Subscribe to Gizbot

ಮತ್ತೊಂದು ಬಜೆಟ್ ಪೋನ್ ಬಿಡುಗಡೆ ಮಾಡಿದ ರಿಲಯನ್ಸ್

Written By:

ರಿಲಯನ್ಸ್ ಕಂಪನಿಯೂ ಹೊಸ ವರ್ಷಕ್ಕೆ 4G VoLTE ಸಪೋರ್ಟ್ ಮಾಡುವ ವಿವಿಧ ಶ್ರೇಣಿಯ ಸ್ಮಾರ್ಟ್‌ಪೋನುಗಳನ್ನು ಲಾಂಚ್ ಮಾಡಲಿದ್ದು, LYF ಸ್ಮಾರ್ಟ್‌ಪೋನ್ ಬ್ರಾಂಡ್ ಅಡಿಯಲ್ಲಿ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಪೋನುಗಳನ್ನು ಪರಿಚಯಿಸಲಿದೆ, 6,599 ರೂಗಳಿಗೆ 3000mAh Battery ಹೊಂದಿರುವ LYF ವಾಟರ್ 3 ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಲಿದೆ.

ಮತ್ತೊಂದು ಬಜೆಟ್ ಪೋನ್ ಬಿಡುಗಡೆ ಮಾಡಿದ ರಿಲಯನ್ಸ್

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

ಫ್ಲಿಪ್‌ಕಾಟ್ಸ್‌ನಲ್ಲಿ LYF Water 3 ಪೋನ್ ಲಭ್ಯವಿದ್ದು, 164.6 ಗ್ರಾಮ್ ತೂಕವಿದೆ. ದೀರ್ಘಕಾಲದ ಬ್ಯಾಟರಿ ಬಾಳಿಕೆ ಬರಲಿ ಎಂಬ ಕಾರಣಕ್ಕೆ ಈ ಪೋನಿನಲ್ಲಿ 3000mAh ಬ್ಯಾಟರಿ ಅಳವಡಿಸಲಾಗಿದ್ದು, 8 ಗಂಟೆಗಳ ಕಾಲ HD ವಿಡಿಯೋ ನೋಡಿದರು ಪೋನಿನ ಬ್ಯಾಟರಿ ಖಾಲಿಯಾಗುವುದಿಲ್ಲ. ಇದು ಡುಯಲ್ ಸಿಮ್ ಪೋನ್ ಆದರು ಒಂದು 4G ಸಿಮ್ ಹಾಕಲು ಮಾತ್ರ ಸಾಧ್ಯವಿದೆ. ಆಂಡ್ರಾಯ್ಡ್ 5.0ನಲ್ಲಿ ಇದು ಕಾರ್ಯ ನಿರ್ವಹಿಸಲಿದೆ.

ಮತ್ತೊಂದು ಬಜೆಟ್ ಪೋನ್ ಬಿಡುಗಡೆ ಮಾಡಿದ ರಿಲಯನ್ಸ್

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?

LYF Water 3 ಪೋನಿನಲ್ಲಿ 5.5 ಇಂಚಿನ HD ಡಿಸ್‌ಪ್ಲೇ ಇದ್ದು, 1.5GHz ಸ್ನಾಪ್ ಡ್ರಾಗನ್ ಪ್ರೊಸೆಸರ್ ಮತ್ತು 2GB RAM ಇದರಲಿದೆ. ಇದರೊಂದಿಗೆ 13MP ಹಿಂಬದಿಯ ಕ್ಯಾಮೆರಾ ಮತ್ತು 5MP ಮುಂಬದಿ ಕ್ಯಾಮೆರಾ ಹೊಂದಿದ್ದು, 16GB ಇಂಟರ್ನಲ್ ಮೆಮೊರಿ ಇದೆ. ಎಸ್‌ಡಿ ಕಾರ್ಡ್‌ ಹಾಕಿಕೊಂಡು 32GB ವರಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

ಅಲ್ಲದೇ ಈ ಪೋನಿನೊಂದಿಗೆ ಜಿಯೋ ಸಿಮ್ ದೊರೆಯಲಿದ್ದು, ಇದರ ಮೂಲಕ ಮಾರ್ಚ್ ವರಗೆ ಉಚಿತ ಡೇಟಾ, ಉಚಿತ ಕರೆ ಸೇವೆಯನ್ನು ಪಡೆಯಬಹುದಾಗಿದೆ. ಈ ಪೋನ್ ಸಿಲ್ವರ್ ಬಣ್ಣದಲ್ಲಿ ಮಾತ್ರ ಲಭ್ಯವಿದೆ.

Read more about:
English summary
Reliance introduced a wide range of affordable 4G VoLTE phones under its Reliance LYF smartphone brand in 2016. Adding on to the list of budget 4G smartphones, the company unveils yet another 4G VoLTE LYF handset, namely LYF Water 3. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot