ವಿಶ್ವದ ಟಾಪ್ 2 ಕಂಪನಿಯ ಈ ಸ್ಮಾರ್ಟ್‌ಫೋನ್ ಆಪಲ್-ಸ್ಯಾಮ್‌ಸಂಗ್‌ಗೆ ಮಾರಕ: ಯಾಕೆ?

Written By:

ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ಆಪಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿರುವ ಚೀನಾ ಮೂಲದ ಹುವಾವೆ ಕಂಪನಿಯೂ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ಅದುವೇ ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ನುಗಿಹಾಕುವಂತಹ ಫೋನ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ.

ವಿಶ್ವದ ಟಾಪ್ 2 ಕಂಪನಿಯ ಈ ಸ್ಮಾರ್ಟ್‌ಫೋನ್ ಆಪಲ್-ಸ್ಯಾಮ್‌ಸಂಗ್‌ಗೆ ಮಾರಕ: ಯಾಕೆ?

ಓದಿರಿ: ಕನ್ನಡಕ್ಕೆ ಮತ್ತೊಂದು ಟಿವಿ ಚಾನಲ್ ಆಗಮನ

ಮೆಟ್ 10 ಅನ್ನುವ ಸ್ಮಾರ್ಟ್‌ಫೋನ್ ವೊಂದನ್ನು ಈಗಾಗಲೇ ಹುವಾವೆ ಕಂಪನಿಯೂ ವಿನ್ಯಾಸ ಮಾಡಿದ್ದು, ಶೀಘ್ರವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಈಗಾಗಲೇ ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ಟಾಪ್ ಎಂಡ್ ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಹಿಡಿತವನ್ನು ಹೊಂದಿದೆ. ಇದನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹುವಾವೆ ಈ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ:

ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ:

ಹುವಾವೆ ವಿಶ್ವದ ಎರಡನೇ ಅತೀ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಎನ್ನಲಾಗಿದೆ. ಮೊದಲ ಸ್ಥಾನದಲ್ಲಿ ಸ್ಯಾಮ್‌ಸಂಗ್ ಇದ್ದು, ಆಪಲ್ ಅನ್ನು ಹಿಂದಿಕ್ಕಿ ಹುವಾವೆ ಎರಡನೇ ಸ್ಥಾನವನ್ನು ಅಲಂಕರಿಸಿದೆ ಎನ್ನಲಾಗಿದೆ.

ಕಿರಿನ್ 970 ಚಿಪ್ ಸೆಟ್:

ಕಿರಿನ್ 970 ಚಿಪ್ ಸೆಟ್:

ಹುವಾವೆ ಬಿಡುಗಡೆ ಮಾಡುತ್ತಿರುವ ಮೆಟ್ 10 ಸ್ಮಾರ್ಟ್‌ಫೋನಿನಲ್ಲಿ ನಲ್ಲಿ ಹುವಾವೆ ಅಭಿವೃದ್ಧಿ ಪಡಿಸಿರುವ ಕಿರಿನ್ 970 ಚಿಪ್ ಸೆಟ್ ಅನ್ನು ಅಳವಡಿಸಲಾಗಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಕಿರಿನ್ 970 ಚಿಪ್ ಸೆಟ್ ಅತ್ಯಂತ ವೇಗದ ಪ್ರೋಸೆಸರ್ ಅನ್ನುವ ಖ್ಯಾತಿಯನ್ನು ಗಳಿಸಿಕೊಂಡಿದೆ.

ಕೃತಕ ಬುದ್ಧಿಮತ್ತೆ:

ಕೃತಕ ಬುದ್ಧಿಮತ್ತೆ:

ಈ ಮೆಟ್ 10 ಸ್ಮಾರ್ಟ್‌ಫೋನಿನಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆಯನ್ನು ಆಳವಡಿಸಿಲು ಹುವಾವೆ ಮುಂದಾಗಿದ್ದು, ಇದುವರೆಗೂ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲಾಗಿಲ್ಲ.

Nokia 6 - ಚೀನಾ ಕಂಪೆನಿಗಳಿಗೆ ಸೆಡ್ಡು ಹೊಡೆಯುವ ಏಕೈಕ ಫೋನ್ "ನೋಕಿಯಾ 6"!!
ಬೆಲೆಯೂ ಕಡಿಮೆ ಇರಲಿದೆ:

ಬೆಲೆಯೂ ಕಡಿಮೆ ಇರಲಿದೆ:

ಆಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳ ಟಾಪ್ ಎಂಡ್ ಫೋನ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಹುವಾವೆ ಮೆಟ್ 10 ಸ್ಮಾರ್ಟ್‌ಫೋನಿನ ಬೆಲೆ ಅತೀ ಕಡಿಮೆ ಇರಲಿದ ಎನ್ನಲಾಗಿದೆ. ಗುಣಮಟ್ಟವು ಹೆಚ್ಚಿನದಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Smartphone manufacturer Huawei claims its next handset will outperform rivals Apple and Samsung’s new devices to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot