Subscribe to Gizbot

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಮಾರಾಟ ಭಾರತದಲ್ಲಿ ವಿಳಂಬ!

Written By:

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಕಳೆದ ತಿಂಗಳು ಲಾಂಚ್‌ ಮಾಡಿತ್ತು. ಅಂದಹಾಗೆ ಕಳೆದ ತಿಂಗಳು ಲಾಂಚ್‌ ಆಗಿದ್ದ ಡಿವೈಸ್‌ ಮಾರಾಟ ಪ್ರಕ್ರಿಯೆ ಇಂದಿನಿಂದ (ಸೆಪ್ಟೆಂಬರ್‌ 2) ಆರಂಭವಾಗಲು ನಿಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಡಿವೈಸ್‌ ಮಾರಾಟ ಆರಂಭವಾಗಿಲ್ಲ. 'ಗ್ಯಾಲಕ್ಸಿ ನೋಟ್‌ 7' ಖರೀದಿಸಲು ಆಸಕ್ತಿ ಹೊಂದಿರುವವರು ಕಾಯಬೇಕಾಗಿದೆ. ಅಲ್ಲದೇ ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರಾಟ ವಿಳಂಬಕ್ಕೆ ನಿಖರವಾದ ಕಾರಣಗಳು ತಿಳಿದುಬಂದಿಲ್ಲ.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಮಾರಾಟ ಭಾರತದಲ್ಲಿ ವಿಳಂಬ!

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್‌ 7' ಖರೀದಿಸಲು ಡಿವೈಸ್ ಬುಕ್‌ ಮಾಡಿದ್ದ ಹಲವರು ಗ್ರಾಹಕರು ಡಿವೈಸ್‌ ತಲುಪುವುದು ವಿಳಂಬವಾಗುವುದರ ಬಗ್ಗೆ ಮೆಸೇಜ್‌ ಅನ್ನು ಪಡೆದಿರುವ ಬಗ್ಗೆ ತಿಳಿಯಲಾಗಿದೆ. ದೆಹಲಿ ಮತ್ತು ಮುಂಬೈನ ಹಲವು ಸ್ಯಾಮ್‌ಸಂಗ್‌ ರೀಟೆಲ್‌ ಸ್ಟೋರ್‌ಗಳು ಸಹ ಡಿವೈಸ್‌ಗಳು ಬರುವುದು ವಿಳಂಬವಾಗುವುದರ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಸ್ಯಾಮ್‌ಸಂಗ್‌ ಪ್ರಸ್ತುತದಲ್ಲಿ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಳ್ಳುವ ವರದಿಗಳ ಆಧಾರದಿಂದ ಡಿವೈಸ್ ನಿಯಂತ್ರಣ ಪರಿಶೀಲನೆ ನಡೆಸುತ್ತಿದೆ. ಡಿವೈಸ್‌‌ಗಳು ಬೆಂಕಿಯಿಂದ ಸ್ಫೋಟಗೊಳ್ಳುತ್ತಿದ್ದ ಕಾರಣದಿಂದ ಬಳಕೆದಾರರ ಜೀವಕ್ಕೆ ಅಪಾಯವಾಗುತ್ತಿತ್ತು. ದಕ್ಷಿಣ ಕೊರಿಯಾದಲ್ಲಿ 'ಗ್ಯಾಲಕ್ಸಿ ನೋಟ್‌ 7' ಬೆಂಕಿ ಹೊತ್ತಿಕೊಂಡ ಹಲವು ವರದಿಗಳು ಆಗಿದ್ದವು. ಗ್ರಾಹಕರು ಡಿವೈಸ್‌ಗಳು ಕಾರಣವಿಲ್ಲದೇ ಕ್ರ್ಯಾಶ್‌ ಆದ ಬಗ್ಗೆ ಸಹ ವರದಿ ಮಾಡಿದ್ದರು.

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಮಾರಾಟ ಭಾರತದಲ್ಲಿ ವಿಳಂಬ!

ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ನೋಟ್ 7' ಭಾರತದಲ್ಲಿ ರೂ.59,900 ಗೆ ಲಾಂಚ್‌ ಆಗಿತ್ತು. 'ಗ್ಯಾಲಕ್ಸಿ ನೋಟ್ 7' 5.7 ಇಂಚಿನ QHD ಸೂಪರ್‌ ಅಮೋಲ್ಡ್ ಡ್ಯುಯಲ್‌ ಎಡ್ಜ್ ಬಾಗಿದ ಡಿಸ್‌ಪ್ಲೇ, ಕಾರ್ನಿಂಗ್‌ ಗೊರಿಲ್ಲಾ ಗ್ಲಾಸ್‌ 5 ಸುರಕ್ಷತೆ, ಮತ್ತು ಎಕ್ಸಿನೊಸ್‌ 8890 64 ಬಿಟ್ ಆಕ್ಟಾ ಕೋರ್‌ ಪ್ರೊಸೆಸರ್‌ ಚಾಲಿತವಾಗಿದ್ದು ಜೊತೆಗೆ 4GB RAM ಫೀಚರ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್‌ ಇಯರ್‌ಫೋನ್‌ ಬಳಸುತ್ತಿದ್ದೀರಾ? ಹಾಗಿದ್ರೆ ನೀವ್ ತುಂಬಾ ಸ್ಪೆಷಲ್‌!

 

English summary
Samsung Galaxy Note 7 India sale delayed amid global recall reports. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot