ಸ್ಯಾಮ್ ಸಂಗ್ ಫೋನಿಗೆ ಭರ್ಜರಿ ರಿಯಾಯಿತಿ- ಪ್ರೇಮಿಗಳ ದಿನಕ್ಕೆ ವಿಶೇಷ ಆಫರ್

By Gizbot Bureau
|

ಸ್ಯಾಮ್ ಸಂಗ್ ಖರೀದಿದಾರರಿಗೆ ಪ್ರೇಮಿಗಳ ದಿನಕ್ಕಾಗಿ ವಿಶೇಷ ಆಫರ್ ನೀಡಲಾಗುತ್ತಿದೆ. ತನ್ನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳಿಗೆ ಬೆಸ್ಟ್ ಡೇಸ್ ಆಫರ್ ನ್ನು ಕಂಪೆನಿ ಪ್ರಕಟಿಸಿದೆ.ಈ ಆಫರ್ ನ ಭಾಗವಾಗಿ ಗ್ರಾಹಕರು ವಿಶೇಷ ರಿಯಾಯಿತಿ ಮತ್ತು ಲಾಭಗಳನ್ನು ಪಡೆಯಲಿದ್ದು ಗ್ಯಾಲಕ್ಸಿ ನೋಟ್ 9 ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ಸ್ಮಾರ್ಟ್ ಫೋನ್ ಗಳಿಗೆ 32,000 ರುಪಾಯಿ ವರೆಗೆ ರಿಯಾಯಿತಿ ಸಿಗುತ್ತದೆ.

ಇನ್ಸೆಂಟ್ ಡಿಸ್ಕೌಂಟ್:

ಇನ್ಸೆಂಟ್ ಡಿಸ್ಕೌಂಟ್:

7000 ರುಪಾಯಿಗೆ ಇನ್ಸೆಂಟ್ ರಿಯಾಯಿತಿಯನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9(8ಜಿಬಿ) ವೇರಿಯಂಟ್ ಗೆ ಗ್ರಾಹಕರು ಪಡೆದುಕೊಳ್ಳಬಹುದು. 512ಜಿಬಿ ಸ್ಟೋರೇಜ್ ವೇರಿಯಂಟ್ ಗೂ ಈ ಆಫರ್ ಲಭ್ಯವಿದ್ದು 77,900 ರುಪಾಯಿ ಬೆಲೆಗೆ ಸಿಗುತ್ತದೆ.

ತಾತ್ಕಾಲಿಕ ಬೆಲೆ ಇಳಿಕೆ:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+--64ಜಿಬಿ,128ಜಿಬಿ ಮತ್ತು 256ಜಿಬಿ ವೇರಿಯಂಟ್ ಗಳು ತಾತ್ಕಾಲಿಕ ಬೆಲೆ ಇಳಿಕೆಯಲ್ಲಿ ಲಭ್ಯವಿದ್ದು 7000 ರುಪಾಯಿ ರಿಯಾಯಿತಿ ಸಿಗುತ್ತದೆ. ಅಂದರೆ ಇವುಗಳನ್ನು ಕ್ರಮವಾಗಿ ರುಪಾಯಿ 57,900, ರುಪಾಯಿ 61,900 ಮತ್ತು ರುಪಾಯಿ 65,900 ಬೆಲೆಯಲ್ಲಿ ಖರೀದಿಸಬಹುದು.

ವಿಶೇಷ ಆಫರ್ ಗಳು:

ವಿಶೇಷ ಆಫರ್ ಗಳು:

