ನೀವು ರೂ.500ಕ್ಕೆ ದೊರೆಯುವ ಜಿಯೋ 4G VoLTE ಫೀಚರ್ ಪೋನ್ ಖರೀದಿಸಬೇಕೆ..? ಹಾಗಿದ್ರೆ ಈ ಸ್ಟೋರಿ ಓದಿ..!!

ಜಿಯೋ ತನ್ನ LYF ಬ್ರಾಂಡಿನ ಅಡಿಯಲ್ಲಿ 4G VoLTE ಸಫೋರ್ಟ್ ಮಾಡುವ ಫೀಚರ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಕೆಲವು ದಿನಗಳ ಹಿಂದೆ ಲೀಕ್ ಆಗಿತ್ತು.

|

ಸದ್ಯ ದೇಶದಲ್ಲಿ ಜಿಯೋ ಜಪವೇ ಹೆಚ್ಚಾಗಿದೆ. ಈಗಾಗಲೇ ಜಿಯೋ ಆಫರ್ ಗಳು ಜನರನ್ನು ಸೆಳೆದಿದೆ. ಇದೇ ಮಾದರಿಯಲ್ಲಿ ಜಿಯೋ ವೈಫೈ ಸಹ ಗ್ರಾಹಕರಿಗೆ ಹತ್ತಿರವಾಗಿದೆ. ಇದರಿಂದ 2G-3G ಗ್ರಾಹಕರು ಜಿಯೋ ಸೇವೆಯನ್ನು ಬಳಸುವಂತಾಗಿದೆ. ಇದಲ್ಲದೇ ಜಿಯೋ ಬ್ರಾಡ್ ಬ್ಯಾಂಡ್ ಮತ್ತು DHT ಸೇವೆ ಶೀಘ್ರವೇ ಆರಂಭವಾಗುವ ಸಾಧ್ಯತೆ ಇದೆ.

ನೀವು ರೂ.500ಕ್ಕೆ ದೊರೆಯುವ ಜಿಯೋ 4G VoLTE ಫೀಚರ್ ಪೋನ್ ಖರೀದಿಸಬೇಕೆ..?
Jio Monsoon Offers !! ಜಿಎಸ್‌ಟಿ ಸ್ಟಾಟರ್ ಕಿಟ್ ಜೊತೆಗೆ ಜಿಯೋ ಹೊಸ 12 ಆಫರ್‌ಗಳು !!

ಓದಿರಿ: ಮತ್ತೇ ಶುರುವಾಗಿ ಜಿಯೋ ಅಬ್ಬರ: ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡೊ ತತ್ತರ..!!

ಇದೆ ಬೆನ್ನಲ್ಲಿ ಜಿಯೋ ತನ್ನ LYF ಬ್ರಾಂಡಿನ ಅಡಿಯಲ್ಲಿ 4G VoLTE ಸಫೋರ್ಟ್ ಮಾಡುವ ಫೀಚರ್ ಫೋನ್ ಅನ್ನು ಲಾಂಚ್ ಮಾಡಲಿದೆ ಎನ್ನುವ ಮಾಹಿತಿಯೂ ಕೆಲವು ದಿನಗಳ ಹಿಂದೆ ಲೀಕ್ ಆಗಿತ್ತು. ಇದಕ್ಕೆ ಫುಷ್ಠಿ ಕೊಡುವಂತೆ ಜಿಯೋ 4G VoLTE ಫೋನಿನ ಫೋಟೋ ಸೇರಿದಂತೆ ವಿಶೇಷತೆಗಳ ಕುರಿತ ಮಾಹಿತಿಯೂ ಲೀಕ್ ಆಗಿದ್ದು, ಸದ್ಯದ ಹಾಟ್ ಟಾಪಿಕ್ ಆಗಿದೆ.

ಜಿಯೋ 4G VoLTE ಪೋನಿನ ಮಾಹಿತಿ:

ಜಿಯೋ 4G VoLTE ಪೋನಿನ ಮಾಹಿತಿ:

ಇಲ್ಲಿಯವರೆಗೂ ಜಿಯೋ 4G VoLTE ಪೋನಿನ ಬಗ್ಗೆ ಹಲವಾರು ಸುದ್ದಿಗಳು ಹರಿದಾಡಿದ್ದು, ಅವುಗಳಲ್ಲಿ ಪ್ರಮುಖವಾದ ಅಂಶಗಳೇನು..? ಮತ್ತು ಈ ಫೋನಿನ ವಿಶೇಷತೆ ಏನು ಎಂದರ ಕುರಿತಾದ ಮಾಹಿತಿ ಇಲ್ಲಿದೆ.

ಚಂದದಾರರನ್ನು ಹೆಚ್ಚಿಸಿಕೊಳ್ಳಲು ಈ ಪ್ರಯತ್ನ:

ಚಂದದಾರರನ್ನು ಹೆಚ್ಚಿಸಿಕೊಳ್ಳಲು ಈ ಪ್ರಯತ್ನ:

ಜಿಯೋ ತನ್ನ ಚಂದದಾರರ ಸಂಖ್ಯೆಯನ್ನು ಅಧಿಕ ಮಾಡಿಕೊಳ್ಳುವ ಸಲುವಾಗಿ ಅತ್ಯಂತ ಕಡಿಮೆ ಬೆಲೆಗೆ 4G VoLTE ಫೋನ್ ಬಿಡುಗಡೆ ಮಾಡುತ್ತಿದೆ. ಈಗಾಗಲೇ 4G ಸ್ಮಾರ್ಟ್‌ಫೋನ್ ಹೊಂದಿದವರು ಮಾತ್ರವೇ ಜಿಯೋ ಚಂದದಾರಾಗಿದ್ದು, ಇನ್ನು ಅತೀ ದೊಡ್ಡ ಸಮುಹದ ಜನರು 2G-3G ಹಾಂಡ್ ಸೆಟ್ ಬಳಕೆ ಮಾಡುತ್ತಿದ್ದಾರೆ. ಅವರ ಕೈಗೆ 4G ಹ್ಯಾಡ್ ಸೆಟ್ ನೀಡಿ ಅವರನ್ನು ಸೆಳೆಯುವ ಪ್ರಯತ್ನ ಇದಾಗಿದೆ.

LYF 4G VoLTE ಫೋನಿನ ಕುರಿತ ರೂಮರ್ ಗಳೇನು..?

LYF 4G VoLTE ಫೋನಿನ ಕುರಿತ ರೂಮರ್ ಗಳೇನು..?

ಈಗಾಗಲೇ ಲೀಕ್ ಆಗಿರುವ ಮಾಹಿತಿಯ ಪ್ರಕಾರ ಜಿಯೋ LYF 4G VoLTE ಫೀಚರ್ ಫೋನಿನಲ್ಲಿ 2.4 ಇಂಚಿನ ಡಿಸ್‌ಪ್ಲೇಯೂ ಇದೆ ಎನ್ನಲಾಗಿದೆ. ಇದಲ್ಲದೇ 512 MB RAM, 4GB ಇಂಟರ್ನಲ್ ಮೆಮೊರಿ ಹೊಂದಿದ್ದು, ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶವನ್ನು ಹೊಂದಿರಲಿದೆ. ಇದರಲ್ಲಿ ವೈ-ಫೈ, ಬ್ಲೂಟೂತ್, GPS ಮತ್ತು ಕ್ಯಾಮೆರಾ ಇರಲಿದ್ದು, 2000mAh ಬ್ಯಾಟರಿ ಇರಲಿದೆ ಎನ್ನುವ ರೂಮರ್ ಹರಿದಾಡುತ್ತಿದೆ.

LYF 4G VoLTE ಫೋನಿನ ಯಾವ ಫೀಚರ್ ಗಳು ಇರಲಿದೆ..?

LYF 4G VoLTE ಫೋನಿನ ಯಾವ ಫೀಚರ್ ಗಳು ಇರಲಿದೆ..?

ಜಿಯೋ ಬಿಡುಗಡೆ ಮಾಡುವ LYF 4G VoLTE ಫೋನಿನಲ್ಲಿ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಕ್ರಮಕ್ಕೆ ಮುಂದಾಗಿದೆ. ಇದಕ್ಕಾಗಿಯೇ ಫೀಚರ್ ಫೋನಿನಲ್ಲೇ ಫೈರ್ ಓಎಸ್ ಅನ್ನು ನೀಡಲಿದೆ. ಅಲ್ಲದೇ ಜಿಯೋ ಆಪ್ ಗಳು ಮತ್ತು ಫೇಸ್‌ಬುಕ್ ಮತ್ತು ವಾಟ್ಸ್ಆಪ್ ಬಳಸಿಕೊಳ್ಳುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ ಅದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಫೋನ್ ಬಿಡುಗಡೆಯ ನಂತರವೇ ತಿಳಿಯಲಿದೆ.

LYF 4G VoLTE ಫೋನಿನ ವಿನ್ಯಾಸ ಹೇಗಿರಲಿದೆ..?

LYF 4G VoLTE ಫೋನಿನ ವಿನ್ಯಾಸ ಹೇಗಿರಲಿದೆ..?

ಸದ್ಯ ಲೀಕ್ ಆಗಿರುವ ಮಾಹಿತಿಗಳ ಪ್ರಕಾರವಾಗಿ LYF 4G VoLTE ಫೋನು ಸಂಫೂರ್ಣವಾಗಿ ಪ್ಲಾಸ್ಟಿಕ್ ನಿಂದ ಮಾಡಲಾಗಿದ್ದು, T9 ಕೀ ಪ್ಯಾಡ್ ಹೊಂದಿದೆ. ಇದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಸಫೋರ್ಟ್ ಮಾಡಲಿದೆ. ಅಲ್ಲದೇ ಹೋಮ್ ಬಟನ್ ಮಧ್ಯದಲ್ಲಿದ್ದು, ಅದೇ ಟಾರ್ಚ್ ಬಟನ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

LYF 4G VoLTE ಫೋನು ಎಂದು ಲಾಂಚ್ ಆಗಲಿದೆ..?

LYF 4G VoLTE ಫೋನು ಇದೇ ತಿಂಗಳಿನಲ್ಲಿ ಲಾಂಚ್ ಆಗಲಿದೆ. ಅದುವೇ ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜುಲೈ 21 ರಂದು ಈ ಫೋನ್ ಲೋಕಾರ್ಪಣೆಗೊಳ್ಳಲಿದೆ. ಅಂದೇ ರಿಲಯನ್ಸ್ ವಾರ್ಷಿಕ ಸಭೆ ನಡೆಯಲಿದ್ದು, ಅಲ್ಲಿಯೇ ಈ ಫೋನಿನ ಅನಾವರಣವು ನಡೆಯಲಿದೆ.

LYF 4G VoLTE ಫೋನಿನ ಬೆಲೆ ಎಷ್ಟಾಗಬಹುದು..?

LYF 4G VoLTE ಫೋನಿನ ಬೆಲೆ ಎಷ್ಟಾಗಬಹುದು..?

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ LYF 4G VoLTE ಫೋನಿನ ಬೆಲೆ ರೂ.500 ಆಗಲಿದ್ದು, ಇದು ಜಿಯೋ ಪಾಲಿಗೆ ಇನ್ನು ಹೆಚ್ಚಿನ ಚಂದದಾರರನ್ನು ಕರೆದುಕೊಂಡು ಬರುವ ನಾವಿಕೆಯಾಗಲಿದೆ. ಇದು ನಮ್ಮ ದೇಶದಲ್ಲಿ ಹೆಚ್ಚಿನ ಮಂದಿಗೆ ಫೋನ್ ಬಳಕೆ ಮಾಡಲು ಹಣಕಾಸಿನ ತೊಂದರೆ ಇದೆ ಅವರೆಲ್ಲರಿಗೂ ಈ ಪೋನ್ ವರದಾನವಾಗಲಿದೆ.

