Subscribe to Gizbot

ಇದೀಗ ಜಿಯೋ ಭಾರತದ ಪ್ರಮುಖ ಫೀಚರ್ ಫೋನ್ ಸಂಸ್ಥೆ!!

Posted By: Tejaswini P G

ಇಂಟರ್ನ್ಯಾಶನಲ್ ಡೇಟಾ ಕಾರ್ಪೊರೇಶನ್(IDC) ನ ಹೊಸ ವರದಿಯೊಂದರ ಅನುಸಾರ ಸ್ಮಾರ್ಟ್ಫೋನ್ ಗಳ ವಿಭಾಗದಲ್ಲಿ ಚೀನಾ ಮೂಲದ ಸಂಸ್ಥೆಗಳು ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಮಾರುಕಟ್ಟೆಯಲ್ಲಿ ಚೀನಾ ಮೂಲದ ಸಂಸ್ಥೆಗಳ ಒಟ್ಟು ಪಾಲುದಾರಿಕೆ ವರ್ಷದ ಹಿಂದೆ 34% ಇದ್ದು 2017ರಲ್ಲಿ ಅದು 53% ಗೆ ಏರಿಕೆಯಾಗಿದೆ.

"ಕಡಿಮೆ ಶ್ರೇಣಿಯ ಪಟ್ಟಣಗಳಲ್ಲಿ ಇದುವರೆಗೆ ಈಡೇರದ ಬೇಡಿಕೆಗಳು ಚೀನಾ ಮೂಲದ ಸಂಸ್ಥೆಗಳಿಗೆ ಭಾರತದಲ್ಲಿ ತಮ್ಮ ಬೆಳವಣಿಗೆಯನ್ನು ಬಲಪಡಿಸಲು ಸಹಾಯಕವಾಗಿದೆ. ತಮ್ಮ ಸ್ವಂತ ಮಾರುಕಟ್ಟೆಯಲ್ಲಿ ಅವರ ಶಕ್ತಿ ಮತ್ತು ಇಲ್ಲಿಯ ಸ್ಥಳೀಯ ಉತ್ಪಾದಕರ ಕುಸಿಯುತ್ತಿರುವ ಪ್ರಾಬಲ್ಯ ಚೀನಾ ಮೂಲದ ಸಂಸ್ಥೆಗಳು ಭಾರತದಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಸಹಾಯಕವಾಗಿದೆ" ಎಂದು IDC ಇಂಡಿಯಾ ದ ಸೀನಿಯರ್ ಮಾರ್ಕೆಟ್ ಎನಲಿಸ್ಟ್, ಜೈಪಾಲ್ ಸಿಂಗ್ ಅವರು ಹೇಳಿದ್ದಾರೆ.

ಇದೀಗ ಜಿಯೋ ಭಾರತದ ಪ್ರಮುಖ ಫೀಚರ್ ಫೋನ್ ಸಂಸ್ಥೆ!!

ಇದೇ ಸಂದರ್ಭದಲ್ಲಿ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ 14% ವಾರ್ಷಿಕ ಬೆಳವಣೆಗೆಯನ್ನು ಕಂಡಿದ್ದು 2017ರಲ್ಲಿ ಒಟ್ಟು 124 ಮಿಲಿಯನ್ ಯುನಿಟ್ ಗಳು ಮಾರಾಟವಾಗಿದೆ. ಜಾಗತಿಕವಾಗಿ ಟಾಪ್ 20 ಸ್ಮಾರ್ಟ್ಫೋನ್ ಮಾರುಕಟ್ಟೆಗಳಲ್ಲಿ ಭಾರತದ ಮಾರುಕಟ್ಟೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯೆನಿಸಿದೆ.

2016ರಲ್ಲಿ ಡಿಮಾನಿಟೈಸೇಶನ್ ಮತ್ತು ಸ್ಮಾರ್ಟ್ಫೋನ್ ಬಿಡಿಭಾಗಗಳ ಕೊರತೆಯಿಂದಾಗಿ ತಾತ್ಕಾಲಿಕವಾಗಿ ನಿಧಾನಗತಿಯಲ್ಲಿ ಬೆಳೆದ ಸ್ಮಾರ್ಟ್ಫೋನ್ ಮಾರುಕಟ್ಟೆ ಈಗ ಮತ್ತೆ ಎರಡಂಕಿಯ ಬೆಳವಣಿಗೆಯನ್ನು ಕಂಡಿದೆ. ಜಗತ್ತಿನ ಅತ್ಯಂತ ದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾದ ಚೀನಾ ಈ ವರ್ಷ ಮೊದಲ ಬಾರಿಗೆ ತನ್ನ ಮಾರುಕಟ್ಟೆಯಲ್ಲಿ ಕುಸಿತವನ್ನು ಕಂಡರೆ ಯುಎಸ್ ನ ಮಾರುಕಟ್ಟೆಯಲ್ಲಿ ಯಾವುದೇ ಏರಿಳಿತವಿರಲಿಲ್ಲ.

