ಜಿಯೋ 'ಹ್ಯಾಪಿ ಹೋಳಿ' ಎಕ್ಸ್‌ಚೇಂಜ್ ಆಫರ್‌.! ಅನಿಯಮಿತ ಉಚಿತ ಡಾಟಾ.!?

|

ಅಗ್ಗದ ದರದಲ್ಲಿ ಮೊಬೈಲ್‌ಗಳನ್ನು ಪರಿಚಯಿಸಿ ಜಿಯೋ ಭಾರತೀಯ ಗ್ರಾಹಕರ ಮನಗಳಲ್ಲಿ ಸ್ಥಾನ ಪಡೆದಿದೆ. ತನ್ನ ಗ್ರಾಹಕರಿಗೆ ಏನಾದರೊಂದು ಆಫರ್‌ ನೀಡುತ್ತ ಸದಾ ಸುದ್ದಿಯಲ್ಲಿರುವ ಸಂಸ್ಥೆ ಇದೀಗ ಮತ್ತೆ ಸಂತಸದ ಸುದ್ದಿಯನ್ನು ನೀಡಿದೆ. ಹೋಳಿ ಹಬ್ಬದ ಪ್ರಯುಕ್ತ 4G ಜಿಯೋ ಫೋನ್ ಖರೀದಿಗೆ ಎಕ್ಸ್‌ಚೇಂಜ್ ಆಫರ್ ಘೋಷಿಸಿದ್ದು, ಗ್ರಾಹಕರು ಜಿಯೋ ಸಂಸ್ಥೆಯತ್ತ ತಿರುಗಿ ನೋಡುವಂತೆ ಮಾಡಿದೆ.

ಜಿಯೋ 'ಹ್ಯಾಪಿ ಹೋಳಿ' ಎಕ್ಸ್‌ಚೇಂಜ್ ಆಫರ್‌.! ಅನಿಯಮಿತ ಉಚಿತ ಡಾಟಾ.!?

ಹೌದು, ಜಿಯೋ ಸಂಸ್ಥೆ 'ಹ್ಯಾಪಿ ಹೋಳಿ' ಹೆಸರಿನಡಿ ಮೊಬೈಲ್ ಎಕ್ಸ್‌ಚೇಂಜ್ ಆಫರ್ ಪ್ರಕಟಿಸಿದ್ದು, ವರ್ಕಿಂಗ್ ಕಂಡಿಷನ್‌ನಲ್ಲಿರುವ ಮೊಬೈಲ್‌ ಎಕ್ಸ್‌ಚೇಂಜ್ ಮಾಡಿ, 4G ಬೆಂಬಲದ 'ಜಿಯೋ ಫೋನ್' ಖರೀದಿಸಬಹುದಾಗಿದೆ. ಜಿಯೋ ಫೋನ್ ಬೆಲೆಯು 1500ರೂ.ಗಳು ಆಗಿದ್ದು, ಆದರೆ ಎಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ 1095ರೂ.ಗಳಿಗೆ ದೊರೆಯಲಿದೆ. ಇದರೊಂದಿಗೆ ಉಚಿತ ಡಾಟಾ ಸೇವೆ ಸಹ ಗ್ರಾಹಕರಿಗೆ ಲಭ್ಯವಾಗಲಿದೆ.

ಜಿಯೋ 'ಹ್ಯಾಪಿ ಹೋಳಿ' ಎಕ್ಸ್‌ಚೇಂಜ್ ಆಫರ್‌.! ಅನಿಯಮಿತ ಉಚಿತ ಡಾಟಾ.!?

