ಕಡಿಮೆ ಬೆಲೆಗೆ ಮತ್ತೊಂದು LYF 4G ಸ್ಮಾರ್ಟ್‌ಫೋನ್‌ ಬಿಡುಗಡೆ..ಸೂಪರ್ ಫೀಚರ್ಸ್!!

ಇದೀಗ ಬಿಡುಗಡೆಯಾಗಿರುವ ನೂತನ LYF ಫೋನ್ ಒಂದು ನಿಮ್ಮ ಬಜೆಟ್‌ಗೆ ಬೆಸ್ಟ್ ಫೋನ್ ಆಗಬಹುದು.!!

|

ಜಿಯೋ ಒಡೆತನದ LYF ಸ್ಮಾರ್ಟ್‌ಫೋನ್‌ಗಳು ಅಷ್ಟೇನು ಟ್ರೆಂಡ್ ಸೃಷ್ಟಿಸದಿದ್ದರೂ ಸಹ ಕಡಿಮೆ ಬೆಲೆಗೆ ಖರೀದಿಸಬಹುದಾದ 4G ಪೋನ್‌ಗಳು ಎಂದು ಹೆಸರು ಮಾಡಿದ್ದವು.! ಆದರೆ, ಇದೀಗ ಬಿಡುಗಡೆಯಾಗಿರುವ ನೂತನ LYF ಫೋನ್ ಒಂದು ನಿಮ್ಮ ಬಜೆಟ್‌ಗೆ ಬೆಸ್ಟ್ ಫೋನ್ ಆಗಬಹುದು.!!

ಹೌದು, LYF ನ ಹೊಸ ಸ್ಮಾರ್ಟ್‌ಫೋನ್‌ LYF C451 ಎಂಬ ನೂತನ ಸ್ಮಾರ್ಟ್‌ಫೋನ್‌ ಒಂದು ಬಿಡುಗಡೆಯಾಗಿದೆ.! ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್ ಇದಾಗಿದ್ದು, ಕೇವಲ 4,999 ರೂಪಾಯಿಗಳಿಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.!! ಹಾಗಾದರೆ, ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಡಿಸ್‌ಪ್ಲೇ ಮತ್ತು ಪ್ರೊಸೆಸರ್

ಕೇವಲ 4,999 ರೂ.ಗೆ ಬಿಡುಗಡೆಯಾಗಿರುವ LYF C451 ಸ್ಮಾರ್ಟ್‌ಫೋನ್ 4.5 ಇಂಚ್ ಡಿಸ್‌ಪ್ಲೇ ಹೊಂದಿದ್ದು, ಜೊತೆಗ ಡಿಸ್‌ಪ್ಲೇಗೆ 2D ಆಶಿ ಗ್ಲಾಸ್ ಪ್ರೊಟೆಕ್ಷನ್ ಅಳವಡಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್ 1.3GHz ಕ್ವಾಡ್-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 210 MSM8909 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 6.0.1 ಮಾರ್ಷಮಲ್ಲೋ ಮೂಲಕ ಫೋನ್ ರನ್ ಆಗಲಿದೆ.!!

RAM ಮತ್ತು ROM ಎಷ್ಟು?

RAM ಮತ್ತು ROM ಎಷ್ಟು?

LYF C451 ಸ್ಮಾರ್ಟ್‌ಫೋನ್ 1GB RAM ಮತ್ತು 8GB ಆಂತರಿಕ ಮೆಮೊರಿ ಹೊಂದಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 128 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದಾದ ಆಯ್ಕೆ ಫೋನ್‌ನಲ್ಲಿದೆ.!!

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

5 ಮೆಗಾಪಿಕ್ಸೆಲ್ ರಿಯರ್ ಆಟೊ ಫೋಕಸ್ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಹಾಗೂ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾವನ್ನು LYF C451 ಸ್ಮಾರ್ಟ್‌ಫೋನ್ ಹೊಂದಿದೆ. ಫೇಸ್ ಡಿಟೆಕ್ಷನ್, ಮಲ್ಟಿ-ಶಾಟ್, ಪನೋರಮಾ, ಜಿಯೋ ಟ್ಯಾಗಿಂಗ್ ಹೀಗೆ ಹಲವು ಕ್ಯಾಮೆರಾ ವೈಶಿಷ್ಟ್ಯಗಳು ಸಹ ಲಭ್ಯವಿವೆ.!!

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

LYF C451 ಸ್ಮಾರ್ಟ್‌ಫೋನ್ ಲಿ-ಐಯಾನ್ 2800mAh ಬ್ಯಾಟರಿ ಶಕ್ತಿಹೊಂದಿದ್ದು, LYF ಕಂಪೆನಿ ಹೇಳುವಂತೆ 4G ನೆಟ್‌ವರ್ಕ್‌ನಲ್ಲಿ 240 ಗಂಟೆಗಳ ಕಾಲ ಚಾರ್ಜ್ ನೀಡಲಿದೆ.!! 12.5 ಗಂಟೆಗಳ ಕರೆ ಸಮಯ ಹಾಗೂ ಸತತ 6 ಗಂಟೆಗಳ ಕಾಲ ವಿಡಿಯೋ ನೋಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ.

ಬೇರೆ ಏನೆಲ್ಲಾ ಫೀಚರ್ಸ್?

ಬೇರೆ ಏನೆಲ್ಲಾ ಫೀಚರ್ಸ್?

ಡ್ಯುವಲ್ ಸಿಮ್, 4G/LTE ವೋಲ್ಟ್, ವೈಫೈ ಕಾಲಿಂಗ್, ಬ್ಲೂಟೂತ್ ಹೀಗೆ ಹಲವು ಫೀಚಸ್‌ಗಳನ್ನು ಹೊಂದಿದ್ದು, ಕಡಿಮೆ ಬೆಲೆಗೆ ಅತ್ಯಂತ ಹೆಚ್ಚು ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಫೋನ್ ಹೊಂದಿದೆ. ಅಂದರೆ ನಾವು ನೀಡುವ ಹಣಕ್ಕೆ ಒಂದು ಉತ್ತಮ ಫೋನ್ ಇದಾಗಿದೆ ಎನ್ನಬಹುದು.!!

</a></strong><a class=ನಿಮ್ಮ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣವೇನು ಗೊತ್ತಾ?!!" title="ನಿಮ್ಮ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣವೇನು ಗೊತ್ತಾ?!!" loading="lazy" width="100" height="56" />ನಿಮ್ಮ ಫೋನ್ ಬ್ಯಾಟರಿ ಬಹುಬೇಗ ಖಾಲಿಯಾಗಲು ಕಾರಣವೇನು ಗೊತ್ತಾ?!!

Best Mobiles in India

English summary
Reliance has yet again launched a new LYF smartphone in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X