LYF 4G VoLTE ಫೋನ್ ಎಲ್ಲಿ ದೊರೆಯಲಿದೆ...?

LYF 4G VoLTE ಫೋನ್ ಎಲ್ಲಿ ದೊರೆಯಲಿದೆ...?

ಜುಲೈ 21 ರಂದು ಬಿಡುಗಡೆಯಾಗಲಿರುವ LYF 4G VoLTE ಫೋನು ಜಿಯೋ.ಕಾಮ್ ಸೇರಿದಂತೆ ಜಿಯೋ ಸ್ಟೋರ್ ಗಳಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲೂ ಈ ಫೋನ್ ಲಭ್ಯವಿರಲಿದೆ.

ಎಷ್ಟು LYF 4G VoLTE ಫೋನ್ ಗಳು ಲಾಂಚ್ ಆಗುತ್ತಿದೆ..?

ಎಷ್ಟು LYF 4G VoLTE ಫೋನ್ ಗಳು ಲಾಂಚ್ ಆಗುತ್ತಿದೆ..?

LYF 4G VoLTE ಫೋನಿನ ಬೆಲೆ ರೂ.500 ಆಗಿರುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಈ ಫೋನ್ ಕೊಳ್ಳಲು ಮುಂದಾಗಿಲಿದ್ದಾರೆ ಈ ಹಿನ್ನಲೆಯಲ್ಲಿ ಮೂಲಗಳ ಪ್ರಕಾರ ಜಿಯೋ ಈ ಫೋನ್ ಗಳನ್ನು ಜೀನಾದಿಂದ ಆಮದು ಮಾಡಕೊಳ್ಳುತ್ತಿದ್ದು, ಮೊದಲ ಬಾರಿ 5-6 ಲಕ್ಷ ಹಾಂಡ್ ಸೆಟ್ ಗಳು ದೊರೆಯಲಿದೆ. ಇದಾದ ನಂತರದಲ್ಲಿ ಬೇಡಿಕೆ ಅನುಸಾರವಾಗಿ ಪೂರೈಕೆಯಾಗಲಿದೆ.

LYF 4G VoLTE ಫೋನಿಗಾಗಿಯೇ ಪ್ರತ್ಯೇಕ ಪ್ಲಾನ್ ಇದೆಯೇ..?

LYF 4G VoLTE ಫೋನಿಗಾಗಿಯೇ ಪ್ರತ್ಯೇಕ ಪ್ಲಾನ್ ಇದೆಯೇ..?

ಹೌದು..! ಜಿಯೋ LYF 4G VoLTE ಫೋನಿನ ಬಳಕೆದಾರರಿಗೆ ಪ್ರತ್ಯೇಕ ಆಫರ್ ವೊಂದನ್ನು ಲಾಂಚ್ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಈಗಾಗಲೇ ಲಭ್ಯವಿರುವ ಆಫರ್ ಗಳ ಬೆಲೆ ಹೆಚ್ಚಾಗಿದೆ. ಹಾಗಾಗಿ ನೂತನ ಆಫರ್ ವೊಂದನ್ನು ಫೋನ್ ಲಾಂಚಿಂಗ್ ವೇಳೆಯಲ್ಲಿಯೇ ಘೋಷಣೆ ಮಾಡಲಿದೆ.

Best Mobiles in India

Read more about:
English summary
Reliance Jio is working on a 4G-enabled feature phone - under the company's LYF-brand. It will end up costing as little as Rs 500, and the company may announce the phone on July 21 at its annual general meeting (AGM) in Mumbai. Here's everything you need to know about Reliance Jio's 4G VoLTE feature phone and what you can expect. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X