ಕೇವಲ 12,490 ರೂ.ಗೆ ಏಪ್ರಿಲ್ 12ರಿಂದ ಮಾರಾಟಕ್ಕೆ ಬರುತ್ತದೆ 'ಗ್ಯಾಲಕ್ಸಿ ಎಂ20'!!

|

ಸ್ಯಾಮ್‌ಸಂಗ್‌ನ ನೂತನ ಬಜೆಟ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಂ20 ಸ್ಮಾರ್ಟ್‌ಫೋನ್ ಭಾರತದಲ್ಲಿ ಮಾರಾಟಕ್ಕೆ ಬರುತ್ತಿದೆ. ಸ್ಯಾಮ್‌ಸಂಗ್‌ ಎ ಸರಣಿ ಸ್ಮಾರ್ಟ್‌ಫೋನ್ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಗ್ಯಾಲಕ್ಸಿ ಎ20 ಇದೇ ಏಪ್ರಿಲ್ 12 ರಿಂದ ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಯಾಮ್ಸಂಗ್ ಆನ್ಲೈನ್ ಮತ್ತು ಮೊಬೈಲ್ ಮಾರಾಟ ಮಳಿಗೆಗಳಲ್ಲಿ ಸಹ ಲಭ್ಯವಾಗುತ್ತದೆ.

ಹೌದು, ಹೊಸ ಗ್ಯಾಲಕ್ಸಿ ಎ20 ಸ್ಮಾರ್ಟ್‌ಫೋನ್ 6.4 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದ್ದು, ಕೈಗೆಟುಕುವ ಬೆಲೆಯಲ್ಲಿ ಅಂದರೆ ಕೇವಲ 12,490 ರೂ.ಗಳಿಗೆ ಖರೀದಿಗೆ ಲಭ್ಯವಿದೆ. ಅಧಿಕೃತ ಸ್ಯಾಮ್‌ಸಂಗ್ ರೀಟೇಲ್ ಸ್ಟೋರ್ಗಳಲ್ಲಿ ಆನ್ ಲೈನ್ ಸ್ಟೋರ್ ಗಳಲ್ಲಿ ಮತ್ತು ಪಾರ್ಟ್ನರ್ ಚಾನಲ್ಗಳಲ್ಲಿ ಏಪ್ರಿಲ್ 12 ರಿಂದ ಖರೀದಿಸುವುದಕ್ಕೆ ಅವಕಾಶವಿರುತ್ತದೆ.

ಕೇವಲ 12,490 ರೂ.ಗೆ ಏಪ್ರಿಲ್ 12ರಿಂದ ಮಾರಾಟಕ್ಕೆ ಬರುತ್ತದೆ 'ಗ್ಯಾಲಕ್ಸಿ ಎಂ20'!!

6.4-ಇಂಚಿನ HD+ (720x1560)ಸೂಪರ್ AMOLED ಪ್ಯಾನಲ್, ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿರುವ ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದನ್ನು ನೋಡಬಹುದು. ಹಾಗಾದರೆ, ಈ ಸ್ಮಾರ್ಟ್‌ಫೋನ್‌ ಇತರೆ ವಿಶೇಷ ಫೀಚರ್ಸ್‌ಗಳ ಬಗ್ಗೆ ನೋಡೋಣ ಬನ್ನಿ.

ಗ್ಯಾಲಕ್ಸಿ ಎ20 ಡಿಸ್‌ಪ್ಲೇ

ಗ್ಯಾಲಕ್ಸಿ ಎ20 ಡಿಸ್‌ಪ್ಲೇ

ಕೈಗೆಟುಕುವ ಬೆಲೆಯ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20ಯ ಡಿಸ್ಪ್ಲೇಯು 6.4-ಇಂಚಿನ HD+ (720x1560)ಸೂಪರ್ AMOLED ಪ್ಯಾನಲ್ ಅನ್ನು ಹೊಂದಿದೆ. ವಾಟರ್ ಡ್ರಾಪ್ ನೋಚ್ ಹೊಂದಿದ್ದು ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು ನಿಮ್ಮ ದೃಢೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಭದ್ರತೆ ಒದಗಿಸುತ್ತದೆ.

ಗ್ಯಾಲಕ್ಸಿ ಎ20 ಪ್ರೊಸೆಸರ್

ಗ್ಯಾಲಕ್ಸಿ ಎ20 ಪ್ರೊಸೆಸರ್

ಗ್ಯಾಲಕ್ಸಿ ಎ20 ಆಕ್ಟಾ-ಕೋರ್ Exynos 7884 ಸಾಕೆಟ್ ನ್ನು ಹೊಂದಿದ್ದು, ಅದರಲ್ಲಿ ಎರಡೂ ಹೆಚ್ಚು ಪವರ್‌ನ ಅಂದರೆ, 1.6GHz ಕ್ಲಾಕ್ ಸ್ಪೀಡ್ ಇದೆ. ಇದು ಏಕಮಾತ್ರ ಮೆಮೊರಿ ಕಾನ್ಫಿಗರೇಷನ್ ಹೊಂದಿದೆ ಜೊತೆಗೆ 3GB RAM ಮತ್ತು 32GB ಇನ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೂ ಸಹ ಅವಕಾಶವಿದೆ.

ಕ್ಯಾಮೆರಾ ಹೇಗಿದೆ?

ಕ್ಯಾಮೆರಾ ಹೇಗಿದೆ?

ಗ್ಯಾಲಕ್ಸಿ ಎ20ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಇದರಲ್ಲಿ ಪ್ರೈಮರಿ ಕ್ಯಾಮರಾವು 13 ಮೆಗಾಪಿಕ್ಸಲ್ ಸಾಮರ್ಥ್ಯವಿದ್ದು f/1.9 ಅಪರ್ಚರ್ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಕ್ಯಾಮರಾವು f/2.2 ಅಪರ್ಚರ್ ಹೊಂದಿದೆ. ಮುಂಭಾಗದ ಕ್ಯಾಮರಾವು 8-ಮೆಗಾಪಿಕ್ಸಲ್ ಕ್ಯಾಮರಾವಿದ್ದು f/2.0 ಅಪರ್ಚರ್ ನ್ನು ಹೊಂದಿದ್ದು ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿದೆ.

ಗ್ಯಾಲಕ್ಸಿ ಎ20 ಬ್ಯಾಟರಿ

ಗ್ಯಾಲಕ್ಸಿ ಎ20 ಬ್ಯಾಟರಿ

ಗ್ಯಾಲಕ್ಸಿ ಎ20 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಎಂಬ ಬಗ್ಗೆ ಈ ವರೆಗೂ ಮಾಹಿತಿ ತಿಳಿದಿಲ್ಲ.ಇನ್ನು ಬೆಳಕಿನ ಸಂವೇದಕ, ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಗೈರೋಸ್ಕೋಪ್ ಫೀಚರ್ಸ್ ಅನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವುದನ್ನು ನೋಡಬಹುದು.

ಗ್ಯಾಲಕ್ಸಿ ಎ20 ಬೆಲೆಗಳು

ಗ್ಯಾಲಕ್ಸಿ ಎ20 ಬೆಲೆಗಳು

ಎಕ್ಸನೋಸ್ 7884B ಪ್ರೊಸೆಸರ್ ಜೊತೆಗೆ 3 ಜಿಬಿ RAM ಮತ್ತು 32 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಗ್ಯಾಲಕ್ಸಿ ಎ20 ಪೋನ್ ಬೆಲೆ ಮಧ್ಯಮ ವರ್ಗದ ಮೊಬೈಲ್ ಖರೀದಿದಾರರಿಗೆ ಕೈಗೆಟಕುವಂತಿದೆ. ಏಪ್ರಿಲ್ 12 ರಿಂದ ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಯಾಮ್ಸಂಗ್ ಆನ್ಲೈನ್ ಮತ್ತು ಮೊಬೈಲ್ ಮಾರಾಟ ಮಳಿಗೆಗಳಲ್ಲಿ 12,490 ರೂ.ಗೆ ಈ ಮೊಬೈಲ್ ಅನ್ನು ಖರೀದಿಸಬಹುದು.

Best Mobiles in India

English summary
The Samsung Galaxy A20 is now on sale in India. It's priced at INR12,490 ($180) and can be purchased through Samsung India's online shop as well as brick-and-mortar stores across the country. It will also be available on Flipkart from April 12. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X