ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆ ಈಗ 10 ಸಾವಿರಕ್ಕಿಂತ ಕಡಿಮೆ!!

|

ಭಾರತದ ನಂಬರ್ ಒನ್ ಮೊಬೈಲ್ ಕಂಪೆನಿ ಎಂಬ ಕಿರೀಟ ಕಳೆದುಕೊಂಡಿರುವ ಸ್ಯಾಮ್‌ಸಂಗ್ ಇದೀಗ ಚೀನಾ ಮೊಬೈಲ್ ಕಂಪೆನಿಗಳೊಂದಿಗೆ ದರಸಮರಕ್ಕೆ ಇಳಿದಿದೆ. ಸ್ಮಾರ್ಟ್‌ಪೋನ್ ಮಾರಾಟದಲ್ಲಿ ಕುಸಿತವಾದ ನಂತರ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಭಾರಿ ಇಳಿಕೆ ಮಾಡಿ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಮುಂದಾಗಿದೆ.

ಇಲ್ಲಿಯವರೆಗೂ ಹಲವು ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಇಳಿಕೆ ಮಾಡಿರುವ ಸ್ಯಾಮ್‌ಸಂಗ್ ಇದೀಗ ಹೆಚ್ಚು ಸೇಲ್ ಆಗುತ್ತಿರುವ ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಫೋನ್ ಬೆಲೆಯನ್ನು ಇಳಿಕೆ ಮಾಡಿದೆ. ಹಾಗಾಗಿ, ಗ್ಯಾಲಕ್ಸಿ ಜೆ7 ನೆಕ್ಸ್ಟ್ ಸ್ಮಾರ್ಟ್‌ಫೋನ್ ಅನ್ನು ಇದೀಗ ಕೇವಲ 10 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಜೆ7 ನೆಕ್ಸ್ಟ್' ಬೆಲೆ ಈಗ 10 ಸಾವಿರಕ್ಕಿಂತ ಕಡಿಮೆ!!

ಹಾಗಾದರೆ, 5.5 ಇಂಚಿನ ಡಿಸ್‌ಪ್ಲೇ, 3000 mAh ಬ್ಯಾಟರಿ ಹಾಗೂ 4G ವೋಲ್ಟ್ ಸಪೋರ್ಟ್‌ನಂತಹ ಎಲ್ಲಾ ಫೀಚರ್ಸ್ ಹೊಂದಿರುವ "ಗ್ಯಾಲಕ್ಸಿ ಜೆ7 ನೆಕ್ಸ್ಟ್" ಫೋನ್ ಮೇಲೆ ಎಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ? ಮತ್ತು ಸ್ಮಾರ್ಟ್‌ಪೊನ್ ಹೊಂದಿರುವ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

ಪ್ರಸ್ತುತ ಸ್ಮಾರ್ಟ್‌ಫೋನ್ ಬೆಲೆ ಎಷ್ಟು?

2GB RAM ಮತ್ತು 16 ಜಿಬಿ ಮೆಮೊರಿ ಹಾಗೂ 3 ಜಿಬಿ RAM ಮತ್ತು 32 ಜಿಬಿ ಮೆಮೊರಿ ಫೋನ್‌ಗಳು ಇದೀಗ ಕೇವಲ 9,990 ರೂ. ಮತ್ತು 11,990 ರೂಪಾಯಿಗಳಿಗೆ ಲಭ್ಯವಿವೆ.

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

5.5 ಇಂಚಿನ (720×1280 pixels) ಡಿಸ್‌ಪ್ಲೇ ಹೊಂದಿರುವ ಗ್ಯಾಲಕ್ಸಿ ಜೆ7 ನೆಕ್ಸ್ಟ್ ಸ್ಮಾರ್ಟ್‌ಫೋನ್ ಅಮೋಲೆಡ್ ಗೋರಿಲ್ಲಾ ಗ್ಲಾಸ್ 5 ಹೊದಿಕೆಯನ್ನು ಹೊಂದಿದೆ.

ಪ್ರೊಸೆಸರ್ ಯಾವುದು?

ಪ್ರೊಸೆಸರ್ ಯಾವುದು?

1. GHz ಆಕ್ಟಾ-ಕೋರ್ Exynos 8895 ಪ್ರೊಸೆಸರ್ (4x2.3 GHz & 4x1.7 GHz) ಹೊಂದಿರುವ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ನ್ಯೂಗಾ ಮೂಲಕ ಕಾರ್ಯನಿರ್ವಹಣೆ ನೀಡಲಿದೆ.

ಕ್ಯಾಮೆರಾ

ಕ್ಯಾಮೆರಾ

13 ಎಮ್‌ಪಿ ರಿಯರ್ ಕ್ಯಾಮೆರಾ ಹಾಗೂ 5 ಎಮ್‌ಪಿ ಫ್ರಂಟ್ ಕ್ಯಾಮೆರಾ ಹೊಂದಿರುವ ಈ ಸ್ಮಾರ್ಟ್‌ ಫೋನ್ ಎರಡೂ ಬದಿಯಲ್ಲಿ ಎಲ್‌ಇಡಿ ಫ್ಲ್ಯಾಶ್ ಲೈಟ್ ಅನ್ನು ಹೊಂದಿದೆ.

ಬ್ಯಾಟರಿ ಶಕ್ತಿ ಎಷ್ಟು?

ಬ್ಯಾಟರಿ ಶಕ್ತಿ ಎಷ್ಟು?

ಗ್ಯಾಲಕ್ಸಿ ಜೆ7 ನೆಕ್ಸ್ಟ್ ಸ್ಮಾರ್ಟ್‌ಫೋನ್ 3000mAh ಸಾಮರ್ಥ್ಯದ ಲೀ ಐಯಾನ್ ಬ್ಯಾಟರಿಯನ್ನು ಹೊಂದಿದೆ.

ಇತರೆ ಫೀಚರ್ಸ್?

ಇತರೆ ಫೀಚರ್ಸ್?

4ಜಿ ವೋಲ್ಟ್, ವೈಬ್ 802.11, ಬ್ಲೂಟೂತ್, 4 ಜಿಪಿಎಸ್, ಯುಎಸ್ಬಿ ಟೈಪ್-ಸಿ, ಎನ್ಎಫ್ಸಿ, ಮೈಕ್ರೋ ಯುಎಸ್‌ಬಿ, ಡ್ಯುಯಲ್ ಸಿಮ್‌ನಂತಹ ಫೀಚರ್‌ಗಳು ಸ್ಮಾರ್ಟ್‌ಫೋನಿನಲ್ಲಿವೆ.

Best Mobiles in India

English summary
Samsung Galaxy J7 Nxt Receives a Price Cut in India. to knoe more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X