ಈ ಕೊಡುಗೆಯ ಹ್ಯಾಪಿ ಹೋಳಿ ಎಕ್ಸ್‌ಚೇಂಜ್ ಕೊಡುಗೆಯೊಂದಿಗೆ ಗ್ರಾಹಕರಿಗೆ ಆರು ತಿಂಗಳು ಅನಿಯಮಿತ ವಾಯಿಸ್‌ ಕರೆ ಮತ್ತು ಡಾಟಾವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಈ ಮೂಲಕ ಗ್ರಾಹಕರಿಗೆ 594ರೂ.ಗಳ ಲಾಭ ಸೀಗಲಿದೆ. ಎಕ್ಸ್‌ಚೇಂಜ್ ಕೊಡುಗೆಯ ಮಾಹಿತಿಯನ್ನು ಕಂಪನಿ ತನ್ನ ಅಧಿಕೃತ ವೆಬ್‌ಪುಟದಲ್ಲಿ ಪ್ರಕಟಿಸಿದೆ. ಹಾಗಾದರೇ ಜಿಯೋಫೋನ್ ಹ್ಯಾಪಿ ಹೋಳಿ ಆಫರ್‌ ಕುರಿತಾಗಿ ಮತ್ತಷ್ಟು ಮಾಹಿತಿ ತಿಳಿಯಲು ಮುಂದೆ ಓದಿರಿ.

90GB ಡಾಟಾ ಉಚಿತ

90GB ಡಾಟಾ ಉಚಿತ

ಎಕ್ಸ್‌ಚೇಂಜ್ ಕೊಡುಗೆಯಲ್ಲಿ ಜಿಯೋ ಫೋನ್ ಖರೀದಿಸಿದರೆ ಗ್ರಾಹಕರಿಗೆ 90GB ಡಾಟಾ ಉಚಿತವಾಗಿ ದೊರೆಯಲಿದ್ದು, ಪ್ರತಿ ದಿನ 0.5 GB ಯಂತೆ ಗ್ರಾಹಕರಿಗೆ 168 ದಿನಗಳ ವರೆಗೂ ಡಾಟಾ ಸೇವೆ ಸೀಗಲಿದೆ. ಡಾಟಾವು 64 Kbps ವೇಗದಲ್ಲಿರಲಿದ್ದು, ಅತ್ಯುತ್ತಮ ನೆಟವರ್ಕ್‌ ಸೌಲಭ್ಯ ಹೊಂದಿದೆ.

594ರೂ.ಗಳ ಪ್ರಯೋಜನ

594ರೂ.ಗಳ ಪ್ರಯೋಜನ

1500ರೂ.ಗಳ ಬೆಲೆಯಲ್ಲಿ ದೊರೆಯುವ ಜಿಯೋ ಫೋನ್ ಅನ್ನು ಕಂಪನಿ ಎಕ್ಸ್‌ಚೇಂಜ್ ಆಫರ್‌ನಲ್ಲಿ ಕೇವಲ 1095ರೂ.ಗಳಿಗೆ ನೀಡುತ್ತಿದ್ದು, ಇದರೊಂದಿಗೆ 594ರೂ.ಗಳ ಆರು ತಿಂಗಳ ಕಾಲ ಅನಿಯಮಿತ ಉಚಿತ ಡಾಟಾ ಮತ್ತು ಉಚಿತ ಕರೆಗಳ ಸೇವೆ ಒದಗಿಸುತ್ತಿದೆ.

ಜಿಯೋ ಫೋನ್ ಹೇಗಿದೆ

ಜಿಯೋ ಫೋನ್ ಹೇಗಿದೆ

ವಿಶಾಲ ನೆಟ್‌ವರ್ಕ್‌ ಹೊಂದಿರುವ ಜಿಯೋಫೋನ್ ವಾಯಸ್‌ ಕರೆಗಳು ಹೆಚ್‌ಡಿ ಗುಣಮಟ್ಟದಲ್ಲಿರಲಿವೆ. ಡಾಟಾಗಾಗಿ 4G ನೆಟವರ್ಕ್ ಸೌಲಭ್ಯವನ್ನು ಸಹ ಒಳಗೊಂಡಿದ್ದು, ಇಂಟರ್ನೆಟ್‌ ಬಳಕೆ ವೇಗದಲ್ಲಿರಲಿದೆ. ಫೇಸ್‌ಬುಕ್‌ ಸೇರಿದಂತೆ ಮನರಂಜನೆಯ ನೇರ ಟಿವಿ, ಸಿನಿಮಾ, ಹಾಡು ಆಯ್ಕೆಗಳ ಸೌಲಭ್ಯವನ್ನು ಹೊಂದಿದೆ.

Best Mobiles in India

English summary
Under Reliance Jio's scheme, if a customer buys Jiophone under the exchange offer, he/she gets benefits worth Rs. 594.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X