ಐಫೋನ್ 8 ಬಿಡುಗಡೆಯಂದೆ ಸ್ಯಾಮ್‌ಸಂಗ್‌ನಿಂದ ಮತ್ತೊಂದು ಟಾಪ್ ಎಂಡ್ ಫೋನ್ ಲಾಂಚ್..!!
ಆಪಲ್ iOS ಬಳಕೆ ಮಾಡಿಕೊಂಡರೆ ಸ್ಯಾಮ್‌ಸಂಗ್ ಆಂಡ್ರಾಯ್ಡ್ ಬಳಕೆ ಮಾಡಿಕೊಂಡು ಟಾಪ್‌ಎಂಡ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಸೆ. 12 ರಂದು ಮತ್ತೇ ಈ ಎರಡು ಕಂಪನಿಗಳು ಎದುರುಬದುರಾಗಲಿವೆ.
ಆಪಲ್ ಮತ್ತು ಸ್ಯಾಮ್‌ಸಂಗ್ ನಡುವೆ ಬಹಳ ಹಿಂದಿನಿಂದಲೂ ನೇರಾ ನೇರಾ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಆಪಲ್ iOS ಬಳಕೆ ಮಾಡಿಕೊಂಡರೆ ಸ್ಯಾಮ್‌ಸಂಗ್ ಆಂಡ್ರಾಯ್ಡ್ ಬಳಕೆ ಮಾಡಿಕೊಂಡು ಟಾಪ್ ಎಂಡ್ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಇದೇ ಮಾದರಿಯಲ್ಲಿ ಸೆ. 12 ರಂದು ಮತ್ತೇ ಈ ಎರಡು ಕಂಪನಿಗಳು ಎದುರುಬದುರಾಗಲಿವೆ.

ಓದಿರಿ: 90 GB ಆಫರ್ ಕೊಟ್ಟ BSNL, ಜೊತೆಗೆ ಉಚಿತ ಕರೆ: ಬೆಲೆ?
ಒಟ್ಟಿನಲ್ಲಿ ಸ್ಮಾರ್ಟ್‌ಫೋನ್ ಪ್ರಿಯರಿಗೆ ಸೆ.12 ಅತ್ಯಂತ ಸಂಭ್ರಮದ ದಿನವಾಗಲಿದ್ದು, ವಿಶ್ವದ ಟಾಪ್ ಎರಡು ಮೊಬೈಲ್ ತಯಾರಿಕಾ ಕಂಪನಿಗಳು ತಮ್ಮ ಟಾಪ್ ಎಂಡ್ ಫೋನ್‌ಗಳನ್ನು ಅಂದು ಲಾಂಚ್ ಮಾಡಲಿದ್ದು, ಈಗಾಗಲೆ ಈ ಫೋನ್‌ಗಳಲ್ಲಿ ಯಾವ ಆಯ್ಕೆಗಳಿರಲಿದೆ ಎನ್ನುವುದರ ಕುತೂಹಲತೆಯೂ ಹೆಚ್ಚಾಗಿದೆ.

ಗ್ಯಾಲೆಕ್ಸಿ ನೋಟ್ 8 V/s ಐಫೋನ್ 8:
ಸೆಪ್ಟೆಂಬರ್ 12 ರಂದು ಗ್ಯಾಲೆಕ್ಸಿ ನೋಟ್ 8 ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಅದುವೇ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಯಾಗಲಿದೆ. ಅಂದೇ ಕ್ಯಾಲಿಫೊರ್ನಿಯದಲ್ಲಿ ನಡಯುವ ಕಾರ್ಯಕ್ರಮದಲ್ಲಿ ಆಪಲ್ ತನ್ನ ಐಫೋನ್ 8 ಬಿಡುಗಡೆ ಮಾಡಲಿದೆ.

ಗ್ಯಾಲೆಕ್ಸಿ ನೋಟ್ 8 ವಿಶೇಷತೆಗಳೇನು.?
ಈಗಾಗಲೇ ಈ ಫೋನ್ ಸೌಥ್ ಕೋರಿಯಾದಲ್ಲಿ ಲಾಂಚ್ ಆಗಿದ್ದು, ಭಾರತದಲ್ಲಿ ಸೆಪ್ಟೆಂಬರ್ ನಲ್ಲಿ ಕಾಣಿಸಿಕೊಳ್ಳಲಿದೆ. ಈ ಫೋನಿನಲ್ಲಿ ಇನ್ಫಿನಿಟಿ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 6.3 ಇಂಚಿನ ಡಿಸ್‌ಪ್ಲೇ ಇದಾಗಿದೆ. ಇದರಲ್ಲಿ 6GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದು.

ಇದರಲ್ಲಿದೆ ಡ್ಯುಯಲ್ ಕ್ಯಾಮೆರಾ ಇದೆ:
ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದ್ದು, ಇದೇ ಮಾದರಿಯಲ್ಲಿ ಆಪಲ್ ಐಫೋnf 8 ನಲ್ಲಿಯೂ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗಿದೆ. ಗ್ಯಾಲೆಕ್ಸಿ ನೋಟ್ 8 ನ ಮುಂಭಾಗದಲ್ಲಿ 8MP ಕ್ಯಾಮೆರಾ ನೀಡಲಾಗಿದೆ. ಜೊತೆಗೆ S ಪೆನ್ ಸಹ ನಿಡಲಾಗಿದೆ.


Click it and Unblock the Notifications








