆ. ಇದರ ಬೇಸ್ ಮಾಡೆಲ್ ಕೇವಲ 9,999 ರುಪಾಯಿ ಬೆಲೆಗೆ ನಿಮಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ.ಸ್ನ್ಯಾಪ್ ಡ್ರ್ಯಾಗನ್ 665 ಎಐಇ ಯನ್ನು ಇದರಲ್ಲಿ ಅಳವಡಿಸಲಾಗಿದ್ದು 5,000mAh ಬ್ಯಾಟರಿ ಸಾಮರ್ಥ್ಯವಿದೆ. ಹೋಲಿಕೆ ಮಾಡಿ ಹೇಳುವುದಾದರೆ ರಿಯಲ್ ಮಿ 5 ಪ್ರೋ ಸ್ನ್ಯಾಪ್ ಡ್ರ್ಯಾಗನ್ 712 AIE ಮತ್ತು 48-ಮೆಗಾಪಿಕ್ಸಲ್ ಪ್ರೈಮರಿ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್ ಮಿ 3

ರಿಯಲ್ ಮಿ 3

ಲಿಸ್ಟ್ ನಲ್ಲಿರುವ ಮೂರನೇ ಡಿವೈಸ್ ರಿಯಲ್ ಮಿ 3. ಇದು ಮೀಡಿಯಾ ಟೆಕ್ ಹೆಲಿಯೋ ಪಿ70 ಸಾಕೆಟ್ ನ್ನು ಹೊಂದಿದೆ. ಇದರಲ್ಲಿ 4,230mAh ನ ಬ್ಯಾಟರಿ ವ್ಯವಸ್ಥೆ ಇದ್ದು ಡುಯಲ್ ಕ್ಯಾಮರಾವನ್ನು ಹಿಂಭಾಗದಲ್ಲಿ 7ಕೈಗೆಟುಕುವ ಬೆಲೆಯಲ್ಲಿ ಅಂದರೆ ಕೇವಲ 8,499 ರುಪಾಯಿಗೆ ಸಿಗುತ್ತದೆ. ಯುನಿಬಾಡಿ ಡಿಸೈನ್ ನ್ನು ಕಂಪೆನಿಯು ಹಿಂಭಾಗದಲ್ಲಿ ಅಳವಡಿಸಿದ್ದು ಗ್ರೇಡಿಯಂಟ್ ಫಿನಿಶ್ ನ್ನು ನೀಡಲಾಗಿದೆ.

ರಿಯಲ್ ಮಿ 3ಐ

ರಿಯಲ್ ಮಿ 3ಐ

15,000 ರುಪಾಯಿ ಒಳಗಿನ ಮತ್ತೊಂದು ರಿಯಲ್ ಮಿ ಬೆಸ್ಟ್ ಫೋನಿನ ಬಗ್ಗೆ ಹೇಳುವುದಾದರೆ ರಿಯಲ್ ಮಿ 3ಐ ಸೂಕ್ತ ಆಯ್ಕೆಯಾಗಿರುತ್ತದೆ. ರಿಯಲ್ ಮಿ 3 ಗಿಂತ ಸ್ವಲ್ಪ ಹೆಚ್ಚಿನ ವರ್ಷನ್ ಇದಾಗಿದೆ. ಮೀಡಿಯಾ ಟೆಕ್ ಹೆಲಿಯೋ ಪಿ60 ಸಾಕೆಟ್ ನೊಂದಿಗೆ ಬರುವ ಈ ಫೋನ್ 4,230mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ ಜೊತೆಗೆ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಒಳಗೊಂಡಿರುತ್ತದೆ. ರಿಯಲ್ ಮಿ 3ಐ ನ ಬೇಸ್ ಮಾಡೆಲ್ ಅಂದರೆ 3ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ವ್ಯವಸ್ಥೆಯ ಫೋನಿನ ಬೆಲೆ ರುಪಾಯಿ 7,999 ರುಪಾಯಿಗಳು.

ರಿಯಲ್ ಮಿ ಯು1

ರಿಯಲ್ ಮಿ ಯು1

ರಿಯಲ್ ಮಿ ಆಲ್ಫಾಬೆಟ್ ಮಾಡೆಲ್ ರಿಯಲ್ ಮಿ ಯು1. ಈ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಹೆಲಿಯೋ ಪಿ70 ಸಾಕೆಟ್ ಜೊತೆಗೆ 4GB RAM ಮತ್ತು 64GB ಇಂಟರ್ನಲ್ ವ್ಯವಸ್ಥೆಯನ್ನು ಹೊಂದಿದೆ. 25-ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಲಭ್ಯವಾಗುವ 10,000 ರುಪಾಯಿ ಒಳಗಿನ ವಿಶೇಷ ಫೋನ್ ಇದಾಗಿದೆ. ಇದರ ಬೇಸ್ ಮಾಡೆಲ್ ನ ಬೆಲೆ 8,999 ರುಪಾಯಿಗಳು.

ರಿಯಲ್ ಮಿ ಸಿ2

ರಿಯಲ್ ಮಿ ಸಿ2

ಈ ಲಿಸ್ಟ್ ನಲ್ಲಿರುವ ಕೊನೆಯ ಡಿವೈಸ್ ಎಂದರೆ ಅದು ರಿಯಲ್ ಮಿ ಸಿ2. ಇದು ಎಂಟ್ರಿ ಲೆವೆಲ್ ಬಳಕೆದಾರರಿಗಾಗಿ ನಿರ್ಮಿಸಲಾಗಿರುವ ಫೋನ್ ಆಗಿದೆ. ಕೈಗೆಟುಕುವ ಬೆಲೆಯಲ್ಲಿ ಸೆಕೆಂಡರಿ ಅಥವಾ ಬ್ಯಾಕ್ ಅಪ್ ಡಿವೈಸ್ ಆಗಿ ಖರೀದಿಸುವುದಕ್ಕೆ ಆಸಕ್ತಿ ವಹಿಸುವ ಗ್ರಾಹಕರಿಗಾಗಿ ನಿರ್ಮಿಸಲಾಗಿರುವ ಫೋನ್ ಇದಾಗಿದೆ. ಮೀಡಿಯಾ ಟೆಕ್ ಹೆಲಿಯೋ ಪಿ2 ಸಾಕೆಟ್ ನ್ನು ಹೊಂದಿರುವ ಈ ಫೋನಿನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ ಜೊತೆಗೆ 4,000mAh ನ ಬ್ಯಾಟರಿ ಕೆಪಾಸಿಟಿಯನ್ನು ಹೊಂದಿದೆ. ಬೇಸ್ ಮಾಡೆಲ್ ಕೇವಲ 5,999 ರುಪಾಯಿ ಬೆಲೆಗೆ ಕೈಗೆಟುಕುತ್ತದೆ.

Best Mobiles in India

Read more about:
English summary
Realme Phones Under Rs. 15,000 That Have It All

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X