ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಫೋನಿನ ಬಗ್ಗೆ ಭರ್ಜರಿ ನಿರೀಕ್ಷೆ

By Gizbot Bureau
|

ಸ್ಯಾಮ್ ಸಂಗ್ ಇದೀಗ ಹೊಸದಾದ ತನ್ನ ಗ್ಯಾಲಕ್ಸಿ ಎ ಡಿವೈಸ್ ಗಳನ್ನು ಬಿಡುಗಡೆಗೊಳಿಸಿದ್ದು ಅದುವೇ ಗ್ಯಾಲಕ್ಸಿ ಎ80( ಈ ಮೊದಲು ಗ್ಯಾಲಕ್ಸಿ ಎ90 ಎಂದು ವದಂತಿಯಾಗಿತ್ತು) ಮತ್ತು ಗ್ಯಾಲಕ್ಸಿ ಎ70.ಗ್ಯಾಲಕ್ಸಿ ಎ80 ಇದರಲ್ಲಿರುವ ಹೈಯರ್ ಎಂಡ್ ಫೋನ್ ಆಗಿದೆ ಮತ್ತು ಸದ್ಯದ ಸ್ಯಾಮ್ ಸಂಗ್ ಡಿವೈಸ್ ಗಳಲ್ಲೇ ಅತ್ಯಂತ ಕುತೂಹಲಕಾರಿಯಾಗಿರುವ ಡಿವೈಸ್ ಅನ್ನಿಸಿಕೊಂಡಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಫೋನಿನ ಬಗ್ಗೆ ಭರ್ಜರಿ ನಿರೀಕ್ಷೆ

ಗ್ಯಾಲಕ್ಸಿ ಎ80 ಮೊದಲ ಸ್ಯಾಮ್ ಸಂಗ್ ರ ಸ್ಲೈಡರ್ ಡಿಸೈನ್ ಹೊಂದಿರುವ ಫೋನ್ ಆಗಿದೆ ಮತ್ತು ಇದರಲ್ಲಿ ರೊಟೇಟಿಂಗ್ ಕ್ಯಾಮಾರವನ್ನು ಸ್ಲೈಡರ್ ಡಿಸೈನ್ ನಲ್ಲಿ ಅಳವಡಿಸಲಾಗಿದೆ. ಹಾಗಾದ್ರೆ ಗ್ಯಾಲಕ್ಸಿ ಎ80ಯಲ್ಲಿ ಏನೆಲ್ಲ ವಿಶೇಷತೆಗಳಿವೆ ತಿಳಿಯೋಣ :

ಗ್ಯಾಲಕ್ಸಿ ಎ80 ರ ವೈಶಿಷ್ಟ್ಯತೆಗಳು :

ಗ್ಯಾಲಕ್ಸಿ ಎ80 ರ ವೈಶಿಷ್ಟ್ಯತೆಗಳು :

ಗ್ಯಾಲಕ್ಸಿ ಎ80 ರಲ್ಲಿ ಹೊಸದಾದ ರೊಟೇಟಿಂಗ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಈ ಫೋನಿನಲ್ಲಿ ಟ್ರಿಪಲ್ ಕ್ಯಾಮರಾವನ್ನು ಅಳವಡಿಸಲಾಗಿದೆ ಅದರಲ್ಲಿ 48MP f/2.0 ಪ್ರೈಮರಿ ಕ್ಯಾಮರಾ ಮತ್ತು 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು 3ಡಿ ಡೆಪ್ತ್ ಕ್ಯಾಮರಾವನ್ನು ಅಳವಡಿಸಲಾಗಿದೆ.

ಈ ಕ್ಯಾಮರಾವನ್ನು ಕೆಲವು ಉತ್ತಮ ಸೆಲ್ಫೀ ತೆಗೆದುಕೊಳ್ಳುವುದಕ್ಕಾಗಿ ಬಳಸಬಹುದು. ಸೆಲ್ಫೀ ಮೋಡ್ ಗೆ ಗ್ಯಾಲಕ್ಸಿ ಎ80 ರಲ್ಲಿ ಸ್ವಿಚ್ ಆದಾಗ ಮೂರು ಕ್ಯಾಮರಾಗಳು ಸ್ವಯಂಚಾಲಿತವಾಗಿ ಫೋನಿನ ಹಿಂಭಾಗದಿಂದ ತಿರುಗಿ ಪಾಪ್ ಅಪ್ ಆಗುತ್ತವೆ. ಇದು ಖಂಡಿತವಾಗಲೂ ಅಧ್ಬುತವಾಗಿರುವ ಫೀಚರ್ ಆಗಿದೆ ಮತ್ತು 48ಎಂಪಿಯಲ್ಲಿ ಅಧ್ಬುತವಾಗಿರುವ ಸೆಲ್ಫೀ ನಿಮ್ಮದಾಗುತ್ತದೆ. ಅಲ್ಟ್ರಾ ವೈಡ್ ಆಂಗಲ್ ಸೆಲ್ಫೀ ಕೂಡ ತೆಗೆದುಕೊಳ್ಳಬಹುದು ಅಷ್ಟೇ ಅಲ್ಲ ಉತ್ತಮ ಪೊರ್ಟೈಟ್ ಮೋಡ್ ನ ಸೆಲ್ಫೀ ಕೂಡ ಕ್ಲಿಕ್ಕಿಸಬಹುದು.

