ಆಪಲ್‌ 'ಸಿರಿ'ಗಾಗಿ ಧ್ವನಿ ನೀಡಿದ ಕಲಾವಿದೆ

Posted By:

ಆಪಲ್‌ ಸ್ಪೀಚ್‌ ರೆಕಗ್ನಿಷನ್ ಸಾಫ್ಟ್‌ವೇರ್‌ ಸಿರಿ ಈಗ ವಿಶ್ವದ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಸಿರಿ ಧ್ವನಿ ಆದೇಶವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸುದ್ದಿಯಾಗುತ್ತಿಲ್ಲ ಬದಲಾಗಿ ಸಿರಿಗೆ ಧ್ವನಿ ನೀಡಿದವರ ಸುದ್ದಿಯಿಂದಾಗಿ ಸಿರಿ ಸುದ್ದಿಯಲ್ಲಿದೆ.

ಆಪಲ್‌ನ 'ಸಿರಿ'ಗೆ ಧ್ವನಿ ನೀಡಿ ವ್ಯಕ್ತಿಯನ್ನು ಸಿಎನ್‌ಎನ್‌ ಈಗ ಸಂದರ್ಶನ ಮಾಡಿದೆ. ಅಮೆರಿಕದ ಹಿನ್ನೆಲೆ ಧ್ವನಿ ಕಲಾವಿದೆ ಸೂಸನ್‌ ಬೆನೆಟ್‌‌(Susan Bennett) ಸಂದರ್ಶ‌ನದಲ್ಲಿ ನಾನೇ ಸಿರಿಗೆ ಧ್ವನಿ ನೀಡಿ ಕಲಾವಿದೆ ಎಂದು ಹೇಳಿದ್ದಾಳೆ.

ಆಪಲ್‌ ಸಿರಿಗಾಗಿ 2005ರ ಜುಲೈ ಒಂದು ತಿಂಗಳು ತನ್ನ ಮನೆಯ ರೆಕಾರ್ಡಿಂಗ್‌ ಬೂತ್‌ನಲ್ಲಿ ಧ್ವನಿ ನೀಡಿದ್ದೇನೆ. ಪ್ರತಿ ದಿನ ನಾಲ್ಕು ಗಂಟೆಗಳ ಕಾಲ ಸಿರಿಗಾಗಿ ಕೆಲಸ ಮಾಡಿದ್ದೆ, ಗಂಟೆಯ ಆಧಾರದಲ್ಲಿ ನನಗೆ ಸಂಬಳ ನಿಗದಿಯಾಗಿತ್ತು ಎಂದು ಸಂದರ್ಶ‌ನದಲ್ಲಿ ಸೂಸನ್‌ ಹೇಳಿದ್ದಾಳೆ.

ಸಿರಿಯನ್ನು ಆಪಲ್‌ ತನ್ನ ಐಫೋನ್‌ 4ಎಸ್‌ನ್ನು 2011 ಅಕ್ಟೋಬರ್‌ 4(ಇದೇ ದಿನ)ರಂದು ಬಿಡುಗಡೆ ಮಾಡುವ ಸಂದರ್ಭದಲ್ಲಿ ಪರಿಚಯಿಸಿತ್ತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot