ಇಂದು 'ಗ್ಯಾಲಾಕ್ಸಿ ಎಂ30' ಫ್ಲಾಶ್‌ಸೇಲ್!..ಖರೀದಿಗೆ ಏನೆಲ್ಲಾ ಆಫರ್?

|

ಭಾರತದಲ್ಲಿ ನಿರೀಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನ ಎರಡನೇ ಫ್ಲಾಶ್‌ಸೇಲ್ ಇಂದು ಆಯೋಜನೆಯಾಗಿದೆ. ಮೊಬೈಲ್ ಮಾರುಕಟ್ಟೆಗೆ ಅತ್ಯಂತ ಕಡಿಮೆ ಬೆಲೆಗೆ ಬಿಡುಗಡೆಯಾಗಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ಅನ್ನು 6 ತಿಂಗಳ ಕಾಲ ನೋ ಕಾಸ್ಟ್ ಇಎಂಐನಲ್ಲಿ ಅಮೆಜಾನ್‌ನಲ್ಲಿ ಇಂದು ಮಾರಾಟಕ್ಕೆ ಇಡಲಾಗಿದ್ದು, ಜಿಯೋವಿನಿಂದ 3110 ರೂ.ಗಳ ವರೆಗೂ ಡಬಲ್ ಡೇಟಾ ಆಫರ್ ಅನ್ನು ಸಹ ನೀಡಲಾಗಿದೆ.

ಇಂದು 'ಗ್ಯಾಲಾಕ್ಸಿ ಎಂ30' ಫ್ಲಾಶ್‌ಸೇಲ್!..ಖರೀದಿಗೆ ಏನೆಲ್ಲಾ ಆಫರ್?

5000mAh ಬ್ಯಾಟರಿ, 6.4-ಇಂಚಿನ ಪೂರ್ಣ ಹೆಚ್‌ಡಿ + ಸೂಪರ್ ಅಮೊಲೆಡ್ ಇನ್ಫಿನಿಟಿ ಡಿಸ್‌ಪ್ಲೇ, ಟ್ರಿಪಲ್ ರಿಯರ್ ಕ್ಯಾಮೆರಾ ಮತ್ತು ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ನಂತಹ ಅತ್ಯುತ್ತಮ ಫೀಚರ್ಸ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಕೇವಲ 14,990 ರೂ.ಗಳಿಂದ ಪ್ರಾರಂಭವಾಗಿರುವುದು ಮೊಬೈಲ್ ಪ್ರಿಯರಿಗೆ ಆಕರ್ಷಣೀಯವಾಗಿದೆ. ಹಾಗಾದರೆ, ಭಾರತದಲ್ಲಿ ಹವಾ ಎಬ್ಬಿಸಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನ ಫೀಚರ್ಸ್ ಯಾವುವು? ಸ್ಮಾರ್ಟ್‌ಫೋನ್ ವಿಶೇಷತೆಗಳೂ ಏನು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

'ಗ್ಯಾಲಾಕ್ಸಿ ಎಂ30' ವಿನ್ಯಾಸ!

'ಗ್ಯಾಲಾಕ್ಸಿ ಎಂ30' ವಿನ್ಯಾಸ!

ಭಾರತದ ಬಜೆಟ್ ಸ್ಮಾರ್ಟ್‌ಪೋನ್ ಪ್ರಿಯರನ್ನು ಬಹುವಾಗಿ ಸೆಳೆದಿರುವ ಡಿಸ್‌ಪ್ಲೇ ನೋಚ್ ಮತ್ತು 19.5:9 ಆಕಾರ ಅನುಪಾದಲ್ಲಿ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ವಿನ್ಯಾಸವಾಗಿದೆ. ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳು ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್‌ಫೋನ್ ಶೇ. 90 ಕ್ಕಿಂತ ಹೆಚ್ಚು ಸ್ಕ್ರೀನ್ ಹೊಂದಿರುವುದನ್ನು ನಾವು ನೋಡಬಹುದು.

'ಗ್ಯಾಲಾಕ್ಸಿ ಎಂ30' ಡಿಸ್‌ಪ್ಲೇ!

'ಗ್ಯಾಲಾಕ್ಸಿ ಎಂ30' ಡಿಸ್‌ಪ್ಲೇ!

