ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಫಸ್ಟ್‌ ಲುಕ್: ಮೀಡ್‌ರೇಂಜ್‌ ದರದಲ್ಲಿ ಬೆಸ್ಟ್‌ ಕ್ಯಾಮೆರಾ ಫೋನ್!

|

ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ A52 ಮತ್ತು ಗ್ಯಾಲಕ್ಸಿ A72 ಸ್ಮಾರ್ಟ್‌ಫೋನ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಇವುಗಳ ಪೈಕಿ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G ಪ್ರೊಸೆಸರ್‌ ಬಲವನ್ನು ಒಳಗೊಂಡಿದೆ.

ಸ್ಟೋರೇಜ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಫೋನ್ ಆಂತರಿಕ ಸ್ಟೋರೇಜ್‌ಗೂ ಪ್ರಾಮುಖ್ಯತೆ ನೀಡಿದ್ದು, 6GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಹೊಂದಿದೆ. ಈ ಫೋನ್ ಕ್ಯಾಮೆರಾ ಪ್ರಿಯರನ್ನು ಸೆಳೆಯಲು 64 ಮೆಗಾ ಪಿಕ್ಸಲ್ ಸೆನ್ಸಾರ್‌ನ ಮುಖ್ಯ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದ್ದು, 5G ಮಾದರಿಯ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಹಾಗೆಯೇ ಫೋನಿನ ಸ್ಕ್ರೀನ್ ರೆಸಲ್ಯೂಶನ್ ಸಹ ಉತ್ತಮವಾಗಿದೆ. ಗ್ಯಾಲಕ್ಸಿ A52 ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ ಓದಿರಿ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದ್ದು, 6.46 ಇಂಚಿನ ಸೂಪರ್ AMOLED ಇನ್‌ಫೀನಿಟಿ O ಡಿಸ್‌ಪ್ಲೇಯನ್ನು ಪಡೆದಿದೆ. ಇನ್ನು ಈ ಫೋನ್‌ 90Hz ಸಾಮರ್ಥ್ಯದ ಸ್ಕ್ರೀನ್‌ ರೀಫೇಶ್‌ ರೇಟ್‌ ಅನ್ನು ಪಡೆದಿದೆ. ವಿಡಿಯೋ ವೀಕ್ಷಣೆಗೆ ಹಾಗೂ ಹೈ ಎಂಡ್‌ ಗೇಮ್‌ಗಳು ಈ ಫೋನಿನ ಪರದೆಯು ಅತ್ಯುತ್ತಮವಾಗಿ ಮೂಡಿ ಬರುತ್ತವೆ.

ಪ್ರೊಸೆಸರ್ ಕಾರ್ಯ ಹೇಗಿದೆ

ಪ್ರೊಸೆಸರ್ ಕಾರ್ಯ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 720G ಪ್ರೊಸೆಸರ್‌ ಬಲದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಹಾಗೂ ಓನ್‌ UI 3.1.ಸಪೋರ್ಟ್‌ ಸಹ ಪಡೆದಿದೆ. ಜೊತೆಗೆ 6GB RAM + 128GB ಮತ್ತು 8GB RAM + 128GB ಆಯ್ಕೆಗಳಿರಲಿವೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಅವಕಾಶ ಇದೆ. ವೇಗದ ಪ್ರೊಸೆಸರ್ ಮಲ್ಟಿ ಟಾಸ್ಕಿಂಗ್ ಕೆಲಸಗಳಿಗೆ ಅತ್ಯುತ್ತಮ ವಾತಾವರಣ ನೀಡಲಿದೆ.

ಕ್ವಾಡ್ ಕ್ಯಾಮೆರಾ ರಚನೆ

ಕ್ವಾಡ್ ಕ್ಯಾಮೆರಾ ರಚನೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಪಡೆದಿದೆ. ತೃತೀಯ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಪಡೆದಿದೆ. ಇನ್ನು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ನಲ್ಲಿ ಇದೆ. ಕ್ಯಾಮೆರಾ ಪ್ರಿಯರನ್ನು ಸೆಳೆಯಲು ಹೈ ಎಂಡ್ ಕ್ಯಾಮೆರಾ ನೀಡಲಾಗಿದ್ದು, ಅತ್ಯುತ್ತಮ ಫೋಟೊ ಮೂಡಿಬರಲಿವೆ.

ಬ್ಯಾಟರಿ ಪವರ್ ಹೇಗಿದೆ

ಬ್ಯಾಟರಿ ಪವರ್ ಹೇಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್‌ಫೋನ್‌ 4,500mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, ಜೊತೆಗೆ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಇತ್ತೀಚಿಗಿನ ಕನೆಕ್ಟಿವಿಟಿ ಆಯ್ಕೆಗಳಾದ 4 ಜಿ, ವೈ-ಫೈ, ಬ್ಲೂಟೂತ್, ಜಿಪಿಎಸ್ / ಎ-ಜಿಪಿಎಸ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ. ಫೋನ್ ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಸದ್ಯ ಚಾಲ್ತಿ ಇರುವ ಕನೆಕ್ಟಿವಿಟಿ ಫೀಚರ್ಸ್‌ಗಳನ್ನು ಈ ಫೋನ್ ಹೊಂದಿರುವುದು ಗ್ರಾಹಕರಿಗೆ ಉಪಯುಕ್ತ ಅನಿಸಲಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A52 ಫೋನಿನ 6GB RAM + 128GB ವೇರಿಯಂಟ್‌ ದರವು 26,499ರೂ. ಆಗಿದೆ. 8GB RAM + 128GB ವೇರಿಯಂಟ್‌ ಬೆಲೆಯು 27,999ರೂ. ಆಗಿದೆ. ಅದೇ ರೀತಿ ಗ್ಯಾಲಕ್ಸಿ A72 ಫೋನಿನ 8GB RAM + 128GB ವೇರಿಯಂಟ್‌ ಬೆಲೆಯು 34,999ರೂ. ಆಗಿದೆ.

Best Mobiles in India

English summary
samsung galaxy a52 first look best camera phone and sharp display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X