ಇದೀಗ ಜಿಯೋ ಭಾರತದ ಪ್ರಮುಖ ಫೀಚರ್ ಫೋನ್ ಸಂಸ್ಥೆ!!

IDC ಯ ವರದಿಯ ಅನುಸಾರ ಭಾರತದಲ್ಲಿ ಇನ್ನೂ ಫೀಚರ್ ಫೋನ್ಗಳು ದೊಡ್ಡ ಮಟ್ಟಿನಲ್ಲಿ ಗ್ರಾಹಕರನ್ನು ಹೊಂದಿದೆ. ಭಾರತದ ಟೆಲಿಕಾಂ ಸಂಸ್ಥೆಯಾದ ರಿಲಯೆನ್ಸ್ ಜಿಯೋ ಭಾರೀ ಸಂಖ್ಯೆಯಲ್ಲಿ 4G ಸಾಮರ್ಥ್ಯವುಳ್ಳ ಫೀಚರ್ ಫೋನ್ಗಳನ್ನು ಮಾರಾಟಮಾಡಿದ್ದು, ಈ ವರ್ಷದ ಮೊದಲ ಕ್ವಾರ್ಟರ್ ನಲ್ಲಿ ಅಗ್ರಸ್ಥಾನವನ್ನು ಪಡೆದಿದೆ. ಒಂದು ವರ್ಷದ ಹಿಂದೆ 140 ಮಿಲಿಯನ್ ಫೀಚರ್ಫೋನ್ಗಳನ್ನು ಮಾರಾಟ ಮಾಡಿದ್ದ ರಿಲಯೆನ್ಸ್ 2017ರಲ್ಲಿ 164 ಮಿಲಿಯನ್ ಫೀಚರ್ಫೋನ್ ಗಳನ್ನು ಮಾರಾಟಮಾಡಿದೆ. 2017Q4 ನಲ್ಲಿ ರಿಲಯೆನ್ಸ್ ಸಂಸ್ಥೆ 56 ಮಿಲಿಯನ್ ಫೋನ್ಗಳನ್ನು ಮಾರಾಟಮಾಡಿದ್ದು ಅತ್ಯಂತ ಹೆಚ್ಚು ಮಾರಾಟಮಾಡಿದ ಕ್ವಾರ್ಟರ್ ಇದೆನಿಸಿದೆ. ಈ ವಿಭಾಗ 67% ಇಯರ್-ಓವರ್-ಇಯರ್(YoY) ಬೆಳವಣಿಗೆಯನ್ನು ಕಂಡಿದ್ದು,ಹಿಂದಿನ ಕ್ವಾರ್ಟರ್ ಗಿಂತ 33% ರಷ್ಟು ಅಧಿಕ ಬೆಳವಣಿಗೆಯನ್ನು ಕಂಡಿದೆ.

2017Q4 ನ ಪ್ರಮುಖ ಟ್ರೆಂಡ್ ಗಳ ಕುರಿತು ಮಾತನಾಡಿದ ಉಪಾಸನಾ ಜೋಶಿ, ಸೀನಿಯರ್ ಮಾರ್ಕೆಟ್ ಎನಲಿಸ್ಟ್, IDC ಇಂಡಿಯಾ ಅವರು "ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶಿಯೋಮಿ ಸಂಸ್ಥೆಯು ಸ್ಯಾಮ್ಸಂಗ್ ಅನ್ನು ಹಿಂದಿಕ್ಕುತ್ತಿದ್ದು ರಿಲಯೆನ್ಸ್ ಜಿಯೋ ಭಾರತದ ಪ್ರಮುಖ ಫೀಚರ್ ಫೋನ್ ಸಂಸ್ಥೆಯಾಗಿ ಹೊರಹೊಮ್ಮುತ್ತಿರುವುದು 2017ರ ಕೊನೆಯ ಕ್ವಾರ್ಟರ್ ನ ಪ್ರಮುಖ ಮುಖ್ಯಾಂಶಗಳಾಗಿವೆ" ಎಂದು ಹೇಳಿದ್ದಾರೆ.

ಇದೀಗ ಜಿಯೋ ಭಾರತದ ಪ್ರಮುಖ ಫೀಚರ್ ಫೋನ್ ಸಂಸ್ಥೆ!!