'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ದೊಡ್ಡದಾದ ಸೂಪರ್ ಅಮೊಲೆಟ್ ಇನ್ಫಿನಿಟಿ ಡಿಸ್‌ಪ್ಲೇಯನ್ನು ಹೊಂದುವ ಮೂಲಕ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 6.4-ಇಂಚಿನ ಇಂಚಿನ ಪೂರ್ಣ ಹೆಚ್‌ಡಿ+ ಸೂಪರ್ ಅಮೊಲೆಡ್ ಇನ್ಫಿನಿಟಿ ಡಿಸ್‌ಪ್ಲೇಯು ವಾಟರ್‌ಡ್ರಾಪ್ ನೋಚ್ ವಿನ್ಯಾಸದಲ್ಲಿದ್ದು, 1080 x 2280 ಪಿಕ್ಸೆಲ್ಸ್ ಸಾಮರ್ಥ್ಯದಲ್ಲಿ ಮೊಬೈಲ್ ಪ್ರಿಯರನ್ನು ಸೆಳೆದಿದೆ.

'ಗ್ಯಾಲಾಕ್ಸಿ ಎಂ30' ಪ್ರೊಸೆಸರ್!

'ಗ್ಯಾಲಾಕ್ಸಿ ಎಂ30' ಪ್ರೊಸೆಸರ್!

ಡ್ಯುಯಲ್ ಸಿಮ್ (ನ್ಯಾನೋ + ನ್ಯಾನೋ) ಸ್ಮಾರ್ಟ್‌ಫೋನ್ ಆಗಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಸ್ಯಾಮ್ಸಂಗ್ ಎಕ್ಸ್‌ಪೀರಿಯೆನ್ಸ್ v9.5 ಮೂಲಕ ಆಂಡ್ರಾಯ್ಡ್ 8.1 ಓರಿಯೋ ಆಧರಿಸಿ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಆಂಡ್ರಾಯ್ಡ್ ಪೈಗೆ ಅಪ್‌ಡೇಟ್ ಆಗಲಿದೆ.

'ಗ್ಯಾಲಾಕ್ಸಿ ಎಂ30' RAM ಮತ್ತು ROM

'ಗ್ಯಾಲಾಕ್ಸಿ ಎಂ30' RAM ಮತ್ತು ROM

ಆಕ್ಟಾ-ಕೋರ್ ಎಕ್ಸನೋಸ್ 7904 ಪ್ರೊಸೆಸರ್ ಅನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಫೋನ್ 4GB RAM ಮತ್ತು 64GB ROM (ಆಂತರಿಕ ಸಂಗ್ರಹ) ಮತ್ತು 6GB RAM ಮತ್ತು 128GB ROM (ಆಂತರಿಕ ಸಂಗ್ರಹ)ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ 512GB ವರೆಗೆ ಸ್ಮಾರ್ಟ್‌ಫೋನ್ ಮೆಮೊರಿಯನ್ನು ವಿಸ್ತರಿಸಬಹುದಾಗಿದೆ.

'ಗ್ಯಾಲಾಕ್ಸಿ ಎಂ30' ರಿಯರ್ ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎಂ30' ರಿಯರ್ ಕ್ಯಾಮೆರಾಗಳು!

'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನ್ ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿದ್ದು, f /1.9ದ್ಯುತಿರಂಧ್ರದಲ್ಲಿ 13 ಮೆಗಾಪಿಕ್ಸೆಲ್ ಪ್ರಾಥಮಿಕ RGB ಸಂವೇದಕ ಮತ್ತು 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಆಳ ಸಂವೇದಕ ಹಾಗೂ ಎಫ್ / 2.2 ಅಪರ್ಚರ್ನೊಂದಿಗೆ 5 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಸಂವೇದಕಗಳು ಹಿಂಬಾಗದ ಕ್ಯಾಮೆರಾ ವಿಭಾಗದಲ್ಲಿ ಅಲಂಕರಿತವಾಗಿವೆ.

