ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!..ನವೆಂಬರ್ 20ಕ್ಕೆ ಗ್ಯಾಲಕ್ಸಿ ಎ9'!!

|

ಜಗತ್ತಿನ ಮೊದಲ 'ಕ್ವಾಡ್ ಕ್ಯಾಮೆರಾ' ಹೊಂದಿರುವ ಸ್ಮಾರ್ಟ್‌ಫೋನ್‌ ಎಂಬ ಹೆಗ್ಗಳಿಕೆ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎ9 (2018) ಸ್ಮಾರ್ಟ್‌ಫೋನ್ ಇದೇ ನವೆಂಬರ್ 20ಕ್ಕೆ ಭಾರತಕ್ಕೆ ಲಗ್ಗೆ ಇಡಲು ತಯಾರಾಗಿದೆ. ಕಳೆದ ತಿಂಗಳು ಮಲೇಷ್ಯಾದ ಕೌಲಾಲಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಿದ್ದ ಗ್ಯಾಲಾಕ್ಸಿ ಎ9 ಈಗ ಭಾರತದ ಮೊಬೈಲ್ ಪ್ರಿಯರ ಕೈಸೇರುತ್ತಿದೆ.

ಆಪಲ್ ಹಾಗೂ ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ನೂತನ ತಂತ್ರಜ್ಞಾನಗಳತ್ತ ಗಮನಹರಿಸದ್ದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ, ಇದೀಗ ನಾಲ್ಕು ರಿಯರ್ ಕ್ಯಾಮೆರಾ ಫೋನ್ ಗ್ಯಾಲಾಕ್ಸಿ ಎ9 (2018) ಮೂಲಕ ಮತ್ತೆ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದೆ. ಗ್ರಾಹಕರಿಗೆ ಉತ್ತಮ ಬೆಲೆಯಲ್ಲಿ ಅತ್ಯುತ್ತಮ ಫೋನ್ ಒಂದನ್ನು ಪರಿಚಯಿಸಿ ಗಮನಸೆಳೆದಿದೆ.

ಭಾರತೀಯರಿಗೆ ಸಿಹಿಸುದ್ದಿ ನೀಡಿದ ಸ್ಯಾಮ್‌ಸಂಗ್!..ನವೆಂಬರ್ 20ಕ್ಕೆ ಗ್ಯಾಲಕ್ಸಿ ಎ9!

ಕೇವಲ ನಾಲ್ಕು ರಿಯರ್ ಕ್ಯಾಮೆರಾಗಳು ಮಾತ್ರವಲ್ಲದೆ, 'ಗ್ಯಾಲಕ್ಸಿ ಎ9(2018)' ಸ್ಮಾರ್ಟ್‌ಫೋನ್ ವಿನ್ಯಾಸ, ಫೀಚರ್ಸ್ ಹಾಗೂ ಬೆಲೆಯ ಮೂಲಕವೂ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ. ಹಾಗಾದರೆ, ವಿಶ್ವದ ಮೊದಲ 'ಕ್ವಾಡ್ ಕ್ಯಾಮೆರಾ' ಸ್ಮಾರ್ಟ್‌ಫೋನ್ ಲುಕ್ ಹೇಗಿದೆ? ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಕ್ವಾಡ್ ಕ್ಯಾಮರಾ ಸೆಟಪ್!

ಕ್ವಾಡ್ ಕ್ಯಾಮರಾ ಸೆಟಪ್!

ಅತ್ಯುತ್ತಮ ಚಿತ್ರಗಳನ್ನು ಪಡೆಯಲು ಪಿಕ್ಸೆಲ್ ವಿಲೀನಗೊಳಿಸುವ ತಂತ್ರಜ್ಞಾನದೊಂದಿಗೆ 'ಗ್ಯಾಲಕ್ಸಿ ಎ 9' ಸ್ಮಾರ್ಟ್‌ಫೋನ್ 24 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಎರಡನೆಯ ಕ್ಯಾಮೆರಾ 2x ಜೂಮ್ ಟೆಲಿಫೋಟೋ ಲೆನ್ಸ್ ಮತ್ತು ಪ್ರತ್ಯೇಕ ಡೀಪ್ ಕ್ಯಾಮರಾ ಲೆನ್ಸ್ವ್ಳೊಂದಿಗೆ ಜೋಡಿಯಾಗಿ 120-ಡಿಗ್ರಿ ಅಲ್ಟ್ರಾ-ವೈಡ್ ಕ್ಯಾಮರಾ ಸಂವೇದಕವಾಗಿದೆ. ಈ ಎಲ್ಲಾ ಕ್ಯಾಮೆರಾಗಳು ಕಂಪನಿಯ ಸ್ವಂತ AI ಕ್ಯಾಮರಾ ಸಾಫ್ಟ್‌ವೇರ್‌ನಿಂದ ಬೆಂಬಲಿತವಾಗಿವೆ. ಹಾಗಾಗಿ, ಇದು ಮಾರುಕಟ್ಟೆಯ ಬೆಸ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿದೆ.

24MP ಸೆಲ್ಫಿ ಕ್ಯಾಮೆರಾ!

24MP ಸೆಲ್ಫಿ ಕ್ಯಾಮೆರಾ!

ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ ಮುಂಬಾಗದಲ್ಲಿ 24MP ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ ಪ್ರಾಥಮಿಕ ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾಗಳೆರಡು 24MP ಸಾಮರ್ಥ್ಯವನ್ನು ಹೊಂದಿರುವುದು 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನಿನ ವಿಶೇಷತೆಯಾಗಿದೆ. ಸೆಲ್ಫಿ ಕ್ಯಾಮೆರಾ ಕೂಡ AI ಕ್ಯಾಮರಾ ಸಾಫ್ಟ್‌ವೇರ್‌ ಬೆಂಬಲಿತವಾಗಿದ್ದು, ಇಂಟೆಲಿಜೆಂಟ್ ಕ್ಯಾಮೆರಾ ವೈಶಿಷ್ಟ್ಯವಾಗಿ ಡಬ್ ಮಾಡಲಾಗಿದೆ.

ಡಿಸ್‌ಪ್ಲೇ ಮತ್ತು ವಿನ್ಯಾಸ!

ಡಿಸ್‌ಪ್ಲೇ ಮತ್ತು ವಿನ್ಯಾಸ!

'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ 6.3-ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇಯನ್ನು ಹೊಂದಿದೆ. 1080x2220 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಡಿಸ್‌ಪ್ಲೇ ಎಡ್ಜ್ ಟು ಎಡ್ಜ್ ವಿನ್ಯಾಸವನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯನ್ನು ಹೊಂದಿರುವ ಈ 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ ಹೈ ಎಂಡ್ ಲುಕ್ ಹೊಂದಿರುವುದರಲ್ಲಿ ಎರಡು ಮಾತಿಲ್ಲ.

ಪ್ರೊಸೆಸರ್ ಮತ್ತು RAM!

ಪ್ರೊಸೆಸರ್ ಮತ್ತು RAM!

6ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿ ಹಾಗೂ 8 ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿಯ ಎರಡು ಮಾದರಿಗಳಲ್ಲಿ 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 SOC ಓಕ್ಟಾ ಕೋರ್ ಪ್ರೊಸೆಸರ್‌(2.2GHz ನಲ್ಲಿ ನಾಲ್ಕು ಕೋರ್ಗಳು ಮತ್ತು 1.8GHz ನಲ್ಲಿ ನಾಲ್ಕು ಕೋರ್ಗಳು ದೊರೆಯುತ್ತವೆ.) ಚಾಲಿತ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದು ಎಂದು ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ.

ಇತರೆ ಏನೆಲ್ಲಾ ಫೀಚರ್ಸ್?

ಇತರೆ ಏನೆಲ್ಲಾ ಫೀಚರ್ಸ್?

3,800 mAh ಬ್ಯಾಟರಿಯಿಂದ ಬೆಂಬಲಿತವಾಗಿರುವ ಗ್ಯಾಲಕ್ಸಿ A9 'ಗ್ಯಾಲಕ್ಸಿ ಎ9' ಆಂಡ್ರಾಯ್ಡ್ 8.0 ಓರಿಯೊದಲ್ಲಿ ರನ್ ಆಗಲಿದೆ. 162.5 x 77 x 7.8 ಮಿಮೀ ಅಳತೆ ಮತ್ತು 183 ಗ್ರಾಂ ತೂಕವಿರುವ ಈ ಸಾಧನದಲ್ಲಿ ಅಕ್ಸೆಲೆರೊಮೀಟರ್, ಫಿಂಗರ್ಪ್ರಿಂಟ್ ಸೆನ್ಸರ್, ಗೈರೋ ಸಂವೇದಕ, ಭೂಕಾಂತೀಯ ಸಂವೇದಕ, ಹಾಲ್ ಸಂವೇದಕ, RGB ಬೆಳಕಿನ ಸಂವೇದ ಹಾಗೂ ಸಾಮೀಪ್ಯ ಸಂವೇದಕಗಳಿವೆ. ಇನ್ನು ಎನ್ಎಫ್‌ಸಿ ಮೂಲಕ ಸ್ಯಾಮ್ಸಂಗ್ ಪೇ ಅನ್ನು ಬೆಂಬಲಿಸುತ್ತದೆ.

ಬೆಲೆ ಮತ್ತು ಲಭ್ಯತೆ?

ಬೆಲೆ ಮತ್ತು ಲಭ್ಯತೆ?

ಇತ್ತೀಚಿಗಷ್ಟೇ ಮಲೇಷ್ಯಾದ ಕೌಲಾಲಂಪುರದಲ್ಲಿ ಲಾಂಚ್ ಆಗಿರುವ 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ ಬೆಲೆ ಜಾಗತಿಕವಾಗಿ 549 ಪೌಂಡ್‌ಗಳಿಂದ ಆರಂಭವಾಗಿದೆ. ಅಂದರೆ, ಭಾರತದ ರೂಪಾಯಿಗಳಲ್ಲಿ 'ಗ್ಯಾಲಕ್ಸಿ ಎ9' ಸ್ಮಾರ್ಟ್‌ಫೋನ್ ಬೆಲೆ 44,000 ರೂಪಾಯಿಗಳಿಂದ ಶುರುವಾಗಲಿದೆ ಎಂದು ಹೇಳಬಹುದು. ಭಾರತ ಸೇರಿದಂತೆ ವಿಶ್ವದ ಎಲ್ಲಾ ಮಾರುಕಟ್ಟೆಗಳಿಗೂ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಮೊಬೈಲ್ ಬೆಲೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆ ಕೂಡ ಇದೆ.

Best Mobiles in India

English summary
Samsung Galaxy A9 (2018) India Launch Set for November 20. Price Tipped to Be Around Rs. 44,000. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X