ಹೆಚ್ ಡಿ ಎಫ್ ಸಿ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಬಳಸಿ ಖರೀದಿಸಿದವರಿಗೆ ಹೆಚ್ಚುವರಿ ಕ್ಯಾಷ್ ಬ್ಯಾಕ್ ಕೂಡ ಲಭ್ಯವಾಗುತ್ತದೆ. ಗ್ಯಾಲಕ್ಸಿ ನೋಟ್ 9 ಗೆ 6000 ರುಪಾಯಿ ಕ್ಯಾಷ್ ಬ್ಯಾಕ್, ಗ್ಯಾಲಕ್ಸಿ ಎಸ್9+ ಗೆ 4000 ರುಪಾಯಿ ಕ್ಯಾಷ್ ಬ್ಯಾಕ್ ಸಿಗುತ್ತದೆ. ಇದು ಲಿಮಿಟೆಡ್ ಸಮಯದ ಆಫರ್ ಆಗಿರುವುದರಿಂದಾಗಿ ಕ್ಯಾಷ್ ಬ್ಯಾಕ್ ನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಗೆ 8,000 ರುಪಾಯಿ ಮತ್ತು ಗ್ಯಾಲಕ್ಸಿ ಎಸ್ 9+ ಗೆ ರುಪಾಯಿ 6,000 ಕ್ಯಾಷ್ ಬ್ಯಾಕ್ ಹೆಚ್ಚಿಸಲಾಗುತ್ತದೆ.

ಎಕ್ಸ್ ಚೇಂಜ್ ಆಫರ್:

ಎಕ್ಸ್ ಚೇಂಜ್ ಆಫರ್:

ಹಳೆಯ ಡಿವೈಸ್ ಗಳನ್ನು ಮಾರಾಟ ಮಾಡಿ ಹೊಸ ಸ್ಯಾಮ್ ಸಂಗ್ ಡಿವೈಸ್ ಖರೀದಿಸಿಬೇಕು ಎಂದುಕೊಳ್ಳುವವರಿಗೆ ಸೌತ್ ಕೊರಿಯನ್ ಸಂಸ್ಥೆ ಹೆಚ್ಚುವರಿ ಬೋನಸ್ ಆಫರ್ ರುಪಾಯಿ 9000 ವನ್ನು ನೀಡುತ್ತಿದೆ. ಎಲ್ಲಾ ರಿಯಾಯಿತಿಯನ್ನು ಪರಿಗಣಿಸಿ ಗ್ಯಾಲಕ್ಸಿ ನೋಟ್ 9 8ಜಿಬಿ ಮೆಮೊರಿ ಮತ್ತು 512 ಜಿಬಿ ಸ್ಟೋರೇಜ್ ವೇರಿಯಂಟ್ ನ ಫೋನ್ ನ್ನು 68,900 ರುಪಾಯಿಗೆ ಖರೀದಿಸಬಹುದು. 6ಜಿಬಿ ಮೆಮೊರಿ ವೇರಿಯಂಟ್ ನ ಫೋನ್ ನ್ನು 58,9000 ರುಪಾಯಿಗೆ ಖರೀದಿಸಬಹುದು.

ಎಷ್ಟು ಬೆಲೆ:

ಅದೇ ರೀತಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ನ್ನು 56,900 ರುಪಾಯಿಗೆ, 52,900 ಮತ್ತು 48,900 ರುಪಾಯಿಗೆ ಕ್ರಮವಾಗಿ 256GB, 128GB ಮತ್ತು 64GB ವೇರಿಯಂಟ್ ನ್ನು ಖರೀದಿಸಬಹುದು.

ಬಂಡಲ್ ಆಫರ್:

ಕೊನೆಯದಾಗಿ ಬಂಡಲ್ ಆಫರ್ ನಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ವಾಚ್ ಜೊತೆಗೆ ಗ್ಯಾಲಕ್ಸಿ ನೋಟ್ 9 ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ. ವಾಚ್ ನ ಮೂಲ ಬೆಲೆ 24,990 ರುಪಾಯಿಗಳು ಆದರೆ ಅದನ್ನು ನೀವು 9,999 ರುಪಾಯಿ ಗೆ ಬಿಗ್ ಡೇಸ್ ಆಫರ್ ನಲ್ಲಿ ಖರೀದಿ ಮಾಡಬಹುದು. ಇದು 128ಜಿಬಿ ಮತ್ತು 512ಜಿಬಿ ಗ್ಯಾಲಕ್ಸಿ ನೋಟ್ 9 ನ ಖರೀದಿಯ ಜೊತೆಗೆ ಖರೀದಿಸುವುದಕ್ಕೆ ಅವಕಾಶವಿರುತ್ತದೆ.

Best Mobiles in India

English summary
Samsung announces 'Valentine's Day' offer on Galaxy Note 9 and Galaxy S9+ smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X