ವಿಶ್ವದ ಮೊದಲ 4 ಹಿಂಭಾಗದ ಕ್ಯಾಮರಾ ಫೋನ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆ!

|

ಸೌತ್ ಕೊರಿಯನ್ ಮೂಲದ ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿ ಮತ್ತೊಂದು ಫೋನಿನ ಬಿಡುಗಡೆಗೆ ತಯಾರಿ ನಡೆಸಿದೆ.ಕಳೆದ ತಿಂಗಳು ಮಲೇಶಿಯಾದಲ್ಲಿ ವಿಶ್ವದ ಮೊದಲ ಕ್ವಾಡ್ ಲೆನ್ಸ್ ಗಳನ್ನು ಹೊಂದಿರುವ ಹಿಂಭಾಗದ ಕ್ಯಾಮರಾವಿರುವ ಗ್ಯಾಲಕ್ಸಿ ಎ9 ಫೋನ್ ನ್ನು ಬಿಡುಗಡೆಗೊಳಿಸಿದ ನಂತರ ಇದೀಗ ಭಾರತದಲ್ಲಿ ಮುಂದಿನ ವಾರ ಇದೇ ಫೋನ್ ನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟ್ರಿಪಲ್ ಲೆನ್ಸ್ ಗಳನ್ನು ಹೊಂದಿದ್ದ ಗ್ಯಾಲಕ್ಸಿ ಎ7(2018) ಭಾರತದಲ್ಲಿ ಬಿಡುಗಡೆಗೊಂಡ ನಂತರ ಬಿಡುಗಡೆಗೊಳ್ಳುತ್ತಿರುವ ಮತ್ತೊಂದು ಸ್ಯಾಮ್ ಸಂಗ್ ಫೋನ್ ಇದಾಗಿದೆ.

ವಿಶ್ವದ ಮೊದಲ 4 ಹಿಂಭಾಗದ ಕ್ಯಾಮರಾ ಫೋನ್ ಮುಂದಿನ ವಾರ ಭಾರತದಲ್ಲಿ ಬಿಡುಗಡೆ!

ಯಾವೆಲ್ಲ ಬಣ್ಣಗಳ ಆಯ್ಕೆ ಇರಲಿದೆ?
ಕಪ್ಪು, ನೀಲಿ, ಪಿಂಕ್ ಬಣ್ಣಗಳ ಆವೃತ್ತಿಯ ಫೋನ್ ಗಳು ಈ ತಿಂಗಳಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬೆಲೆ ಎಷ್ಟು?
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 ಫೋನಿನ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 35,000 ರುಪಾಯಿ ಆಗಿರುವ ನಿರೀಕ್ಷೆ ಇದೆ.

ಗ್ಯಾಲಕ್ಸಿ ಎ9 ಫೋನಿನ ಕ್ಯಾಮರಾ ವೈಶಿಷ್ಟ್ಯತೆಗಳು:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ 9 ನಾಲ್ಕು ಲೆನ್ಸ್ ಗಳನ್ನು ಹಿಂಭಾಗದ ಕ್ಯಾಮರಾದಲ್ಲಿ ಒಳಗೊಂಡಿರುತ್ತದೆ. ಬೇರೆಬೇರೆ ಲೆನ್ಸ್ ಗಳ ವಿಚಾರವನ್ನೇ ವಿವರಿಸಿ ಪ್ರಸ್ತಾಪಿಸುವುದೇ ಆದಲ್ಲಿ ಪ್ರೈಮರಿ ಸೆನ್ಸರ್ 24ಎಂಪಿ ಜೊತೆಗೆ f/1.7 ಅಪರ್ಚರ್ ನ್ನು ಹೊಂದಿರುತ್ತದೆ 5ಎಂಪಿ ಸೆನ್ಸರ್ ನ್ನು f/2.2 ಅಪರ್ಚರ್ ನಲ್ಲಿ ಹೊಂದಿದ್ದು ಇದು ಡೆಪ್ತ್ ಎಫೆಕ್ಟ್ ನೀಡುತ್ತದೆ.

ಇನ್ನುಳಿದಂತೆ 8ಎಂಪಿ ಅಲ್ಟ್ರಾ ವೈಡ್ ಆಂಗಲ್ ನ ಸೆನ್ಸರ್ ಇರಲಿದ್ದು ಇದು 120 ಡಿಗ್ರಿವರೆಗೆ ವ್ಯೂವ್ಯಿಂಗ್ ಆಂಗಲ್ ನ್ನು ನೀಡುತ್ತದೆ. 10ಎಂಪಿ ಟೆಲಿಫೋಟೋ ಲೆನ್ಸ್ ಇನ್ನೊಂದಿರಲಿದ್ದು f/2.4 ಅಪರ್ಚರ್ ಮತ್ತು 2x ಆಪ್ಟಿಕಲ್ ಝೂಮ್ ಗೆ ಅದು ಅವಕಾಶವನ್ನು ನೀಡುತ್ತದೆ. ಹಾಗಾಗಿ ಒಟ್ಟಾರೆಯಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 ಫೋನಿನಲ್ಲಿ 24MP+10MP+8MP+5MP ಅಥವಾ 47MP ಕ್ವಾಡ್ ಲೆನ್ಸ್ ಹಿಂಭಾಗದ ಕ್ಯಾಮರಾ ಸಾಮರ್ಥ್ಯವಿರಲಿದೆ. ಮುಂಭಾಗದಲ್ಲೂ ಕೂಡ ಒಂದು ಕ್ಯಾಮರಾವಿರಲಿದ್ದು ಅದರ ಸಾಮರ್ಥ್ಯವು 24MP ಸೆಲ್ಫೀ ಕ್ಯಾಮರಾವು f/2.0 ಅಪರ್ಚರ್ ನ್ನು ಹೊಂದಿರಲಿದೆ.

ಇತರೆ ವೈಶಿಷ್ಟ್ಯತೆಗಳು:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 6.3 ಇಂಚಿನ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ ಫುಲ್ ಹೆಚ್ ಡಿ + ರೆಸಲ್ಯೂಷನ್ ನ್ನು ಮತ್ತು 3,800mAh ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ಗೆ ಅದು ಬೆಂಬಲ ನೀಡುತ್ತದೆ.

ಈ ಡಿವೈಸ್ 2.2GHz ಆಕ್ಟಾ-ಕೋರ್ ಪ್ರೊಸೆಸರ್ ನ್ನು ಹೊಂದಿದೆ ಮತ್ತು 6ಜಿಬಿ ಮತ್ತು 8ಜಿಬಿ ಮೆಮೊರಿ ಆಯ್ಕೆಗಳನ್ನು ನೀಡಲಾಗುತ್ತದೆ. ಎರಡೂ ಡಿವೈಸ್ ಗಳೂ ಕೂಡ 128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿರುತ್ತದೆ ಮತ್ತು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512 ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಬಳಕೆದಾರರಿಗೆ ಅವಕಾಶವಿರುತ್ತದೆ.

ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ಇದು ರನ್ ಆಗುತ್ತದೆ. ಕನೆಕ್ಟಿವಿಟಿ ವಿಚಾರದ ಬಗ್ಗೆ ಹೇಳುವುದಾದರೆ ವೈ-ಫೈ, ಬ್ಲೂಟೂತ್ 5.0, ಸ್ಯಾಮ್ ಸಂಗ್ ಪೇ (NFC) ಇತರೆ ಹಲವು ಆಯ್ಕೆಗಳಿವೆ. ಭದ್ರತಾ ವಿಚಾರದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿರುತ್ತದೆ. ಫೇಸ್ ಅನ್ ಲಾಕ್ ಗೂ ಕೂಡ ಈ ಡಿವೈಸ್ ಬೆಂಬಲ ನೀಡುತ್ತದೆ.

Best Mobiles in India

Read more about:
English summary
Samsung Galaxy A9, world’s first smartphone with 4-rear cameras, to launch in India next week

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X