ಅಮೆಜಾನ್‌ನಲ್ಲಿ ಹುವಾಯಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್.!

|

ಇ-ಕಾಮರ್ಸ್ ನ ದೈತ್ಯ ಅಮೆಜಾನ್ ನಿರಂತರ ಆಫರ್‌ಗಳ ಮಳೆಯನ್ನು ಸುರಿಸುತ್ತಲೇ ಸಾಗಿ ಬಂದಿದೆ. ಹೀಗಾಗಿ ಗ್ರಾಹಕರು ಸ್ಪೆಷಲ್ ದಿನಗಳು ಬಂದರೆ, ಹಬ್ಬಗಳಿದ್ದಾಗ ಮತ್ತು ವಿಕೇಂಡ್ ದಿನಗಳಲ್ಲಿ ಅಮೆಜಾನ್ ಜಾಲತಾಣಕ್ಕೆ ಭೇಟಿ ಕೊಡುವುದನ್ನು ಮರೆಯುವುದಿಲ್ಲ. ಇದೀಗ ಗಣರಾಜ್ಯೋತ್ಸವ ಮತ್ತು ವಿಕೇಂಡ್ ಎರಡು ಒಟ್ಟಾಗಿ ಬಂದಿದ್ದು, ಅಮೆಜಾನ್ ಆಫರ್ ಬಗ್ಗೆ ಗ್ರಾಹಕರಲ್ಲಿ ಕುತೂಹಲ ಹೆಚ್ಚಾಗಿದೆ.

ಅಮೆಜಾನ್‌ನಲ್ಲಿ ಹುವಾಯಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್.!

ಇತ್ತೀಚಿಗಷ್ಟೆ 'ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್' ಮೇಳ ಆಯೋಜಿಸಿ ಭಾರಿ ರಿಯಾಯಿತಿ ಕೊಡುಗೆಗಳನ್ನು, ಕ್ಯಾಶ್‌ ಡಿಸ್ಕೌಂಟ್‌ಗಳನ್ನು ಗ್ರಾಹಕರಿಗೆ ಅಮೆಜಾನ್ ನೀಡಿತ್ತು. ಇದೀಗ ಅಮೆಜಾನ್ ಮತ್ತೆ ಹುವಾಯಿ ಕಂಪನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳನ್ನು ನೀಡುತ್ತಿದೆ. ಈ ಕೊಡುಗೆ ಇದೇ ಜನವರಿ 25 ರಿಂದ ಆರಂಭವಾಗಿದ್ದು, ಜನವರಿ 31 ರ ವರೆಗೂ ಆಫರ್ ಚಾಲ್ತಿ ಇರಲಿದೆ.

ಅಮೆಜಾನ್‌ನಲ್ಲಿ ಹುವಾಯಿ ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್.!

ಹುವಾಯಿ ಜನಪ್ರಿಯ ಸ್ಮಾರ್ಟ್‌ಫೋನ್ ಮಾದರಿಗಳಾದ ಹುವಾಯಿ P20 ಲೈಟ್ ಮತ್ತಯ ಹುವಾಯಿ Y9 ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ಕೊಡುಗೆಯನ್ನು ನೀಡಿದೆ. ಇದರೊಂದಿಗೆ ಪ್ರಮುಖ ಬ್ಯಾಂಕ್‌ಗಳು ಇನ್‌ಸ್ಟಂಟ್ ಡಿಸ್ಕೌಂಟ್, ನೊಂದಿಗೆ ನೋ ಕಾಸ್ಟ್‌ EMI ಸೌಲಭ್ಯ ನೀಡುತ್ತಿವೆ. ಹಾಗಾದರೇ ಅಮೆಜಾನ್‌ನಲ್ಲಿ ಈ ಆಯ್ದ ಹಾನರ್ ಸ್ಮಾರ್ಟ್‌ಫೋನ್‌ಗಳಿಗಿರುವ ಆಫರ್ ಬಗ್ಗೆ ಮಾಹಿತಿ ತಿಳಿಯಲು ಮುಂದೆ ಓದಿರಿ.

ಹುವಾಯಿ P20 ಲೈಟ್

ಹುವಾಯಿ P20 ಲೈಟ್

ಹಾನರ್‌ನ ಜನಪ್ರಿಯ ಸ್ಮಾರ್ಟ್‌ಫೋನ್ ಆಗಿರುವ ಹುವಾಯಿ‌P20 ಲೈಟ್ ಸ್ಮಾರ್ಟ್‌ಫೋನ್ 4GM RAM ಮತ್ತು 5.8 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಆರಂಭದಲ್ಲಿ ಇದರ ಬೆಲೆ 19,999ರೂ.ಗಳು ಆಗಿದ್ದವು ಆದರೆ ಈಗ ಅಮೆಜಾನ್‌ ಆಫರ್ ಝೋನ್‌ನಲ್ಲಿ ಇದರ ಆಫರ್ ಬೆಲೆಯು 12,999ರೂ.ಗಳಾಗಿವೆ. ಇದರೊಂದಿಗೆ ನೋ ಕಾಸ್ಟ್‌ EMI ಆಯ್ಕೆ ಗ್ರಾಹಕರಿಗೆ ದೊರೆಯಲಿದೆ.

ಹುವಾಯಿ Y9

ಹುವಾಯಿ Y9

ಹುವಾಯಿ ಸಂಸ್ಥೆಯ ಪ್ರಮುಖ ಸ್ಮಾರ್ಟ್‌ಫೋನ್‌ ಎಂದೆನಿಸಿಕೊಂಡಿರುವ 'ಹಾನರ್ Y9' ಸ್ಮಾರ್ಟ್‌ಫೋನ್‌ 6.5 ಇಂಚಿನ ಉತ್ತಮ ರೆಸಲ್ಯೂಶನ್‌ನೊಂದಿಗೆ ಫುಲ್ ಹೆಚ್‌ಡಿ ಡಿಸ್‌ಪ್ಲೇ ಮತ್ತು 4GM RAM ಹೊಂದಿರುವ ಈ ಸ್ಮಾರ್ಟ್‌ಫೋನಿನ ಆಫರ್ ಬೆಲೆಯು 15,990ರೂ.ಗಳು ಮತ್ತು ಸ್ಪೋರ್ಟ್ ಬ್ಲೂಟೂತ್ ಹೆಡ್‌ಸೆಟ್ ಗಿಫ್ಟ್‌ಸಹ ಲಭ್ಯವಿದೆ. ಹಾಗೂ ಗ್ರಾಹಕರು ನೋ ಕಾಸ್ಟ್‌ EMI ಆಯ್ಕೆಯ ಪ್ರಯೋಜನ ಪಡೆಯಬಹುದು.

ಬ್ಯಾಂಕ್ ಆಫರ್‌

ಬ್ಯಾಂಕ್ ಆಫರ್‌

ಪ್ರಮುಖ ಆನ್‌ಲೈನ್ ಮಾರುಕಟ್ಟೆ ಅಮೆಜಾನ್‌ನಲ್ಲಿ ಇರುವ ಆಫರ್‌ಗಳಿಗೆ ಬ್ಯಾಂಕ್‌ಗಳು ಸಹ ಡಿಸ್ಕೌಂಟ್ ನೀಡುತ್ತವೆ ಹಾಗೇಯೆ ಈ ಸ್ಮಾರ್ಟ್‌ಫೋನ್‌ಗಳ ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಬಳಸಿ ಖರೀದಿಸಿದರೆ ಶೇ.5% ಇನ್‌ಸ್ಟಂಟ್ ಡಿಸ್ಕೌಂಟ್ ಸಿಗಲಿದೆ. ಇನ್ನೂ ಗ್ರಾಹಕರು ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಬ್ಯಾಂಕ್ ನೋ ಕಾಸ್ಟ್‌ EMI ಸೌಲಭ್ಯ ದೊರೆಯಲಿದೆ.

Best Mobiles in India

English summary
Republic Day sale offers have not ended, it appears. Huawei is running its own Republic Day sale on Amazon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X