ರೊಟೇಟಿಂಗ್ ಕ್ಯಾಮರಾ

ರೊಟೇಟಿಂಗ್ ಕ್ಯಾಮರಾ

ರೊಟೇಟಿಂಗ್ ಕ್ಯಾಮರಾವನ್ನು ಹೊರತು ಪಡಿಸಿ ಗ್ಯಾಲಕ್ಸಿ ಎ80 ಯಲ್ಲಿ ಉತ್ತಮವಾದ ಗ್ಲಾಸ್ ಮತ್ತು ಮೆಟಲ್ ಸ್ಯಾಂಡ್ ವಿಚ್ ಡಿಸೈನ್ ಇದೆ. ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಕೂಡ ಇದೆ. ಡಿಸ್ಪ್ಲೇ ಬಗ್ಗೆ ಮಾತನಾಡುವುದಾದರೆ ಗ್ಯಾಲಕ್ಸಿ ಎ80 ಯಲ್ಲಿ 6.7-ಇಂಚಿನ FHD+ (1080×2400) ಸೂಪರ್ AMOLED ಫುಲ್ ಇನ್ಫಿನಿಟಿ ಡಿಸ್ಪ್ಲೇಯನ್ನು ಅಳವಡಿಸಲಾಗಿದ್ದು ಇದು ಬೆಝಲ್ ಲೆಸ್ ಆಗಿದೆ. ನೋ ನಾಚ್ ಮತ್ತು ಪಂಚ್ ಹೋಲ್ ನ್ನು ಇದರಲ್ಲಿಡಲಾಗಿದೆ.

ಗ್ಯಾಲಕ್ಸಿ ಎ80 ಆಕ್ಟಾ ಕೋರ್ 2.2GHz ಡುಯಲ್ + 1.8GHz ಹೆಕ್ಸಾ ಪ್ರೊಸೆಸರ್ ಜೊತೆಗೆ 8GB RAM ಮತ್ತು 128GB ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಗ್ಯಾಲಕ್ಸಿ ಎ80ರಲ್ಲಿರುವ ಚಿಪ್ ಸೆಟ್ ಯಾವುದು ಎಂಬ ಬಗ್ಗೆ ಇನ್ನೂ ಕೂಡ ಸಂಸ್ಥೆ ತಿಳಿಸಿಲ್ಲ ಆದರೆ ಹೊಸದಾಗಿ ಪ್ರಕಟಿಸಲಾಗಿರುವ ಸ್ನ್ಯಾಪ್ ಡ್ರ್ಯಾಗನ್ 730ಜಿ ಪ್ರೊಸೆಸರ್ ಇರಬಹುದು ಎಂದು ಹೇಳಲಾಗಿದ್ದು ಉತ್ತಮ ಗೇಮಿಂಗ್ ಪ್ರದರ್ಶನಕ್ಕೆ ಇದು ನೆರವು ನೀಡುತ್ತದೆ. ಬ್ಯಾಟರಿ ಬಗ್ಗೆ ಹೇಳುವುದಾದರೆ ಎ80ಯಲ್ಲಿ 3,700 mAh ಬ್ಯಾಟರಿ ಇದೆ ಜೊತೆಗೆ 25W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಗ್ಯಾಲಕ್ಸಿ ಎ80 ಬೆಲೆ ಮತ್ತು ಲಭ್ಯತೆ :

ಗ್ಯಾಲಕ್ಸಿ ಎ80 ಬೆಲೆ ಮತ್ತು ಲಭ್ಯತೆ :

ಗ್ಯಾಲಕ್ಸಿ 80 3 ಬಣ್ಣಗಳ ವೇರಿಯಂಟ್ ನಲ್ಲಿ ಲಭ್ಯವಿದೆ- ಏಂಜೆಲ್ ಗೋಲ್ಡ್(ಚಿನ್ನದ ವರ್ಣ), ಗೋಸ್ಟ್ ವೈಟ್(ಬಿಳಿ) ಮತ್ತು ಫ್ಯಾಟಮ್ ಬ್ಲಾಕ್ (ಕಪ್ಪು) ಮತ್ತು ಇದುವರೆಗೂ ಫೋನಿನ ಬೆಲೆಯನ್ನು ಸ್ಯಾಮ್ ಸಂಗ್ ಪ್ರಕಟಿಸಿಲ್ಲ ಆದರೆ ಮೇ 29 ರಿಂದ ಇದು ಖರೀದಿಗೆ ಲಭ್ಯವಾಗುತ್ತದೆ.

ಗ್ಯಾಲಕ್ಸಿ ಎ80 ನಿಜಕ್ಕೂ ಕುತೂಹಲಕಾರಿಯಾಗಿರುವ ಫೋನ್ ಆಗಿದೆ. ಅದರಲ್ಲೂ ಸ್ಪೈಡರ್ ಡಿಸೈನ್ ಮತ್ತು ರೊಟೇಟಿಂಗ್ ಕ್ಯಾಮರಾಗಳು ಅಧ್ಬುತವಾಗಿದೆ.ಈ ಫೋನಿನ ಫೀಚರ್ ಗಳನ್ನು ನೋಡುವುದಕ್ಕೆ ನಾವಂತು ಕುತೂಹಲದಿಂದ ಕಾಯುತ್ತಿದ್ದೇವೆ. ನಿಮ್ಮ ಅಭಿಪ್ರಾಯವೇನು ತಿಳಿಸಿ.

Best Mobiles in India

English summary
Samsung Galaxy A80 Brings Rotating Cameras to a Slider Design

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X