ಭಾರತೀಯರಿಗೆ ಇಂದಿನಿಂದ ಲಭ್ಯ ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಫೋನ್!

|

ಸ್ಯಾಮ್‌ಸಂಗ್ ಪರಿಚಯಿಸಿದ್ದ ಗ್ಯಾಲಕ್ಸಿ-ಎ ಸರಣಿಯ ಇತ್ತೀಚಿನ ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಎ80' ಖರೀದಿಸಲು ಕಾದುಕುಳಿತಿದ್ದ ಮೊಬೈಲ್ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಎರಡೂ ಬದಿಯಲ್ಲೂ 48 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಬಳಸಬಹುದಾದ ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಕ್ಸಿ ಎ80' ಭಾರತದಲ್ಲಿ ಇಂದಿನಿಂದ ಖರೀದಿಗೆ ಲಭ್ಯವಿದೆ.

ಭಾರತೀಯರಿಗೆ ಇಂದಿನಿಂದ ಲಭ್ಯ ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಫೋನ್!

ಹೌದು, ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಸ್ಯಾಮ್‌ಸಂಗ್ ಇಂಡಿಯಾ ವೆಬ್‌ಸೈಟ್ ಮೂಲಕ 'ಗ್ಯಾಲಕ್ಸಿ ಎ80' ಸ್ಮಾರ್ಟ್‌ಫೋನ್ ಅನ್ನು ಇಂದಿನಿಂದಲೇ ಖರೀದಿಸಬಹುದಾಗಿದ್ದು, ಸ್ಯಾಮ್‌ಸಂಗ್ ಮತ್ತು ಒಪೇರಾ ಹೌಸ್ ಮೂಲಕವೂ ಫೋನ್ ಲಭ್ಯವಿದೆ. ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಸ್ಯಾಮ್‌ಸಂಗ್ 5 ಪ್ರತಿಶತ ಕ್ಯಾಶ್‌ಬ್ಯಾಕ್ ನೀಡುತ್ತಿದೆ.

ಇನ್ನು ನೀವು ಸ್ಯಾಮ್‌ಸಂಗ್ ಅಂಗಡಿಯಿಂದ ಈ ಸ್ಮಾರ್ಟ್‌ಫೋನ್‌ನ್ನು ಖರೀದಿಸಿದರೆ ಹೆಚ್ಚುವರಿ 3,000 ರೂ ವಿನಿಮಯ ರಿಯಾಯಿತಿಯನ್ನು ನೀಡಲಾಗಿದೆ. ಹಾಗಾದರೆ, ವಿಶ್ವದ ಮೊದಲ ರೊಟೇಟಿಂಗ್ ಕ್ಯಾಮೆರಾ ಸ್ಮಾರ್ಟ್‌ಪೋನ್ 'ಗ್ಯಾಲಕ್ಸಿ ಎ80' ಹೇಗಿದೆ?, 'ಗ್ಯಾಲಕ್ಸಿ ಎ80' ಸ್ಮಾರ್ಟ್‌ಫೋನಿನ ವಿಶೇಷತೆಗಳು ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಗ್ಯಾಲಕ್ಸಿ ಎ80' ಸ್ಮಾರ್ಟ್‌ಫೋನಿನಲ್ಲಿ 20:9 ಆಕಾರ ಅನುಪಾತದ 6.7-ಇಂಚಿನ ಪೂರ್ಣ-ಎಚ್‌ಡಿ + (2400x1080 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ನ್ಯೂ ಇನ್ಫಿನಿಟಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಈ ಸ್ಮಾರ್ಟ್‌ಫೋನ್ ವಿಶಿಷ್ಟವಾದ ಸ್ಲೈಡಿಂಗ್ ಕ್ಯಾಮೆರಾದೊಂದಿಗೆ ಪ್ರೀಮಿಯಂ ಲುಕ್ ಹೊಂದಿದೆ ಎನ್ನಬಹುದು.

ಪ್ರೊಸೆಸರ್ ಮತ್ತು RAM

ಪ್ರೊಸೆಸರ್ ಮತ್ತು RAM

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 80 1.7GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 730 ಜಿ ಪ್ರೊಸೆಸರ್ ಅನ್ನು ಹೊಂದಿದೆ. ಇದು 2 ಕೋರ್‌ಗಳನ್ನು ಹೊಂದಿದ್ದು, 2.2GHz ಮತ್ತು 6 1.7GHz ನಲ್ಲಿ 8 ಜಿಬಿ RAM ನೊಂದಿಗೆ ಬರುತ್ತದೆ. ಆಂಡ್ರಾಯ್ಡ್ 9.0 ಪೈ ಅನ್ನು ಚಾಲನೆ ಮಾಡುವ ಸ್ಮಾರ್ಟ್‌ಫೋನಿನ ಆಂತರಿಕ ಮೆಮೊರಿ 128GB ಇರುವುದನ್ನು ನಾವು ನೋಡಬಹುದು.

48 ಮೆಗಾಪಿಕ್ಸೆಲ್ ಕ್ಯಾಮೆರಾ!

48 ಮೆಗಾಪಿಕ್ಸೆಲ್ ಕ್ಯಾಮೆರಾ!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 80 ಸ್ಮಾರ್ಟ್‌ಪೋನ್ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಎಫ್ / 2.0 ದ್ಯುತಿರಂಧ್ರ ಮತ್ತು ಎರಡನೇ 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹಾಗೂ ಎಫ್ /2.2 ದ್ಯುತಿರಂಧ್ರದೊಂದಿಗೆ ಪ್ಯಾಕ್ ಮಾಡುತ್ತದೆ. ಹಿಂದಿನ ಕ್ಯಾಮೆರಾ ಸೆಟಪ್ ಆಟೋಫೋಕಸ್ ಹೊಂದಿದೆ. ಇದೇ ಕ್ಯಾಮೆರಾವು ಸೆಲ್ಫಿ ತೆಗೆದುಕೊಳ್ಲುವಾಗ ಮುಂಬಾಗಕ್ಕೆ ರೊಟೇಟ್ ಆಗುತ್ತದೆ.

ಕ್ಯಾಮೆರಾ ವಿಶೇಷತೆಗಳು!

ಕ್ಯಾಮೆರಾ ವಿಶೇಷತೆಗಳು!

ಕ್ಯಾಮೆರಾವನ್ನು ಬ್ಯಾಕಪ್ ಮಾಡುವ ಸೂಪರ್ ಸ್ಟೆಡಿ ಮೋಡ್, 3ಡಿ ದೃಶ್ಯಗಳನ್ನು ಗುರುತಿಸಬಹುದು ಮತ್ತು ವರ್ಧಿಸಬಹುದಾದ ಸೀನ್ ಆಪ್ಟಿಮೈಜರ್ ಹಾಗೂ ಫೋಟೋ ಕ್ಲಿಕ್ ಮಾಡುವ ಮೊದಲು ತೊಂದರೆಗಳನ್ನು ಗುರುತಿಸುವಂತಹ ದೋಷ ಪತ್ತೆ ವೈಶಿಷ್ಟ್ಯವೂ ಈ ಸ್ಮಾರ್ಟ್‌ಫೋನಿನದೆ. 3ಡಿ ಡೆಪ್ತ್ ಕ್ಯಾಮೆರಾ ಜೊತೆಗೆ ಇನ್ಫ್ರಾರೆಡ್ ಸೆನ್ಸಾರ್ ಅನ್ನು ಕ್ಯಾಮೆರಾವು ಹೊಂದಿದೆ.

ಇತರ ವೈಶಿಷ್ಟ್ಯಗಳು ಯಾವುವು?

ಇತರ ವೈಶಿಷ್ಟ್ಯಗಳು ಯಾವುವು?

4 ಜಿ VoLTE, Wi-Fi 802.11ac, ಬ್ಲೂಟೂತ್ ವಿ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ ಮತ್ತು 25W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 3,700 ಎಮ್ಎಹೆಚ್ ಬ್ಯಾಟರಿ ಶಕ್ತಿಯನ್ನು ಹೊಂದಿದೆ. 47,990 ರೂ. ಬೆಲೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಏಂಜಲ್ ಗೋಲ್ಡ್, ಘೋಸ್ಟ್ ವೈಟ್ ಮತ್ತು ಫ್ಯಾಂಟಮ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
Samsung Galaxy A80 With Rotating Camera Goes on Sale Today: Price, Specs and More. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X