ನೂತನ ರೆಡ್‌ಮಿ ನೋಟ್ 5 ಸ್ಮಾರ್ಟ್‌ಫೋನ್ ಮೇಲೆ ರೂ.2,200 ಕ್ಯಾಷ್ ಬ್ಯಾಕ್: ಪಡೆಯುವುದು ಹೇಗೆ.!
ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದ ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆಯಾಗಿದ್ದು, ಸ್ಮಾರ್ಟ್‌ಫೋನ್ ಲೋಕವನ್ನೇ ಅಲ್ಲಾಡಿಸಿದೆ. ಅಲ್ಲದೇ ಯಾರೂ ನಿರೀಕ್ಷಿಸದಷ್ಟು ಕಡಿಮೆ ಬೆಲೆಗೆ ಬಿಡುಗಡೆಯಾಗಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಬಿಡುಗಡೆ ಕಾಯುತ್ತಿದ್ದ ಫ್ಯಾನ್ಸ್ ಈ ಫೋನ್ ಖರೀದಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಈ ಹಿನ್ನಲೆಯಲ್ಲಿ ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಇದೇ ಫೆಬ್ರವರಿ 22 ರಂದು ಫ್ಲಿಪ್‌ಕಾರ್ಟ್ ಸೇರಿದಂತೆ ಮಿ ಡಾಟ್ ಕಾಂನಲ್ಲಿ ಮಾರಾಟವಾಗಲಿದೆ. ಇದೆ ಸಂದರ್ಭದಲ್ಲಿ ಈ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಮೇಲೆ ರೂ.2,200 ಕ್ಯಾಪ್ ಬ್ಯಾಕ್ ಪಡೆಯಬಹುದಾಗಿದೆ. ಇದಲ್ಲದೇ ಇದರೊಂದಿಗೆ ಜಿಯೋ ಡಬ್ಬಲ್ ಡೇಟಾ ಆಫರ್ ಸಹ ನೀಡುತ್ತಿದೆ.


ಜಿಯೋ ದೊಂದಿಗೆ ಶಿಯೋಮಿ
ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಸಂದರ್ಭದಲ್ಲಿ ಜಿಯೋದೊಂದಿಗೆ ಶಿಯೋಮಿ ಒಪ್ಪಂದವನ್ನು ಮಾಡಿಕೊಂಡಿದ್ದು, ಈ ಪೋನ್ ಅನ್ನು ಜಿಯೋ ದೊಂದಿಗೆ ಖರೀದಿಸಿದರೆ ರೂ.2200 ಕ್ಯಾಷ್ ಬ್ಯಾಕ್ ದೊರೆಯಲಿದೆ.

ದುಡ್ಡಲ್ಲ
ಜಿಯೋ ದೊಂದಿಗೆ ಶಿಯೋಮಿ ಒಪ್ಪಂದ ಮಾಡಿಕೊಂಡಿದ್ದು, ರೂ.2200 ಕ್ಯಾಷ್ ಬ್ಯಾಕ್ ನೀಡಲು ಜಿಯೋ ಮುಂದಾಗಿದೆ. ಇದರಲ್ಲಿ ಗ್ರಾಹಕರಿಗೆ ಹಣದ ರೂಪದಲ್ಲಿ ಕ್ಯಾಷ್ ಬ್ಯಾಕ್ ದೊರೆಯುವುದಿಲ್ಲ. ಬದಲಿಗೆ ನೀವು ಈ ಕ್ಯಾಷ್ ಬ್ಯಾಕ್‌ನಲ್ಲಿ ಜಿಯೋ ರಿಚಾರ್ಜ್ ಗಳನ್ನು ನೀವು ಖರೀದಿಸಬಹುದಾಗಿದೆ.

44 ಕ್ಯಾಷ್ ಬ್ಯಾಕ್ ವೋಚರ್
ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ಖರೀದಿಸುವ ಸಂದರ್ಭದಲ್ಲಿ ದೊರೆಯುವ ರೂ.2200 ಕ್ಯಾಷ್ ಬ್ಯಾಕ್‌ನಲ್ಲಿ ರೂ.50ರ 44 ಕ್ಯಾಷ್ ಬ್ಯಾಕ್ ವೋಚರ್ ಗಳು ದೊರೆಯಲಿದೆ. ಇದನ್ನು ಮೈ ಜಿಯೋ ಆಪ್‌ನಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಡಬ್ಬಲ್ ಡೇಟಾ
ಇದಲ್ಲದೇ ಜಿಯೋ ಬಳಕೆದಾರರು ಶಿಯೋಮಿ ರೆಡ್‌ಮಿ ನೋಟ್ 5 ಮತ್ತು ರೆಡ್‌ಮಿ ನೋಟ್ 5 ಪ್ರೋ ಸ್ಮಾರ್ಟ್‌ಫೋನ್ ನೊಂದಿಗೆ ಡಬ್ಬಲ್ ಡೇಟಾ ಆಫರ್ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 4.5TB 4G ಡೇಟಾವನ್ನು ಬಳಕೆಗೆ ಪಡೆದುಕೊಳ್ಳಬಹುದಾಗಿದೆ.

ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್
5.99 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ, ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ , 4000mAh ಬ್ಯಾಟರಿ, 3GB RAM ಹಾಗೂ 12 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದಂತಹ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 5 ಸ್ಮಾರ್ಟ್‌ಫೋನ್ ಬೆಲೆ ಕೇವಲ 9,999 ರೂಗೆ. ಬಿಡುಗಡೆಯಾಗಿದೆ. 4GB/64GB ಆವೃತ್ತಿ ಫೋನ್ ಬೆಲೆ ಕೇವಲ 11,999 ರೂ.ಗಳಾಗಿವೆ.

ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್
5.99 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 636 ಪ್ರೋಸೆಸರ್, 6GB RAM, ಡ್ಯುಯಲ್ ಕ್ಯಾಮೆರಾ, ಫೇಸ್‌ಅನ್ ಲಾಕ್ ನಂತಹ ಹೈ ಎಂಡ್ ಫೀಚರ್ಸ್ ಹೊಂದಿರುವ ಶಿಯೋಮಿ ರೆಡ್ ಮಿ ನೋಟ್ 5 ಪ್ರೊ ಸ್ಮಾರ್ಟ್‌ಫೋನ್ ಕೇವಲ 16,999ರೂ.ಗಳಿಗೆ ಬಿಡುಗಡೆಯಾಗಿದೆ. 4GB/64GB ಆವೃತ್ತಿ ಫೋನ್ 13,999 ರೂಪಾಯಿಗಳಿಗೆ ಲಭ್ಯವಿದೆ.


Click it and Unblock the Notifications








