Subscribe to Gizbot

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಜೆ7 ಪ್ರೈಮ್' ಭಾರತದಲ್ಲಿ ಇಂದು ಬಿಡುಗಡೆ: ವಿಶೇಷತೆಗಳು!

Written By:

ಸ್ಯಾಮ್‌ಸಂಗ್‌ ಭಾರತದಲ್ಲಿ ಇಂದು ತನ್ನ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಸಜ್ಜುಗೊಂಡಿದೆ. ಗುರಗಾಂವ್'ನಲ್ಲಿ ಬೆಳಿಗ್ಗೆ 11:30 ಸಮಯಕ್ಕೆ ಬಿಡುಗಡೆ ಕಾರ್ಯಕ್ರಮ ಆರಂಭ ಮಾಡಲು ನಿಶ್ಚಯಿಸಿದೆ. ಈ ಹಿಂದೆ ಸ್ಯಾಮ್‌ಸಂಗ್‌ ಖಚಿತವಾಗಿ ಸ್ಮಾರ್ಟ್‌ಫೋನ್ ಯಾವುದು ಎಂದು ಹೇಳಿರಲಿಲ್ಲ. ಆದರೆ ಜೆ ಸೀರೀಸ್‌ನಲ್ಲಿ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವ ಬಗ್ಗೆ ಮಾಹಿತಿ ನೀಡಿತ್ತು.

ಅಂದಹಾಗೆ ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಆಗಸ್ಟ್‌ನಲ್ಲಿ ವಿಯೆಟ್ನಾಂನಲ್ಲಿ ಬಿಡುಗಡೆಯಾಗಿತ್ತು. ಸ್ಮಾರ್ಟ್‌ಫೋನ್‌ ವಿಯಟ್ನಾಂನಲ್ಲಿ ಬೆಲೆ ರೂ.18,790 ಕ್ಕೆ ಲಭ್ಯವಿತ್ತು, ಆದರೆ ಇಲ್ಲಿನ ಬೆಲೆ ರೂ.19,400 ಇರಲಿದೆ ಎಂದು ಮುಂಬೈ ರೀಟೇಲರ್‌ಗಳು ನಿರೀಕ್ಷೆ ಇಟ್ಟಿದ್ದರು. ಅಂತೆಯೇ ಇಂದು ಅಮೆಜಾನ್‌ ಇಂಡಿಯಾದಲ್ಲಿ ರೂ.19,400 ಗೆ ಖರೀದಿಗೆ ಲಭ್ಯವಿದೆ.

ಅಂದಹಾಗೆ ದೀಪಾವಳಿ ಸೀಸನ್‌ನಲ್ಲಿ ಬಜೆಟ್ ಬೆಲೆಯಲ್ಲಿ ಉತ್ತಮ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ ಖರೀದಿಸಲು ಯಾರಾದ್ರು ಈಗಾಗಲೇ ಪ್ಲಾನ್ ಮಾಡಿದ್ರೆ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಸ್ಮಾರ್ಟ್‌ಫೋನ್ ಫೀಚರ್‌ಗಳನ್ನು ಒಮ್ಮೆ ತಿಳಿದು ಖರೀದಿಸಲು ನಿರ್ಧರಿಸಿ. ಫೀಚರ್‌ಗಳಿಗಾಗಿ ಲೇಖನದ ಸ್ಲೈಡರ್‌ ಓದಿರಿ.

ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 7 ಫೋನಿನ ಐದು ಸಮಸ್ಯೆಗಳು: ಅವುಗಳಿಗಿರುವ ಪರಿಹಾರವೇನು?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)'

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)'

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)', 2016 ರ'ಗ್ಯಾಲಕ್ಸಿ ಜೆ7 (Galaxy J7)' ಸ್ಮಾರ್ಟ್‌ಫೋನ್‌ನ ಅಪ್‌ಡೇಟೆಡ್‌ ವರ್ಸನ್‌ ಆಗಿದೆ. ಹೋಮ್ ಬಟನ್‌ನಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸಾರ್ ಫೀಚರ್ ಹೊಂದಿದೆ.

