Subscribe to Gizbot

ಇಂದು 12ಗಂಟೆಗೆ ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೊ ಫ್ಲಾಷ್ ಸೇಲ್: ಖರೀದಿಸಲು ಭರ್ಜರಿ ಆಫರ್..!

Written By:

ಭಾರತೀಯ ಮಾರುಕಟ್ಟೆಯಲ್ಲಿ ಧೂಳ್ ಎಬ್ಬಿಸಿರುವ ಶಿಯೋಮಿ ಬಿಡುಗಡೆ ಮಾಡಿರುವ ರೆಡ್‌ಮಿ ನೋಟ್ 5 ಮತ್ತು ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಇಂದು ಮತ್ತೊಮ್ಮೆ ಫ್ಲಾಷ್ ಸೇಲ್‌ನಲ್ಲಿ ಕಾಣಿಸಿಕೊಳ್ಳಲಿದೆ. ಈ ಹಿಂದಿನ ಸೇಲ್‌ಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ಸಾಧ್ಯವಾಗದವರು ಈ ಬಾರಿ ಬುಕ್ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಇಂದು 12ಗಂಟೆಗೆ ರೆಡ್‌ಮಿ ನೋಟ್ 5 ಮತ್ತು ನೋಟ್ 5 ಪ್ರೊ ಫ್ಲಾಷ್ ಸೇಲ್

ಇಂದು ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಹಾಗೂ Mi.COM ನಲ್ಲಿ ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ಶಿಯೋಮಿ ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಲಿದೆ. ಈ ಹಿಂದಿನ ಸೇಲ್‌ಗಳಲ್ಲಿ ಕೆಲವೇ ನಿಮಿಷಗಳಲ್ಲಿ ಈ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿದ್ದವು.

Xiaomi Redmi Note 5 Pro ಮಾರಾಟದ ದಿನಾಂಕ ಫಿಕ್ಸ್!! ಫುಲ್ ಡೀಟೆಲ್ಸ್!!

5.99 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 625 ಪ್ರೊಸೆಸರ್, 4000mAh ಬ್ಯಾಟರಿ, 3GB RAM ಹಾಗೂ 12 MP ಹಿಂಬದಿ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಸ್ಮಾರ್ಟ್‌ಫೋನ್ ಕೇವಲ ರೂ.9,999ಗೆ ದೊರೆಯಲಿದೆ. ಇದೇ ಮಾದರಿಯಲ್ಲಿ 4GB/64GB ಆವೃತ್ತಿಯ ಫೋನ್ ಬೆಲೆ ಕೇವಲ ರೂ.11,999 ಗಳಾಗಿದೆ.

ಓದಿರಿ: ಸರ್ಕಾರದಿಂದ ಚೀನಾದ ಅಪಾಯಕಾರಿ ಆಪ್‌ಗಳ ಪಟ್ಟಿ: ಟ್ರೂಕಾಲರ್, ಶಿಯೋಮಿ ಆಪ್, ಶೇರ್‌ಇಟ್‌ ಪಟ್ಟಿಯಲ್ಲಿ.!

5.99 ಇಂಚಿನ FHD ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್‌ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ರೂ.16,999ಕ್ಕೆ ಮಾರಾಟವಾಗುತ್ತಿದ್ದು, 4GB/64GB ಆವೃತ್ತಿಯ ಫೋನ್ ರೂ, 13,999ಕ್ಕೆ ಲಭ್ಯವಿದೆ.

ಶಿಯೋಮಿ ರೆಡ್‌ ಮಿ ನೋಟ್ 5 ಮತ್ತು ರೆಡ್ ನೋಟ್ 5 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ ಜಿಯೋ ಬಿಗ್ ಆಫರ್ ಅನ್ನು ಘೋಷಿಸಿದೆ. ರೂ.2200 ಗಳವರೆಗೂ ಕ್ಯಾಷ್‌ಬ್ಯಾಕ್ ಹಾಗೂ 100% ಅಡಿಷನಲ್ 4G ಜಿಯೋ ಡೇಟಾ ಪಡೆಯಬಹುದಾದ ಈ ಆಫರ್ ಎರಡೂ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದೆ.

English summary
Redmi Note 5, Redmi Note 5 pro Flash Sale at 12pm Today on Flipkart, Mi.com. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot