Just In
- 33 min ago
ಸ್ಯಾಮ್‌ಸಂಗ್ ಗ್ಯಾಲಕ್ಸಿ F02s ಫಸ್ಟ್ ಲುಕ್; ಅಗ್ಗದ ಬೆಲೆಯಲ್ಲಿ ಆಕರ್ಷಕ ಫೋನ್!
- 15 hrs ago
ವಿದ್ಯಾರ್ಥಿಗಳಿಗಾಗಿ 'ಬ್ಯಾಕ್ ಟು ಸ್ಕೂಲ್' ಅಭಿಯಾನ ಆರಂಭಿಸಿದ ಸ್ಯಾಮ್‌ಸಂಗ್!
- 16 hrs ago
ಬಿಎಸ್ಎನ್ಎಲ್ನಿಂದ ಅಗ್ಗದ ಪ್ಲ್ಯಾನ್ ಲಾಂಚ್; ದಂಗಾದ ಖಾಸಗಿ ಟೆಲಿಕಾಂಗಳು!
- 16 hrs ago
ಏಪ್ರಿಲ್ನಲ್ಲಿ 10,000 ರೂ.ಒಳಗೆ ಬೆಲೆಯಲ್ಲಿ ಖರೀದಿಸಬಹುದಾದ ಸ್ಮಾರ್ಟ್ಫೋನ್ಗಳು!
Don't Miss
- News
ದಿವ್ಯ ಸಪ್ತತಿ ಪೂರ್ತಿ ಮಹೋತ್ಸವ; ಶೃಂಗೇರಿಗೆ ಭಕ್ತರ ಭೇಟಿಗೆ ಅವಕಾಶವಿಲ್ಲ
- Sports
ಈ ವಿಶಿಷ್ಟ ದಾಖಲೆಯಲ್ಲಿ ಕೊಹ್ಲಿಯನ್ನು ಹಿಂದಿಕ್ಕಿದ ಧವನ್
- Lifestyle
ವಾರ ಭವಿಷ್ಯ:ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Finance
ಟೈರ್ ಮತ್ತು ಬ್ಯಾಟರಿಗಳನ್ನು ಪರಿಚಯಿಸಿದ ಮಾರುತಿ ಸುಜುಕಿ
- Automobiles
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- Movies
'ಇಂದಿರಾನಗರದ ಗೂಂಡಾ ನಾನೇ' ಎಂದು ದ್ರಾವಿಡ್ಗೆ ಸೆಡ್ಡು ಹೊಡೆದ ಖ್ಯಾತ ನಟಿ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಮತ್ತು ಗ್ಯಾಲಕ್ಸಿ M11: ಖರೀದಿಗೆ ಯಾವುದು ಬೆಸ್ಟ್?
ದಕ್ಷಿಣ ಕೊರಿಯಾ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಬಜೆಟ್ ಪ್ರೈಸ್ ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದ್ದರೂ, ದೈತ್ಯ ಫೀಚರ್ಸ್‌ಗಳಿಂದ ಆಂಡ್ರಾಯ್ಡ್ ಫೋನ್ ಪ್ರಿಯರನ್ನು ಸೆಳೆದಿದೆ. ಈ ಫೋನ್ ಕ್ವಾಡ್ ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿರುವ ಜೊತೆಗೆ ಅಧಿಕ ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೇ ಸಂಸ್ಥೆಯು ಇತ್ತೀಚಿಗಷ್ಟೆ ಲಾಂಚ್ ಮಾಡಿರುವ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಸಹ ಕೆಲವು ಆಕರ್ಷಕ ಫೀಚರ್ಸ್‌ಗಳಿಂದ ಉತ್ತಮ ಅನಿಸಿದೆ. ಆದರೆ ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್?
ಸ್ಯಾಮ್‌ಸಂಗ್ ಸಂಸ್ಥೆಯ ಹೊಸ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಮತ್ತು ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಈ ಎರಡು ಫೋನ್‌ಗಳು ಬಜೆಟ್ ಬೆಲೆಯಲ್ಲಿ ಕಾಣಿಸಿಕೊಂದಿವೆ. ಆದರೆ ಈ ಎರಡು ಫೋನ್‌ಗಳ ಫೀಚರ್ಸ್‌ಗಳಲ್ಲಿ ಭಿನ್ನತೆ ಇರುವುದನ್ನು ಗಮನಿಸಬಹುದು. ಹೊಸ ಗ್ಯಾಲಕ್ಸಿ M12 ಫೋನಿನ ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ ಹಾಗೆಯೇ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಕ್ಯಾಮೆರಾವು 13ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇ ರಚನೆ ಹಾಗೂ ರೆಸಲ್ಯೂಶನ್‌ನಲ್ಲಿಯೂ ಹಾಗೂ ಬ್ಯಾಟರಿ ಬಾಳಿಕೆಯಲ್ಲಿಯೂ ಭಿನ್ನತೆ ಕಾಣಬಹುದಾಗಿದೆ. ಹಾಗಾದರೇ ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯೋಗ್ಯ ಯಾವುದು? ಇವುಗಳ ಫೀಚರ್ಸ್‌ಗಳೆನು? ಬೆಲೆ ಎಷ್ಟು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.
ಬೆಲೆ ಎಷ್ಟು?
ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 4 ಜಿಬಿ + 64 ಜಿಬಿ ವೇರಿಯಂಟ್ ಸ್ಟೋರೇಜ್‌ನ ಬೆಲೆಯು 10,999ರೂ. ಆಗಿದೆ. ಹಾಗೆಯೇ 6 ಜಿಬಿ + 128 ಜಿಬಿ ಸ್ಟೋರೇಜ್‌ನ ವೇರಿಯಂಟ್ ಬೆಲೆಯು 13,499ರೂ. ಆಗಿದೆ. ಇನ್ನು ಗ್ಯಾಲಕ್ಸಿ M12 ಫೋನ್ ಅಟ್ರ್ಯಾಕ್ಟಿವ್ ಬ್ಲ್ಯಾಕ್, ಎಲಿಗಂಟ್ ಬ್ಲೂ ಮತ್ತು ಟ್ರೆಂಡಿ ಎಮರ್ಡ್ ಗ್ರೀನ್ ಬಣ್ಣಗಳ ಆಯ್ಕೆಗಳಲ್ಲಿ ದೊರೆಯುತ್ತದೆ. ಅಂದಹಾಗೇ ಇದೇ ಮಾರ್ಚ್ 18 ರಂದು ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಪ್ರಮುಖ ಆನ್‌ಲೈನ್ ಶಾಪಿಂಗ್ ತಾಣಗಳಾದ ಅಮೆಜಾನ್, ಸ್ಯಾಮ್‌ಸಂಗ್.ಕಾಮ್ ಮೂಲಕ ಮಧ್ಯಾಹ್ನ 12 ಗಂಟೆಗೆ (ಮಧ್ಯಾಹ್ನ) ಖರೀದಿಗೆ ಲಭ್ಯವಾಗಲಿದೆ. ಅದೇ ಗ್ಯಾಲಕ್ಸಿ M11 4 ಜಿಬಿ + 64 ಜಿಬಿ ವೇರಿಯಂಟ್ ಸ್ಟೋರೇಜ್‌ನ ಬೆಲೆಯು 10,999ರೂ. ಆಗಿದೆ.
ಆಕರ್ಷಕ ಡಿಸ್‌ಪ್ಲೇ ರಚನೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, ಇದು TFT ಇನ್ಫಿನಿಟಿ-ವಿ-ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇ ರೀಫ್ರೇಶ್ ರೇಟ್ 90Hz ಆಗಿದೆ. ವಿಡಿಯೋ ವೀಕ್ಷಣೆಗೆ ಹಾಗೂ ಗೇಮಿಂಗ್‌ಗೆ ಪೂರಕವಾಗಿದೆ. ಅದೇ ರೀತಿ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 6.4 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಯನ್ನ ಹೊಂದಿದ್ದು, ಸ್ಕ್ರೀನ್ ಪಿಕ್ಸಲ್ ರೆಸಲ್ಯೂಶನ್ 720x1560 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯು ಇನ್‌ಫಿನಿಟಿ ಮಾದರಿಯಲ್ಲಿದ್ದು, 19.5:9 ಅನುಪಾತವನ್ನು ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ ಎಷ್ಟು
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಆಕ್ಟಾ-ಕೋರ್ ಎಕ್ಸಿನೋಸ್ 850SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಒನ್ ಯುಐ ಕೋರ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ 4GB RAM+64GB ಮತ್ತು 6GB RAM+128GB ವೇರಿಯೆಂಟ್ ಆಯ್ಕೆಯ ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಎಸ್‌ಡಿ ಕಾರ್ಡ್ ಮೂಲಕ 1TB ವರೆಗೂ ಬಾಹ್ಯ ಮೆಮೊರಿಯನ್ನು ವಿಸ್ತರಿಸುವ ಅವಕಾಶವನ್ನು ಇದು ಒಳಗೊಂಡಿದೆ. ಅದೇ ರೀತಿ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 439 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM + 32GB ಮತ್ತು 4GB RAM ಮತ್ತು 64GB ಆಂತರಿಕ ಸಂಗ್ರಹಣೆ ಸಾಮರ್ಥ್ಯದ ಆಯ್ಕೆಗಳಿವೆ.
ಕ್ಯಾಮೆರಾ ಸೆನ್ಸಾರ್ ಸ್ಪೆಷಲ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು f/2.0 ಅಪರ್ಚರ್ ನೊಂದಿಗೆ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾವು f/2.2 ಅಪರ್ಚರ್‌ನೊಂದಿಗೆ 5 ಮೆಗಾಪಿಕ್ಸೆಲ್ ಸೆನ್ಸಾರ್, ಅಲ್ಟ್ರಾ-ವೈಡ್-ಆಂಗಲ್ ಹೊಂದಿದೆ. ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರ್ ಇದ್ದು, f/2.2 ಅಪರ್ಚರ್ ಸಾಮರ್ಥ್ಯವನ್ನು ಒಳಗೊಂಡಿದೆ. ವಾಟರ್‌ಡ್ರಾಪ್ ಸ್ಕೈಲ್ ನಾಚ್ ಇದೆ. ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್, ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.
ಬ್ಯಾಟರಿ ಮತ್ತು ಇತರೆ ಸೌಲಭ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 4G ನೆಟ್‌ವರ್ಕ್‌ನಲ್ಲಿ 58 ಗಂಟೆಗಳ ಟಾಕ್‌ಟೈಮ್ ಅನ್ನು ನೀಡಲಿದೆ. ಈ ಫೋನ್ 164.0x75.9x9.7mm ಸುತ್ತಳತೆಯನ್ನು ಪಡೆದಿದ್ದು, ಹಾಗೆಯೇ 221 ಗ್ರಾಂ ತೂಕವನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4 ಜಿ ಎಲ್ ಟಿಇ, ವೈ-ಫೈ 802.11 ಬಿ / ಜಿ / ಎನ್, ಬ್ಲೂಟೂತ್ 5.0, ಜಿಪಿಎಸ್ / ಎ-ಜಿಪಿಎಸ್, ಯುಎಸ್ಬಿ ಟೈಪ್-ಸಿ, ಮತ್ತು 3.5 ಎಂಎಂ ಹೆಡ್ಫೋನ್ ಜ್ಯಾಕ್ ಸೇರಿವೆ. ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದರೊಂದಿಗೆ 15 W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನ ಒಳಗೊಂಡಿದೆ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999