"ಈ ಎರಡೂ ವೆಂಡರ್ಗಳ ಬೆಳವಣಿಗೆಗೆ ಆಕ್ರಮಣಕಾರಿ ಬೆಲೆ ನಿಗದಿಪಡಿಸುವಿಕೆಯೇ ಕಾರಣ. ಕಡಿಮೆ ಮಾರಾಟದ ಕ್ವಾರ್ಟರ್ಗಳಲ್ಲೂ ಅತಿ ಹೆಚ್ಚು ಸ್ಮಾರ್ಟ್ಫೋನ್ ಮಾರಾಟ ಮಾಡುವಲ್ಲಿ ಸಫಲವಾಗಿರುವ ಶಿಯೋಮಿ ಗೆ ಅದರ ಆಫ್ಲೈನ್ ವಿಸ್ತರಣೆ ಮತ್ತು ಮಾರ್ಕೆಟಿಂಗ್ ನಲ್ಲಿ ಹೆಚ್ಚಿನ ಹಣ ವಿನಿಯೋಗವೇ ಕಾರಣ" ಎಂದು ಜೋಶಿ ಹೇಳಿದ್ದಾರೆ.

ಸ್ಮಾರ್ಟ್ಫೋನ್ ಗಳ ಸ್ಪರ್ಧಾತ್ಮಕ ಜಗತ್ತು ಭಾರತದಲ್ಲಿ ಮತ್ತಷ್ಟು ಸ್ಪರ್ಧಾತ್ಮಕವಾಗುತ್ತಿದೆ.ಭಾರತದಲ್ಲಿ ಸ್ಮಾರ್ಟ್ಫೋನ್ಗಳ ಕೈಗೆಟಕುವಿಕೆಯಲ್ಲಿರುವ ತೊಂದರೆ ಎಲ್ಲಾ ಸ್ಮಾರ್ಟ್ಫೋನ್ ತಯಾರಕರನ್ನೂ ಸೆಳೆಯುತ್ತಿದ್ದು ಇದನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತದಲ್ಲಿ ಸುಲಭವಾಗಿ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್ಫೋನ್ಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಇದರ ಫಲವಾಗಿ ಆಂಡ್ರಾಯ್ಡ್ ಓರಿಯೋ 'ಗೋ ಎಡಿಶನ್', ಕಡಿಮೆ ವೆಚ್ಚದ 4G ಸ್ಮಾರ್ಟ್ಫೋನ್ಗಳೊಡನೆ ಕೈಜೋಡಿಸುತ್ತಿರುವ ಟೆಲಿಕಾಂಗಳು ಮತ್ತು ಜಿಯೋಫೋನ್ ನಂತಹ 4G ಫೀಚರ್ ಫೋನ್ ಮೊದಲಾದವುಗಳು ಅಸ್ತಿತ್ವಕ್ಕೆ ಬಂದಿದೆ.

ಅಲ್ಲದೆ ಗ್ರಾಹಕರ ಡೇಟಾ ಬಳಕೆ ಹೆಚ್ಚಲಿದ್ದು, ಡಿಜಿಟಲ್ ಪ್ಲ್ಯಾಟ್ಫಾರ್ಮ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಸಾಧ್ಯತೆ ಹೆಚ್ಚಿದ್ದು, ಇದನ್ನು ಸಾಧಿಸಲು ಸ್ಮಾರ್ಟ್ಫೋನ್ ಅವರ ಮೊದಲ ಆದ್ಯತೆಯಾಗಲಿದೆ. ಭಾರತದಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆ ಮುಂದಿನ ಕೆಲವು ವರ್ಷಗಳ ಕಾಲ ಎರಡಂಕಿಯ ಬೆಳವಣಿಗೆಯನ್ನು ಕಾಣಲಿದೆ ಎಂದು IDC ಅಭಿಪ್ರಾಯ ಪಟ್ಟಿದೆ.

Summary

• ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆ 14% ವಾರ್ಷಿಕ ಬೆಳವಣೆಗೆಯನ್ನು ಕಂಡಿದ್ದು 2017ರಲ್ಲಿ ಒಟ್ಟು 124 ಮಿಲಿಯನ್ ಯುನಿಟ್ ಗಳು ಮಾರಾಟ

• ಫೀಚರ್ ಫೋನ್ ಮಾರುಕಟ್ಟೆಯಲ್ಲಿ ರಿಲಯೆನ್ಸ್ ಜಿಯೋ ಅಗ್ರಸ್ಥಾನ ಎಂದ IDC ವರದಿ

• ಸ್ಮಾರ್ಟ್ಫೊನ್ ಮಾರುಕಟ್ಟೆಯಲ್ಲಿ ಚೀನಾ ಮೂಲದ ಮೊಬೈಲ್ ಸಂಸ್ಥೆಗಳ ಬಲ ವೃದ್ಧಿ

• ಸ್ಮಾರ್ಟ್ಫೋನ್ ವಿಭಾಗದಲ್ಲಿ ಸ್ಯಾಮ್ಸಂಗ್ ಅನ್ನು ಮೀರಿಸಿದ ಶಿಯೋಮಿ

English summary
Reliance Jio emerging as the leading feature phone company in India. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot