Just In
Don't Miss
- News
ಒಳ್ಳೆ ಸುದ್ದಿ; ವಿಶ್ವದಲ್ಲೇ ಅತಿ ಕಡಿಮೆ ಸೋಂಕಿನ ಪ್ರಮಾಣ ದಾಖಲಿಸಿದ ಭಾರತ
- Finance
ಕ್ಯಾಪಿಟಾಲ್ ಹಿಂಸಾಚಾರ ಮುನ್ನ 5 ಲಕ್ಷ USD ಗೂ ಹೆಚ್ಚು ಮೊತ್ತದ ಬಿಟ್ ಕಾಯಿನ್ ವರ್ಗಾವಣೆ
- Automobiles
ಜನಪ್ರಿಯ ಅವೆಂಜರ್ ಬೈಕುಗಳ ಬೆಲೆ ಏರಿಸಿದ ಬಜಾಜ್ ಆಟೋ
- Sports
SMAT : ಅಬ್ಬರಿಸಿದ ರಾಬಿನ್ ಉತ್ತಪ್ಪ, ಡೆಲ್ಲಿ ವಿರುದ್ಧ ದಾಖಲೆಯ ಮೊತ್ತ ಬೆನ್ನಟ್ಟಿ ಗೆದ್ದ ಕೇರಳ
- Movies
ಎರಡನೇ ಬಾರಿ ತಂದೆಯಾದ ಸಂತಸದಲ್ಲಿ ಕಾಮಿಡಿ ನಟ ಧರ್ಮಣ್ಣ
- Lifestyle
ಚೆನ್ನಾಗಿ ಜೀರ್ಣವಾಗಬೇಕೆಂದರೆ ಊಟದ ಬಳಿಕ ಮಾಡಬಾರದ 5 ಕಾರ್ಯಗಳು
- Education
BECIL Recruitment 2021: 11 ರೇಡಿಯೋಗ್ರಾಫರ್ ಅಥವಾ ಎಕ್ಸ್-ರೇ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಫಸ್ಟ್ ಲುಕ್: ಬಜೆಟ್ ದರದಲ್ಲಿ ಬೆಸ್ಟ್ ಬ್ಯಾಟರಿ ಫೋನ್!
ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ನೂತನ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಪ್ರಮುಖ ಆಕರ್ಷಣೆ ಆಗಿದೆ. ಇದರೊಂದಿಗೆ ಅಧಿಕ RAM ಹಾಗೂ ವೇಗದ ಪ್ರೊಸೆಸರ್ ಫೀಚರ್ಸ್‌ಗಳಿಂದಲೂ ಈ ಫೋನ್ ಮತ್ತಷ್ಟು ಟ್ರೆಂಡಿ ಅನಿಸಿಕೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿದ್ದು, 4GB RAM + 64GB ಸಾಮರ್ಥ್ಯದ ವೇರಿಯಂಟ್ ಆಯ್ಕೆ ಹೊಂದಿದೆ. ಹಾಗೆಯೇ ಈ ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಅನ್ನು ಹೊಂದಿದ್ದು, ಉತ್ತಮ ಸ್ಕ್ರೀನ್ ರೆಸಲ್ಯೂಶನ್ ಪಡೆದುಕೊಂಡಿದೆ. ಹಾಗಾದರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನಿನ ಇತರೆ ಫೀಚರ್ಸ್‌ಗಳ ಕಾರ್ಯವೈಖರಿಯ ಬಗ್ಗೆ ಹಾಗೂ ಫಸ್ಟ್ ಲುಕ್ ಹೇಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳನ್ನು ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ 720x1560 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಒಳಗೊಂಡಿರುವ TFT ಡಿಸ್‌ಪ್ಲೇ ಇದಾಗಿದೆ. ಇನ್ನು ಈ ಡಿಸ್‌ಪ್ಲೇ 264ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಗೇಮಿಂಗ್ ಹಾಗೂ ವಿಡಿಯೊ ವೀಕ್ಷಣೆಗಳಿಗೂ ಪೂರಕ ಅನಿಸುವಂತಿದೆ.

ಯಾವ ಪ್ರೊಸೆಸರ್ ಇದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 450 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೆ 3GB RAM + 32GB ಮತ್ತು 4GB RAM ಮತ್ತು 64GB ಆಂತರೀಕ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ನೀಡಿದೆ. ವೇಗದ ಗೇಮ್‌ಗಳಿಗೂ ಸಪೋರ್ಟ್ ಮಾಡುವಂತಿದೆ.

ಟ್ರಿಪಲ್ ಕ್ಯಾಮೆರಾ ಸೆನ್ಸಾರ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇನ್ನು ಈ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಐಎಸ್‌ಒ ಕಂಟ್ರೋಲ್, ಆಟೋ ಫ್ಲ್ಯಾಷ್, ಡಿಜಿಟಲ್ ಜೂಮ್, ಹೆಚ್‌ಡಿಆರ್ ಆಯ್ಕೆಗಳು ಇವೆ.

ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕಪ್ ಅನ್ನು ಹೊಂದಿದ್ದು, ಇದು 15m ಕ್ವಿಕ್ ಚಾರ್ಜ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಸಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M02s ಸ್ಮಾರ್ಟ್‌ಫೋನ್ 3GB RAM + 32GB ವೇರಿಯಂಟ್ ದರವು 8,999 ರೂ. ಆಗಿದೆ. ಹಾಗೆಯೇ 4GB RAM ಮತ್ತು 64GB ವೇರಿಯಂಟ್‌ನ ಬೆಲೆಯು 9,999ರೂ.ಗಳು ಆಗಿದೆ. ಈ ಫೋನ್ ಬ್ಲ್ಯಾಕ್, ಬ್ಲೂ ಹಾಗೂ ರೆಡ್ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ. ಅಮೆಜಾನ್, ಸ್ಯಾಮ್‌ಸಂಗ್ ತಾಣಗಳಲ್ಲಿ ಮತ್ತು ರೀಟೈಲ್ ಸ್ಟೋರ್‌ಗಳಲ್ಲಿ ಸದ್ಯದಲ್ಲೇ ಖರೀದಿಗೆ ಲಭ್ಯವಾಗಲಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190