Subscribe to Gizbot

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

Written By:

ಮಹಾನಗರಗಳಲ್ಲಿ ಕಾರನ್ನು ನಿಲ್ಲಿಸಿ ಹೊರಗೆ ಹೋಗಿ ಬರುವುದರೊಳಗೆ ಕಳ್ಳತನವಾಗಿರುವ ಘಟನೆಗಳು ಇಂದಿನ ದಿನಗಳಲ್ಲಿ ವರದಿಯಾಗುತ್ತಿದೆ. ಇದಲ್ಲದೇ ಮನೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಕಾರುಗಳನ್ನು ರಾತ್ರಿ ರಸ್ತೆಯಲ್ಲಿ ನಿಲ್ಲಿಸಬೇಕಾದ ಸ್ಥಿತಿ ಮಹಾನಗರಗಳಲ್ಲಿದೆ. ಈ ಸಂದರ್ಭಗಳಲ್ಲಿ ಕಾರನ್ನು ನೋಡಿಕೊಳ್ಳುವುದು ಕಷ್ಟ, ಅಲ್ಲದೇ ಕಳ್ಳಕಾಕರ ಹಾವಳಿ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಎಂಬ ಹೊಸದೊಂದು ಆಪ್.

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

53% ಭಾರತೀಯರು ಸ್ಮಾರ್ಟ್‌ಪೋನ್ ಖರೀದಿಸಿರುವುದು ಆನ್‌ಲೈನ್‌ನಲ್ಲಿ.....

ವಾಹನ ಟೆಕ್ನಾಲಜಿಯಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ 'ಟ್ರಾಕ್ ಎನ್ ಟೆಲ್' ಕಂಪನಿಯೂ ನಿಮ್ಮ ವಾಹನ ಗಳ ಸೆಫ್ಟಿಗಾಗಿಯೇ ವಾಚ್ ಮಾನ್ ಎಂಬ ಆಪ್ ವೊಂದನ್ನು ಅಭಿವೃದ್ಧಿಪಡಿಸಿದೆ. ನಿಮ್ಮ ಕಾರು ನಿಮ್ಮ ಗಮನಕ್ಕೆ ಬಾರದೆ ಸ್ಟಾರ್ಟ್‌ ಆದ ಮರುಕ್ಷಣವೇ ನಿಮ್ಮ ಸ್ಮಾರ್ಟ್‌ ಪೋನಿಗೆ ಸಂದೇಶ ಬರುವ ಮಾದರಿಯಲ್ಲಿ ಈ ಆಪ್ ಅನ್ನು ಡೆವಲಪ್ ಮಾಡಿದೆ.

ಸದ್ಯ ಈ ಆಪ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು, ಕಾರಿನ ಇಗ್ನೇಷನ್ ಆನ್ ಆಗುತ್ತಿದ್ದಂತೆ ಮಾಲೀಕರ ಮೊಬೈಲ್ ಪೋನಿಗೆ ನೋಟಿಫಿಕೇಷನ್ ಕಳುಹಿಸುವಂತ ವ್ಯವಸ್ಥೆ ಈ ಆಪ್ ನಲ್ಲಿದ್ದು, ಒಂದು ವೇಳೆ ನಿಮ್ಮ ಡ್ರೈವರ್ ಕಾರನ್ನು ಸ್ಟಾರ್ಟ್ ಮಾಡಿದರೆ ಯಾವುದೇ ರೀತಿಯಲ್ಲೂ ನೋಟಿಫಿಕೆಷನ್ ಕಳುಹಿಸುವುದಿಲ್ಲ. ಈ ಆಪ್ ಅನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಂಡತೆ ಕಾರಿನಲ್ಲೂ ಒಂದು ಜಿಪಿಎಸ್ ಸಾಧನವನ್ನು ಹಾಕಿಕೊಳ್ಳಬೇಕಾಗಿದೆ. ಇದರಿಂದ ಕಾರು ಎಲ್ಲಿದೆ ಮುಂತಾದ ಅಂಶಗಳು ತಿಳಿಯಲಿದೆ.

ನಿಮ್ಮ ಕಾರಿನ ಸೇಫ್ಟಿಗೆ ಬರುತ್ತಿದೆ 'ವಾಚ್ ಮಾನ್' ಆಪ್

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

ಈಗಾಗಲೇ ಈ ಆಪ್ ನ ಟೆಸ್ಟ್‌ಂಗ್ ನಡೆಯುತ್ತಿದ್ದು, ಪ್ರಯೋಗ ಹಂತದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಈ ಆಪ್ ಗ್ರಾಹಕರ ಬಳಕೆಗೆ ದೊರೆಯಲಿದೆ. ಇನ್ನೊಂದು ವಾರದಲ್ಲಿ ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಪ್ ಮುಕ್ತವಾಗಲಿದ್ದು, ಜನವರಿ ನಂತರದಲ್ಲಿ ಐಎಸ್ಓ ಬಳಕೆದಾರರು ಈ ಆಪ್ ಬಳಸಬಹುದಾಗಿದೆ.

 

Read more about:
English summary
a vehicle security feature that instantly transforms users’ smartphone into an alarm clock, alerting them about potential threats to their cars in real time and take corrective action. Called Watchman.to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot