ಒನ್‌ಪ್ಲಸ್‌ಗೆ ಸೆಡ್ಡು: ಮಾರುಕಟ್ಟೆಗೆ ಮೂರು ಬೊಂಬಾಟ್ ಫೋನ್‌ಗಳನ್ನು ಬಿಟ್ಟ ಸ್ಯಾಮ್‌ಸಂಗ್..!

|

ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯುತ್ತಿರುವ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳಿಗೆ ಎದುರಾಗಿ ಸ್ಯಾಮ್‌ಸಂಗ್ ಒಟ್ಟು ಮೂರು ಸ್ಮಾರ್ಟ್‌ಫೋನ್‌ಗಳನ್ನು ಒಮ್ಮೆಗೆ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಗ್ಯಾಲೆಕ್ಸಿ A6, ಗ್ಯಾಲೆಕ್ಸಿ A6+ ಮತ್ತು ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ವಿವಿಧ ಮಾದರಿಯಲ್ಲಿ, ಬೇರೆ ಬೇರೆ ಬೆಲೆಗಳಲ್ಲಿ ಮಾರಾಟವಾಗಲಿದೆ.

ಮಾರುಕಟ್ಟೆಗೆ ಮೂರು ಬೊಂಬಾಟ್ ಫೋನ್‌ಗಳನ್ನು ಬಿಟ್ಟ ಸ್ಯಾಮ್‌ಸಂಗ್..!

ಗ್ಯಾಲೆಕ್ಸಿ J6 ಬಜೆಟ್ ಬೆಲೆಯಲ್ಲಿ ಮಾರಾಟವಾದರೆ, ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ A6 ಮತ್ತು ಗ್ಯಾಲೆಕ್ಸಿ A6+ ಸ್ಮಾರ್ಟ್‌ಫೋನ್‌ಗಳು ಮಧ್ಯಮ ಬೆಲೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸ್ಯಾಮ್‌ಸಂಗ್ ಆರಂಭಿಕ ಕೊಡುಗೆಯನ್ನು ನೀಡಲಿದೆ ಎನ್ನಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿಯೂ ಈ ಮುಂದಿನಂತಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್‌ಫೋನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹಾಕಿಕೊಳ್ಳುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ 5.6 ಇಂಚಿನ HD+ ಗುಣಮಟ್ಟದ ಅಮೊಲೈಡ್ ಪ್ಯಾನಲ್ ಅನ್ನು ಹೊಂದಿದೆ. ಇದಲ್ಲದೇ ಇದು 18.5:9 ಅನುಪಾತದ ಡಿಸ್‌ಪ್ಲೇಯಾಗಿದೆ. 3000mAh ಬ್ಯಾಟರಿಯನ್ನು ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

4GB RAM:

4GB RAM:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಸ್ಮಾರ್ಟ್‌ಫೋನಿನಲ್ಲಿ 4GB RAM ಅನ್ನು ಕಾಣಬಹುದಾಗಿದ್ದು, 16.GHz ವೇಗದ ಆಕ್ಟಾ ಕೋರ್ ಎಕ್ಸೋನಾಸ್ 7 ಸರಣಿಯ ಪ್ರೋಸೆಸರ್ ಅನ್ನು ಹೊಂದಿದೆ. ಇದಲ್ಲದೇ ಹಿಂಭಾಗ ಮತ್ತು ಮುಂಭಾಗದಲ್ಲಿ 16 MP ಕ್ಯಾಮೆರಾವನ್ನು ಅಳವಡಿಸಿದ್ದು, 32 GB ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ದೊರೆಯಲಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲಸ್ ಸ್ಮಾರ್ಟ್‌ಫೋನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲಸ್ ಸ್ಮಾರ್ಟ್‌ಫೋನ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲನ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ 6 ಇಂಚಿನ FHD+ ಗುಣಮಟ್ಟದ ಅಮೊಲೈಡ್ ಪ್ಯಾನಲ್ ಅನ್ನು ಹೊಂದಿದೆ. ಇದಲ್ಲದೇ ಇದು 18.5:9 ಅನುಪಾತದ ಡಿಸ್‌ಪ್ಲೇಯಾಗಿದೆ. 3500mAh ಬ್ಯಾಟರಿಯನ್ನು ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ವೇಗ:

ವೇಗ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 4GB RAM ಅನ್ನು ಕಾಣಬಹುದಾಗಿದ್ದು, 16.GHz ವೇಗದ ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 450 ಪ್ರೋಸೆಸರ್ ಅನ್ನು ಹೊಂದಿದೆ. ಇದಲ್ಲದೇ ಹಿಂಭಾಗ ಡ್ಯುಯಲ್ ಲೈನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 16 MP + 5 MP ಕ್ಯಾಮೆರಾವನ್ನು ಅಳವಡಿಸಿದ್ದು, ಮುಂಭಾಗದಲ್ಲಿ 24 MP ಕ್ಯಾಮೆರಾವನ್ನು ನೀಡಲಾಗಿದೆ. 64 GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ದೊರೆಯಲಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್:

ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನ್:

ಡ್ಯುಯಲ್ ಸಿಮ್ ಹಾಕಿಕೊಳ್ಳಬಹುದಾಗಿದ್ದು, ಆಂಡ್ರಾಯ್ಡ್ 8.0 ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ 5.6 ಇಂಚಿನ HD+ ಗುಣಮಟ್ಟದ ಅಮೊಲೈಡ್ ಪ್ಯಾನಲ್ ಅನ್ನು ಹೊಂದಿದೆ. ಇದಲ್ಲದೇ ಇದು 18.5:9 ಅನುಪಾತದ ಡಿಸ್‌ಪ್ಲೇಯಾಗಿದೆ. 3000mAh ಬ್ಯಾಟರಿಯನ್ನು ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ.

ಹಾರ್ಡ್‌ವೇರ್:

ಹಾರ್ಡ್‌ವೇರ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಪ್ಲಸ್ ಸ್ಮಾರ್ಟ್‌ಫೋನಿನಲ್ಲಿ 3GB ಮತ್ತು 4GB RAM ಅನ್ನು ಕಾಣಬಹುದಾಗಿದ್ದು, ಎಕ್ಸೋನಾಸ್ 7870 ಪ್ರೋಸೆಸರ್ ಅನ್ನು ಹೊಂದಿದೆ. ಇದಲ್ಲದೇ ಹಿಂಭಾಗ 13 MP ಕ್ಯಾಮೆರಾವನ್ನು ಮತ್ತು ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಿದ್ದು, 32 GB ಮತ್ತು 64 GB ಇಂಟರ್ನಲ್ ಮೆಮೊರಿ ಆವೃತ್ತಿಯಲ್ಲಿ ದೊರೆಯಲಿದೆ. ಅಲ್ಲದೇ 256GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

How to send WhatsApp Payments invitation to others - GIZBOT KANNADA
ಬೆಲೆಗಳು:

ಬೆಲೆಗಳು:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ J6 ಪ್ಲಸ್ ಸ್ಮಾರ್ಟ್‌ಫೋನ್ ಆರಂಭಿಕ ಬೆಲೆಯಲ್ಲಿ ದೊರೆಯುತ್ತಿದ್ದು, 3GB RAM/32GB ಆವೃತ್ತಿ ರೂ.13,990ಕ್ಕೆ ಹಾಗೂ 4GB RAM/ 64GB ಆವೃತ್ತಿಯೂ ರೂ.16,490ಕ್ಕೆ ಲಭ್ಯವಿರಲಿದೆ. ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 32GB ಆವೃತ್ತಿಯೂ ರೂ.21,990ಕ್ಕೆ ಹಾಗೂ 64GB ರೂ.22,990ಕ್ಕೆ ಮಾರಾಟವಾಗಲಿದೆ. ಇದೇ ಮಾದರಿಯಲ್ಲಿ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A6 ಪ್ಲಸ್ ರೂ.25,990ಕ್ಕೆ ದೊರೆಯಲಿದೆ ಎನ್ನಲಾಗಿದೆ.

Best Mobiles in India

English summary
Samsung Galaxy J6, Galaxy A6, and Galaxy A6+ Go on Sale in India Today. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X