'ಗ್ಯಾಲಾಕ್ಸಿ ಎಂ30' ಸೆಲ್ಫೀ ಕ್ಯಾಮೆರಾ

'ಗ್ಯಾಲಾಕ್ಸಿ ಎಂ30' ಸೆಲ್ಫೀ ಕ್ಯಾಮೆರಾ

ಹಿಂಬಾಗದಲ್ಲಿ ಮೂರು ಕ್ಯಾಮೆರಾಗಳನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಫೋನಿನಲ್ಲಿ 123-ಡಿಗ್ರಿ ಫೀಲ್ಡ್-ಆಫ್-ವ್ಯೂ (ಎಫ್ಒವಿ) ಮತ್ತು ಎಫ್ / 2.2 ಅಪರ್ಚರ್ ಸಾಮರ್ಥ್ಯದಲ್ಲಿ 16-ಮೆಗಾಪಿಕ್ಸೆಲ್ ಸಂವೇದಕದ ಅತ್ಯುತ್ತಮ ಸೆಲ್ಪೀ ಕ್ಯಾಮೆರಾವನ್ನು ನೀಡಲಾಗಿದೆ. ಕೃತಕ ಬುದ್ದಿಮತ್ತೆ ಜೊತೆಗೆ 123-ಡಿಗ್ರಿ ಫೀಲ್ಡ್-ಆಫ್-ವ್ಯೂ ಫೀಚರ್ ಸೆಲ್ಫೀ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ.

'ಗ್ಯಾಲಾಕ್ಸಿ ಎಂ30' ಬ್ಯಾಟರಿ!

'ಗ್ಯಾಲಾಕ್ಸಿ ಎಂ30' ಬ್ಯಾಟರಿ!

ಭಾರತೀಯರು ಬಹುಮುಖ್ಯವಾಗಿ ಬಯಸುವ ಬ್ಯಾಟರಿ ಬಾಳಿಕೆ ಶಕ್ತಿಯಲ್ಲಿ 'ಗ್ಯಾಲಾಕ್ಸಿ ಎಂ30' ಇದೀಗ ಮೊದಲ ಸ್ಥಾನಕ್ಕೆ ಬಂದುನಿಂತಿದೆ. 15 ಸಾವಿರ ರೂ. ಒಳಗಿನ ಈ ಫೋನಿನಲ್ಲಿ 5,000 ಎಮ್ಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. 15ಡಿ ಚಾರ್ಜರ್ ಮೂಲಕ ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿರುವುದು ಬ್ಯಾಟರಿ ಮತ್ತೊಂದು ವಿಶೇಷತೆಯಾಗಿದೆ.

'ಗ್ಯಾಲಾಕ್ಸಿ ಎಂ30' ಫೇಸ್ ಅನ್ಲಾಕ್

'ಗ್ಯಾಲಾಕ್ಸಿ ಎಂ30' ಫೇಸ್ ಅನ್ಲಾಕ್

ಹಿಂಬಾಗದಲ್ಲಿ ಫಿಂಗರ್ಪ್ರಿಂಟ್ ಸ್ಕ್ಯಾನರ್ ಆಯ್ಕೆಯನ್ನು ಹೊಂದಿರುವ 'ಗ್ಯಾಲಾಕ್ಸಿ ಎಂ30' ಸ್ಮಾರ್ಟ್‌ಪೊನಿನಲ್ಲಿ ಮತ್ತು ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಸಹ ತರಲಾಗಿದೆ. ಜತೆಗೆ ವೈಡ್ವೈನ್ ಎಲ್ 1 ಪ್ರಮಾಣೀಕರಣದೊಂದಿಗೆ ಬಂದಿರುವ ಈ ಸ್ಮಾರ್ಟ್‌ಫೋನ್ ಬಳಕೆದಾರರು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವೀಡಿಯೊಗಳನ್ನು ಸಹ ಹೆಚ್‌ಡಿ ಸ್ಟ್ರೀಮ್ ಮಾಡಬಹುದಾಗಿದೆ.

'ಗ್ಯಾಲಾಕ್ಸಿ ಎಂ30' ಬೆಲೆಗಳು!

'ಗ್ಯಾಲಾಕ್ಸಿ ಎಂ30' ಬೆಲೆಗಳು!

4GB RAM ಮತ್ತು 64GB ROM (ಆಂತರಿಕ ಸಂಗ್ರಹ) ಮತ್ತು 6GB RAM ಮತ್ತು 128GB ROM (ಆಂತರಿಕ ಸಂಗ್ರಹ)ದ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿರುವ 'ಗ್ಯಾಲಾಕ್ಸಿ ಎಂ30' ಬೆಲೆಗಳು 14,990 ರೂ.ಗಳಿಂದ ಪ್ರಾರಂಭವಾಗಿವೆ. 4GB RAM ವೆರಿಯಂಟ್ ಪೋನ್ ಬೆಲೆ 14,990 ರೂ. ಆದರೆ, 6GB RAM ವೆರಿಯಂಟ್ ಪೋನ್ ಬೆಲೆ 17,990 ರೂ.ಗಳಾಗಿವೆ.

Best Mobiles in India

English summary
Samsung Galaxy M30 to Go on Sale for Second Time on March 12. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X