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಡಿಸ್‌ಪ್ಲೇ

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಡಿಸ್‌ಪ್ಲೇ

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಸಂಪೂರ್ಣ HD ಡಿಸ್‌ಪ್ಲೇ ಹೊಂದಿದೆ. 'ಗ್ಯಾಲಕ್ಸಿ ಜೆ7' 2GB RAM ಹೊಂದಿತ್ತು, ಆದರೆ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' 3GB RAM ಹೊಂದಿದೆ. ಇನ್‌ಬಿಲ್ಟ್‌ ಸ್ಟೋರೇಜ್‌ 16TGB ಬದಲು 32GB, 5MP ಸೆಲ್ಫಿ ಕ್ಯಾಮೆರಾ ಬದಲು 8MP ಸೆಲ್ಫಿ ಕ್ಯಾಮೆರಾ ಹೊಂದಿದೆ.

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಇತರೆ ವಿಶೇಷತೆಗಳು

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಇತರೆ ವಿಶೇಷತೆಗಳು

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)', 'ಗ್ಯಾಲಕ್ಸಿ ಜೆ7'ಗೆ ಹೆಚ್ಚು ಹೊಂದಾಣಿಕೆ ಇದೆ. ಡ್ಯುಯಲ್‌ ಸಿಮ್‌(ಮೈಕ್ರೋ ಸಿಮ್‌) ಫೀಚರ್‌ ಹೊಂದಿದ್ದು, ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ ಓಎಸ್‌ ಹೊಂದಿದೆ.

ಸ್ಮಾರ್ಟ್‌ಫೋನ್‌ 5.5 ಇಂಚಿನ ಪೂರ್ಣ HD (1080*1920) IPS ಡಿಸ್‌ಪ್ಲೇ ಅನ್ನು 2.5D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 4 ಜೊತೆಗೆ ಹೊಂದಿದೆ. .6GHz ಆಕ್ಟಾ ಕೋರ್‌ ಪ್ರೊಸೆಸರ್ ಚಾಲಿತವಾಗಿದೆ.

ಕ್ಯಾಮೆರಾ ಫೀಚರ್

ಕ್ಯಾಮೆರಾ ಫೀಚರ್

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಎಫ್ / 1.9 ದ್ಯುತಿರಂಧ್ರ ಮತ್ತು ಎಲ್ಇಡಿ ಫ್ಲಾಶ್'ನ 13MP ಹಿಂಭಾಗ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿದೆ. ಸ್ಮಾರ್ಟ್‌ಫೋನ್‌ 32GB ಇನ್‌ಬಿಲ್ಟ್‌ ಸ್ಟೋರೇಜ್‌ ಹೊಂದಿದ್ದು, ಮೈಕ್ರೋ ಎಸ್‌ಡಿ ಕಾರ್ಡ್‌ನಿಂದ 256GB ವರೆಗೆ ಶೇಕರಣ ಸಾಮರ್ಥ್ಯ ವಿಸ್ತರಣೆ ಮಾಡಬಹುದು. ಆದರೆ ಗ್ಯಾಲಕ್ಸಿ ಜೆ7 ಕೇವಲ 128GB ವರೆಗೆ ಮೈಕ್ರೋಎಸ್‌ಡಿ ಕಾರ್ಡ್‌ ಸಪೋರ್ಟ್ ಮಾಡುತ್ತದೆ.

 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಸಂಪರ್ಕ ವಿಶೇಷತೆಗಳು

'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' ಸಂಪರ್ಕ ವಿಶೇಷತೆಗಳು

ಇತ್ತೀಚಿನ ಸ್ಯಾಮ್‌ಸಂಗ್‌ ಜೆ ಸೀರೀಸ್‌ ಸ್ಮಾರ್ಟ್‌ಫೋನ್‌ ಆದ 'ಗ್ಯಾಲಕ್ಸಿ ಜೆ7 ಪ್ರೈಮ್ (Galaxy J7 Prime)' 4G LTE, ವೈಫೈ, ಜಿಪಿಎಸ್/ಎ-ಜಿಪಿಎಸ್, ಬ್ಲೂಟೂತ್ ವಿ4.1, ಮೈಕ್ರೋ-USB(0TG ಜೊತೆಗೆ), 3.5mm ಆಡಿಯೋ ಜಾಕ್‌ ಹೊಂದಿದೆ.

151.5x74.9x8.1mm ಅಳತೆಯ 3300mAh ಬ್ಯಾಟರಿ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Samsung Galaxy J7 Prime India Launch Expected Today. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot