Subscribe to Gizbot

ಸ್ಯಾಮ್‌ಸಂಗ್‌ನಿಂದ ಡ್ಯುಯಲ್ ಕ್ಯಾಮೆರಾ ಹೊಂದಿರುವ ಗ್ಯಾಲೆಕ್ಸಿ C8 ಲಾಂಚ್.!

Written By:

ಸ್ಯಾಮ್‌ಸಂಗ್ ಸದ್ಯ ಟ್ರೆಂಡ್ ಹುಟ್ಟುಹಾಕಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಇರುವ ಮತ್ತೊಂದು ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಗ್ಯಾಲೆಕ್ಸಿ S8 ಮತ್ತು ನೋಟ್ 8 ನಂತರದಲ್ಲಿ ಲಾಂಚ್ ಆಗಿರುವ ಡ್ಯುಯಲ್ ಕ್ಯಾಮೆರಾ ಹೊಂದಿರುವ ಪೋನ್ ಗ್ಯಾಲೆಕ್ಸಿ C8 ಚೀನಾ ದಲ್ಲಿ ಲಾಂಚ್ ಆಗಿದ್ದು, ಶೀಘ್ರವೇ ಭಾರತದಲ್ಲಿಯೂ ಈ ಫೋನ್ ಕಾಣಿಸಿಕೊಳ್ಳಲಿದೆ.

ಸ್ಯಾಮ್‌ಸಂಗ್‌ನಿಂದ ಡ್ಯುಯಲ್ ಕ್ಯಾಮೆರಾ ಹೊಂದಿರುವ ಗ್ಯಾಲೆಕ್ಸಿ C8 ಲಾಂಚ್.!

ಓದಿರಿ: ವಿಶ್ವದ ಟಾಪ್ 2 ಕಂಪನಿಯ ಈ ಸ್ಮಾರ್ಟ್‌ಫೋನ್ ಆಪಲ್-ಸ್ಯಾಮ್‌ಸಂಗ್‌ಗೆ ಮಾರಕವಾಗಲಿದೆ

ಈ ಫೋನಿನ ಬೆಲೆಯನ್ನು ಕಂಪನಿ ಇನ್ನು ತಿಳಿಸಿಲ್ಲ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಎಂದಿನಿಂದ ದೊರೆಯಲಿದೆ ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಕಂಪನಿಗಳ ಡ್ಯುಯಲ್ ಕ್ಯಾಮೆರಾ ಫೋನ್‌ಗಳಿಗೆ ಭರ್ಜರಿ ಸ್ಪರ್ಧೆಯನ್ನು ಈ ಫೋನ್ ನೀಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ C8 ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಕಾಣಬಹುದಾಗಿದೆ. 13 MP ಕ್ಯಾಮೆರಾ ವೊಂದು ಇದರ ಜೊತೆಗೆ 5 MPಯ ಮತ್ತೊಂದು ಕ್ಯಾಮೆರಾವನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೇ ಮುಂಭಾಗದಲ್ಲಿ 16MP ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಡ್ಯುಯಲ್ ಫೋಟೋ ಮೋಡ್:

ಡ್ಯುಯಲ್ ಫೋಟೋ ಮೋಡ್:

ಇದಲ್ಲದೇ ಡ್ಯುಯಲ್ ಕ್ಯಾಮೆರಾ ಜೊತೆಗೆ ಈ ಫೋನಿನಲ್ಲಿ ಡ್ಯುಯಲ್ ಫೋಟೋ ಮೋಡ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಬಳಕೆದಾರರು ಫೋಟೋವನ್ನು ಕ್ಲಿಕ್ ಮಾಡಿದ ನಂತರದಲ್ಲಿಯೂ ಫೋಕಲ್ ಲೈನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ.

3/4 GB RAM:

3/4 GB RAM:

ಇದಲ್ಲದೇ ಈ ಫೋನ್ ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 3GB RAM/32GB ಇಂಟರ್ನಲ್ ಮೆಮೊರಿ ಹಾಗೂ 4GB RAM/ 64GB ಇಂಟರ್ನಲ್ ಮೆಮೊರಿಯ ಆವೃತ್ತಿಗಳಲ್ಲಿ ದೊರೆಯಲಿದೆ. ಅಲ್ಲದೇ 256 GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ. ಒಟ್ಟು ಮೂರು ಬಣ್ಣದಲ್ಲಿ ಈ ಫೋನ್ ದೊರೆಯಲಿದೆ.

5.5 ಇಂಚಿನ FHD ಡಿಸ್‌ಪ್ಲೇ:

5.5 ಇಂಚಿನ FHD ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ C8 ಸ್ಮಾರ್ಟ್‌ಫೋನಿನಲ್ಲಿ 5.5 ಇಂಚಿನ FHD ಸುಪರ್ ಅಮೊಲೈಡ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಜೊತೆಗೆ ಆಕ್ಡಾಕೋರ್ ಪ್ರೋಸರ್ ಸಹ ಇದರಲ್ಲಿದೆ. ಅಲ್ಲದೇ 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung announces yet another dual camera phone after the Galaxy S8, S8+ and Note 8. Now, it is the Samsung Galaxy C8. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot