Home
ಮೊಬೈಲ್

ದೇಶದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಎಂಟ್ರಿ!

ಈ ತಿಂಗಳ ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಬಿಡುಗಡೆಯಾಗಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಔಪಚಾರಿಕವಾಗಿ ಭಾರತದಲ್ಲಿ ಇಂದು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಆಯೋಜನೆಯಾಗಿದ್ದ ಮೊಬೈಲ್ ಬಿಡುಗಡೆ ಸಮಾರಂಭದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಅನಾವರಣಗೊಳಿಸಿದ್ದು, ಇಂದಿನಿಂದಲೇ ಪೂರ್ವ-ಆದೇಶಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.

ದೇಶದ ಮಾರುಕಟ್ಟೆಗೆ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಎಂಟ್ರಿ!

ಭಾರತದ ಗ್ರಾಹಕರನ್ನು ಆಕರ್ಷಿಸಲು ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಎರಡೂ ಫೋನ್‌ಗಳು ನಾಲ್ಕು ಭಾರತೀಯ ಭಾಷೆಗಳಿಗೆ ಎಸ್ ಪೆನ್ ಕೈಬರಹ ಗುರುತಿಸುವಿಕೆ ಬೆಂಬಲವನ್ನು ತರಲಾಗಿದೆ. ದೇಶದಲ್ಲಿ ಗ್ಯಾಲಕ್ಸಿ ನೋಟ್ 10 (ಏಕೈಕ 8 ಜಿಬಿ RAM + 256GB ರೂಪಾಂತರ) ಬೆಲೆ ರೂ 69,999 ರೂ.ಗಳಾದರೆ, 12 ಜಿಬಿ RAM + 256 ಜಿಬಿ ಸ್ಟೋರೇಜ್ ರೂಪಾಂತರದ ಗ್ಯಾಲಕ್ಸಿ ನೋಟ್ 10+ ಬೆಲೆ 79,999 ರೂ. ಹಾಗೆಯೇ, 512 ಜಿಬಿ ಸ್ಟೋರೇಜ್ ರೂಪಾಂತರದ ಬೆಲೆ 89,999 ರೂಪಾಯಿಗಳಾಗಿವೆ.

ಬ್ಲ್ಯಾಕ್, ಗ್ಲೋ ಮತ್ತು ವೈಟ್ ಬಣ್ಣ ಆಯ್ಕೆಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಪೋನ್‌ಗಳು ಖರೀದಿಗೆ ಲಭ್ಯವಿವೆ. ಇದಲ್ಲದೆ, ಗ್ಯಾಲಕ್ಸಿ ನೋಟ್ 10 ನಿರ್ದಿಷ್ಟವಾಗಿ ರೆಡ್ ಕಲರ್ ರೂಪಾಂತರದಲ್ಲಿ ಲಭ್ಯವಿರಲಿದೆ ಎಂದು ಕಂಪೆನಿ ತಿಳಿಸಿದೆ. ಹಾಗಾದರೆ, ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಸ್ಮಾರ್ಟ್‌ಪೋನ್‌ಗಳು ಹೇಗಿವೆ?, ಎರಡೂ ಸ್ಮಾರ್ಟ್‌ಪೋನ್‌ಗಳ ಹೊಂದಿರುವ ಪ್ರಮುಖ ಫೀಚರ್ಸ್ ಯಾವುವು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಪರದೆ ಮತ್ತು ರೆಸಲ್ಯೂಶನ್

ಪರದೆ ಮತ್ತು ರೆಸಲ್ಯೂಶನ್

ಗ್ಯಾಲಕ್ಸಿ ನೋಟ್ 10 ಎಫ್‌ಹೆಚ್‌ಡಿ + (ಪಿಎಚ್‌ಪಿ) ಯೊಂದಿಗೆ 6.3-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದರೆ, ಗ್ಯಾಲಕ್ಸಿ ನೋಟ್ 10+ ಕ್ಯೂಎಚ್‌ಡಿ + (2 ಕೆ) ರೆಸಲ್ಯೂಶನ್‌ನೊಂದಿಗೆ 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಎರಡೂ ಫೋನ್‌ಗಳು ಪರದೆಯ ನಾಲ್ಕು ಬದಿಗಳಲ್ಲಿ ಕನಿಷ್ಠ ಬೆಜೆಲ್‌ಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಇನ್ಫಿನಿಟಿ-ನೋಚ್ ವಿನ್ಯಾಸದಲ್ಲಿ ಕಂಗೊಳಿಸುತ್ತಿವೆ.

ಎಕ್ಸಿನೋಸ್ 9825 ಪ್ರೊಸೆಸರ್

ಎಕ್ಸಿನೋಸ್ 9825 ಪ್ರೊಸೆಸರ್

ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ನಡುವೆ ಅನೇಕ ಹಾರ್ಡ್‌ವೇರ್ ಹೋಲಿಕೆಗಳಿವೆ. ಎರಡೂ ಫೋನ್‌ಗಳಲ್ಲಿ ಎಕ್ಸಿನೋಸ್ 9825 ಪ್ರೊಸೆಸರ್ ಅನ್ನು ಅಳವಡಿಸಲಾಗಿದ್ದು, ಎಸ್ ಪೆನ್ ಬೆಂಬಲದೊಂದಿಗೆ ಬರುತ್ತವೆ ಮತ್ತು ಆಂಡ್ರಾಯ್ಡ್ ಪೈ ಆಧಾರಿತ ಒನ್ ಯುಐ ಮೂಲಕ ರನ್ ಆಗಲಿವೆ.

ಕ್ಯಾಮೆರಾಗಳು ಮತ್ತು ಇಮೇಜಿಂಗ್

ಕ್ಯಾಮೆರಾಗಳು ಮತ್ತು ಇಮೇಜಿಂಗ್

ಎರಡೂ ಮಾದರಿಗಳು ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. 12 ಎಂಪಿ ಸ್ಟ್ಯಾಂಡರ್ಡ್ ಸೆನ್ಸಾರ್, 16 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿವೆ. ಈ ಸಂವೇದಕಗಳ ಜೊತೆಗೆ, ನೋಟ್ 10+ ನಲ್ಲಿ 3D ಟೊಎಫ್ ಸಂವೇದಕವಿದೆ, ಇದು 3D ಮಾದರಿಗಳನ್ನು ರಚಿಸಲು ನೈಜ-ಜೀವನದ ವಸ್ತುಗಳನ್ನು ಸ್ಕ್ಯಾನ್ ಮಾಡಬಹುದು.

RAM ಮತ್ತು ಸಂಗ್ರಹಣೆ

RAM ಮತ್ತು ಸಂಗ್ರಹಣೆ

ಗ್ಯಾಲಕ್ಸಿ ನೋಟ್ 10 ಫೋನ್ 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಆರಂಭಿಕ ಮಾದರಿಯಲ್ಲಿ ಬಿಡುಗಡೆಯಾಗಿದೆ. ಹಾಗೆಯೇ ಗ್ಯಾಲಕ್ಸಿ ನೋಟ್ 10+ 12 ಜಿಬಿ RAM ಮತ್ತು 512 ಜಿಬಿ ಸ್ಟೋರೇಜ್‌ನೊಂದಿಗೆ ಲಭ್ಯವಿರುತ್ತದೆ. ನೋಟ್ 10+ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದ್ದು, ಇದು 1 ಟಿಬಿ ವರೆಗೆ ಸಂಗ್ರಹ ವಿಸ್ತರಣೆಯನ್ನು ಬೆಂಬಲಿಸುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಬ್ಯಾಟರಿ ಮತ್ತು ಚಾರ್ಜಿಂಗ್

ಗ್ಯಾಲಕ್ಸಿ ನೋಟ್ 10 3400 mAh ಬ್ಯಾಟರಿಯೊಂದಿಗೆ 25W ವೇಗದ ಚಾರ್ಜಿಂಗ್ ಫೀಚರ್ ಅನ್ನು ಹೊಂದಿದೆ. ಗ್ಯಾಲಕ್ಸಿ ನೋಟ್ 10+ ಗಮನಾರ್ಹವಾಗಿ 4300 mAh ಬ್ಯಾಟರಿಯನ್ನು ಹೊಂದಿದೆ. ಇದರ ಜೊತೆಗೆ, ಗ್ಯಾಲಕ್ಸಿ ನೋಟ್ 10+ 45W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

Best Mobiles in India

English summary
The Galaxy Note 10 and Galaxy Note 10+ both bring S Pen handwriting recognition support for four Indian languages.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+