Subscribe to Gizbot

1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

Written By:

ಜಾಗತೀಕ ಮಾರುಕಟ್ಟೆಯಲ್ಲಿ ಯಾವುದೇ ಫೋನ್ ಲಾಂಚ್ ಆದರೂ ಅದರ ನಕಲು ತಯಾರು ಮಾಡುವ ಚೀನಿರು ಈ ಬಾರಿ ಸದ್ದು ಮಾಡುತ್ತಿರುವ ಐಫೋನ್ X ಅನ್ನು ನೀವು ಊಹಿಸಲಾಗದ ಬೆಲೆಗೆ ನೀಡಲು ಮುಂದಾಗಿದ್ದಾರೆ.

1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.6500ಕ್ಕೆ ಲಭ್ಯ

ಓದಿರಿ: ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ ಯಾಕೆ ಹೀಗೆ?

ಈಗಾಗಲೇ ಐಪೋನ್ X ಬೆಲೆಯೂ ದುಬಾರಿ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ಬೆಲೆಯೂ ಭಾರತೀಯ ಮಾರುಕಟ್ಟೆಯಲ್ಲಿ ರೂ. 1.02 ಲಕ್ಷದ ವರೆಗೂ ಇರುವ ಸಾಧ್ಯತೆ ಇದೆ. ಈ ಫೋನ್ ಕೊಳ್ಳಲು ಸಾಧ್ಯವಿಲ್ಲದವರಿಗೆ ಚೀನಾ ಕಂಪನಿಯೂ ಕ್ಲೋನ್ ಐಫೋನ್ X ಅನ್ನು ನೀಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.6,500ಕ್ಕೆ ಲಭ್ಯ:

ರೂ.6,500ಕ್ಕೆ ಲಭ್ಯ:

ಈಗಾಗಲೇ ಜಾಗತೀಕ ಮೊಬೈಲ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಎಬ್ಬಿಸಿರುವ ಐಫೋನ್ X ಮಾದರಿಯ ಚೀನಾ ಫೋನ್ ರೂ. 6,500ಕ್ಕೆ ಲಭ್ಯವಿದ್ದು, ಓರ್ಜಿನಲ್ ಫೋನ್ ಬೆಲೆಯ ಸಣ್ಣ ತುಣಕಾಗಿದೆ. ಚೀನಾ ಕಂಪನಿ ತನ್ನ ನಕಲು ಫೋನ್‌ಗೆ ಗೋ ಫೋನ್ ಎಂದು ನಾಮಕರಣ ಮಾಡಿದೆ.

ವಿನ್ಯಾಸ ಹಾಗೇ ಇದೆ:

ವಿನ್ಯಾಸ ಹಾಗೇ ಇದೆ:

ಐಫೋನ್ ಮಾದರಿಯಲ್ಲೇ ವಿನ್ಯಾಸವನ್ನು ಹೊಂದಿದೆ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೇ ನೋಡಲು ಸಹ ಹಾಗೇ ಕಾಣಿಸಿಕೊಂಡಿದೆ. ಬಣ್ಣ ಮಾತ್ರ ವ್ಯತ್ಯಾಸವಾಗಿದೆ ಇದು ಗೊಲ್ಡನ್ ಬಣ್ಣದಲ್ಲಿ ದೊರೆಯುತ್ತಿದೆ.

ಗೊಪೋನ್ X ವಿಶೇಷತೆ:

ಗೊಪೋನ್ X ವಿಶೇಷತೆ:

ಗೊಪೋನ್ X ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದು 5.5-ಅಂಗುಲ ಎಡ್ಜ್-ಟು-ಎಡ್ಜ್ ವಿನ್ಯಾಸ ಹೊಂದಿದೆ. ಮೀಡಿಯಾ ಟೆಕ್ ಎಂಟಿಕೆ 6580 ಪ್ರೋಸೆಸರ್ ಜೊತೆಗೆ 1 GB RAM, 16 GB ಆಂತರಿಕ ಮೆಮೊರಿ ಮತ್ತು 720x1280 HD ಡಿಸ್ಪ್ಲೇ ಅನ್ನು ಒಳಗೊಂಡಿದೆ.

8 MP+ 2MP ಡ್ಯುಯಲ್ ಕ್ಯಾಮೆರಾ:

8 MP+ 2MP ಡ್ಯುಯಲ್ ಕ್ಯಾಮೆರಾ:

ಗೊಪೋನ್ X ನ ಹಿಂಭಾಗದಲ್ಲಿ 8 MP+ 2MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದು. ಅಲ್ಲದೇ ಇದು ಕೇವಲ $100ಗೆ ದೊರೆಯುತ್ತಿದೆ. ಐಫೋನ್ ಕೊಳ್ಳಲಾದವರು ಇದನ್ನು ಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Say hello to the GooPhone, which looks extremely similar to the iPhone X!. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot