ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace

Written By:

ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಯಾಮ್‌ಸಂಗ್ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ ಸ್ಮಾರ್ಟ್‌ಪೋನುಗಳೊಂದಿಗೆ ಕಾಣಿಸಿಕೊಂಡಿದ್ದು, ಮತ್ತೆ ಜನ ಸಾಮಾನ್ಯರನ್ನು ತನ್ನತ್ತ ಸೆಳೆಯುವ ಕ್ರಮಕ್ಕೆ ಮುಂದಾಗಿದೆ.

ರೂ.8490ಕ್ಕೆ 4G ಸಪೋರ್ಟ್ ಮಾಡುವ ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace

15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಕೇವಲ ಟಾಪ್ ಎಂಡ್ ಸ್ಮಾರ್ಟ್‌ಪೋನುಗಳಿಂದಲೇ ಸುದ್ದಿಯಾಗುತ್ತಿದ್ದ ಸಾಮ್‌ಸಂಗ್ ಈ ಬಾರಿ ಗ್ಯಾಲಕ್ಸಿ J2 Ace ಎಂಬ ಆರಂಭಿಕ ಬೆಲೆಯ ಸ್ಮಾರ್ಟ್‌ಪೋನನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿದ್ದು, ರೂ.8490ಕ್ಕೆ ಈ ಪೋನನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5 ಇಂಚಿನ qHD ಡಿಸ್‌ಪ್ಲೇ:

5 ಇಂಚಿನ qHD ಡಿಸ್‌ಪ್ಲೇ:

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace ಸ್ಮಾರ್ಟ್‌ಪೋನಿನಲ್ಲಿ 5 ಇಂಚಿನ qHD ಡಿಸ್‌ಪ್ಲೇ ಇದ್ದು, ಅಮೊಲೈಡ್ ಎಲ್‌ಇಟಿ ಯಿಂದ ತಯಾರಾಗಿದೆ. ಕಡಿಮೆ ಬೆಲೆಯ ಪೋನಾದರು ಡಿಸ್‌ಪ್ಲೇ ಚೆನ್ನಾಗಿದೆ.

1.5GB RAM

1.5GB RAM

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace ಸ್ಮಾರ್ಟ್‌ಪೋನು ವೇಗವಾಗಿ ಕಾರ್ಯ ನಿರ್ವಹಿಸಲಿ ಎನ್ನುವ ಕಾರಣಕ್ಕೆ ಇದರಲ್ಲಿ 1.5GB RAM ಅನ್ನು ಅಳವಡಿಸಲಾಗಿದೆ. 1.4GHz ಕ್ವಾಡ್ ಕೋರ್ ಪ್ರೋಸೆಸರ್ ಈ ಪೋನಿನಲ್ಲಿದೆ.

8MP ಕ್ಯಾಮೆರಾ:

8MP ಕ್ಯಾಮೆರಾ:

ಈ ಪೋನಿನಲ್ಲಿ ಎಲ್‌ಇಡಿ ಫ್ಲಾಷ್‌ ಲೈಟಿನ ಜೊತೆಯಲ್ಲಿ 8MP ಹಿಂಬದಿ ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದೆ.

8GB ಇಂಟರ್ನಲ್ ಮೆಮೊರಿ

8GB ಇಂಟರ್ನಲ್ ಮೆಮೊರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace ಸ್ಮಾರ್ಟ್‌ಪೋನಿನಲ್ಲಿ 8GB ಇಂಟರ್ನಲ್ ಮೆಮೊರಿ ಇದ್ದು, ಬಳಕೆದಾರರಿಗೆ 6 GB ಲಭ್ಯವಿರಲಿದೆ. ಇದಲ್ಲದೇ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಿಕೊಳ್ಳುವ ಅವಕಾಶವನ್ನು ಈ ಪೋನ್‌ನಲ್ಲಿ ನೀಡಲಾಗಿದೆ.

4G ಸಪೋರ್ಟ್ ಮಾಡಲಿದೆ:

4G ಸಪೋರ್ಟ್ ಮಾಡಲಿದೆ:

ಸ್ಯಾಮ್‌ಸಂಗ್ ಗ್ಯಾಲಕ್ಸಿ J2 Ace 4G ಸಪೋರ್ಟ್ ಮಾಡಲಿದ್ದು, 2600mAh ಬ್ಯಾಟರಿಯನ್ನು ಹೊಂದಿದೆ. ಬ್ಲ್ಯಾಕ್ ಮತ್ತು ವೈಟ್ ಬಣ್ಣದಲ್ಲಿ ಲಭ್ಯವಿದೆ. ರಿಲಯನ್ಸ್ ಜಿಯೋ ಸಿಮ್ ಅನ್ನು ಈ ಪೋನಿನಲ್ಲಿ ಬಳಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Samsung India seems to have launched the Galaxy J2 Ace in India. A listing spotted on an e-commerce site shows the J2 Ace on sale for Rs 8490. to konw more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot